ಬಿಸಿ ಬಿಸಿ ಸುದ್ದಿ

ಶರಣರ ಬದುಕು ಮತ್ತು ವಚನಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ: ವಿಶ್ವಾರಾಧ್ಯ ಸತ್ಯಂಪೇಟೆ

ಜೇವರ್ಗಿ: ಹನ್ನೆರಡನೆಯ ಶತಮಾನದ ಬಸವಾದಿ ಶರಣರ ವಚನಗಳು ನಮ್ಮ ಬದುಕನ್ನು ಕಟ್ಟಿಕೊಡುತ್ತವೆ, ವ್ಯಕ್ತಿತ್ವವನ್ನು ರೂಪಿಸುತ್ತವೆ. ಸಚ್ಚಾರಿತ್ರ್ಯವಂತರಾಗಿ ಬಾಳಿ ಬದುಕಲು ವಚನಗಳು ಉತ್ತೇಜನ ನೀಡುತ್ತವೆ ಎಂದು ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷರಾದ ವಿಶ್ವಾರಾಧ್ಯ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಸ್ಥಳೀಯ ಬಸವ ಕೇಂದ್ರ ತಿಂಗಳ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಶರಣರ ವಚನಗಳಿಂದ ನಮ್ಮ ಬದುಕನ್ನು ರೂಪಿಸಿಕೊಳ್ಳುವುದು ಹೇಗೆ ?’ ಎಂಬ ವಿಷಯ ಕುರಿತು ಮಾತನಾಡಿದರು. ಶರಣರ ಬದುಕು ಹಾಗೂ ಬೋಧೆಗಳಿಂದ ಪ್ರತಿಯೊಬ್ಬ ಮನುಷ್ಯನೊಳಗಿರುವ ಅಂತಃಕರಣ ಜಾಗೃತಿಗೊಳ್ಳುತ್ತದೆ. ಪರಸ್ಪರ ಪ್ರೀತಿ ವಿಶ್ವಾಗಳು ಒಡಮೂಡಿ ಇವನಾರವ ಇವನಾರವ ಎಂದು ದೂರಿಕರೀಸದೆ ಸಕಲ ಜೀವಾತ್ಮರಿಗೂ ಲೇಸ ಬಯಸುವ ಮನಸ್ಸು ರೂಪುಗೊಳ್ಳುತ್ತದೆ. ಇಷ್ಟಲಿಂಗ ಎಂಬ ಅರಿವಿನ ಪೂಜೆಯ ಮೂಲಕ ನಮ್ಮೊಳಗಿನ ಅಜ್ಞಾನದ ಕತ್ತಲು ಹರಿದು ಬೆಳಕಿನ ಸೂರ್ಯ ಹುಟ್ಟುತ್ತಾನೆ. ಆಗ ದೇವರು ಧರ್ಮದ ಹೆಸರಿನ ಮೇಲೆ ನಡೆಸುವ ಶೋಷಣೆ ತಪ್ಪುತ್ತದೆ ಎಂದವರು ಸಭೆಗೆ ವಿವರಿಸಿದರು.

ಮುಂದುವರೆದು ಮಾತನಾಡಿದ ಅವರು ವಿಶ್ವ ಸಚರಾಚರ ಸೃಷ್ಠಿಗೂ ದೇವರೆ ಕಾರಣ ಎಂದಾದ ಮೇಲೆ ಆ ದೇವರು ನಮ್ಮಿಂದ ಏನಾದರೂ ಬಯಸಲು ಸಾಧ್ಯವೆ ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಇಳೆ ಮಳೆ ಬೆಳೆ ಎಲ್ಲವೂ ದೇವರ ಕೊಡುಗೆಯಾದ ಮೇಲೆ ಆತನಿಗೆ ಅರ್ಪಿಸಬೇಕಾದುದು ನಮ್ಮ ತನುವನ್ನು ಮಾತ್ರ. ಆದ್ದರಿಂದಲೆ ಶರಣರು ಸಜ್ಜನಳಾಗಿ ಮಜ್ಜನಕ್ಕೆರೆವೆ ಶಾಂತಳಾಗಿ ಪೂಜೆಯ ಮಾಡುವೆ ಸಮರತಿಯಿಂದ ನಿಮ್ಮಯ ಹಾಡುವೆ ಎಂದು ಮೈದುಂಬಿ ಹೇಳಿದ್ದಾರೆ.

ಸತ್ಯ ಶುದ್ಧ ಕಾಯಕ ನಿತ್ಯ ಲಿಂಗಾರ್ಚನೆ ಮಾಡುವವರಿಗೆ ಯಾವದೆ ಬಾಧೆಗಳು ಕಾಡಲಾರವು. ಕಷ್ಟಗಳು ಬರಲಾರವು. ಬಂದರೂ ಅವನ್ನು ಎದುರಿಸುವ ಎದೆಗಾರಿಕೆ ವಚನ ಸಾಹಿತ್ಯ ನಮಗೆಲ್ಲ ಕಲಿಸಿಕೊಡುತ್ತದೆ. ಪುರೋಹಿತರ ಕಪಿಮುಷ್ಠಿಯಲ್ಲಿ ಸಿಕ್ಕು ಹಾಕಿಕೊಂಡಿರುವ ಜನತೆ ಜ್ಞಾನದ ಮೇರುಗಿರಿಯನ್ನು ಏರಬೇಕಾದರೆ ವಚನ ಸಾಹಿತ್ಯ ನಮ್ಮನ್ನು ಕಡೆಗೀಲಾಗಿ ಕಾಪಾಡುತ್ತವೆ. ಉಣಲು ಉಡಲು ಮಾತಾಡಲು ಬದುಕಲು ಕಲಿಸಿದ ಸಾಹಿತ್ಯ ಕನ್ನಡ ಭಾಷೆಯಲ್ಲಿ ಇದೆ ಎಂಬುದೆ ನಮ್ಮ ಹೆಮ್ಮೆ. ಶರಣರಂತೆ ಸದುವಿನಯ ಸಂಪನ್ನರಾಗಿ ನಡೆದರೆ ನಮ್ಮ ಬಾಳು ಬಂಗಾರವಾಗುವುದಲ್ಲಿ ಯಾವುದೆ ಅನುಮಾನವಿಲ್ಲ. ಶರಣರ ಸಂಗ ಹಾಗೂ ವಚನಗಳು ನಮಗೆಲ್ಲ ಗಟ್ಟಿಯಾದ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತವೆ ಎಂದು ಸಭೆಗೆ ತಿಳಿಸಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಕಲಬುರ್ಗಿ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ರಾಜಶೇಖರ ಯಂಕಂಚಿ ಮಾತನಾಡಿ : ಶರಣರ ಜೀವನ ಮೌಲ್ಯಗಳು ನಮ್ಮೆಲ್ಲರ ಊರುಗೋಲಾದರೆ ಸಮಾಜದ ತುಂಬ ಪ್ರೀತಿ ವಿಶ್ವಾಸಗಳು ಹರಿದಾಡುತ್ತವೆ. ವೈಚಾರಿಕ ಹಾಗೂ ವೈಜ್ಞಾನಿಕವಾಗಿರುವ ಶರಣರ ವಚನಗಳು ಸಾರ್ವಕಾಲಿಕ ಸತ್ಯಗಳು. ಸತ್ಯದ ಕೂರಲಗನು ಹಿಡಿದು ಶರಣರು ತಮ್ಮ ಬದುಕನ್ನು ಜೀವಂತಿಕೆಯಿಂದ ಜೀವಿಸಿದರು. ಬಸವಾದಿ ಶರಣರು ಕಟ್ಟಿದ ಲಿಂಗಾಯತ ಧರ್ಮದ ತತ್ವಗಳನ್ನು ಜನ ಮಾನಸಕ್ಕೆ ಮುಟ್ಟಿಸುವ ಹೊಣೆ ನಮ್ಮೆಲ್ಲರದಾಗಿದೆ. ಆದರೆ ಪಟ್ಟಭದ್ರಶಕ್ತಿಗಳು ಹಾಗೂ ಸನಾತನಿಗಳು ಲಿಂಗಾಯತ ಧರ್ಮಕ್ಕೆ ಅಡ್ಡಿಯನ್ನು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.

ಜೇವರ್ಗಿ ಬಸವ ಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿ , ನಿರಂತರವಾದ ವಚಗಳ ಓದಿನಿಂದ ನಮ್ಮ ಬದುಕು ಬದಲಾಗುತ್ತದೆ. ವಚನಗಳಲ್ಲಿ ಅರಿವಿನ ಕಣಜವಿದೆ. ವಿಜ್ಞಾನ ವೈಚಾರಿಕತೆ, ಆತ್ಮ ವಿಮರ್ಶೆಗಳ ಮೂಲಕ ಮನುಷ್ಯ ದೇವನಾಗಬಹುದು ಎಂಬುದನ್ನು ಶರಣರು ಹೇಳಿಕೊಟ್ಟಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ಮಹಾನಂದ ಹುಗ್ಗಿ ವಚನ ಪ್ರಾರ್ಥನೆ ಮಾಡಿದರು. ಶ್ರೀಮಂತ ಹೊನ್ನಳ್ಳಿ ನಿರೂಪಿಸಿದರು. ಶಿವನಗೌಡ ಪಾಟೀಲ ಕಲ್ಲಹಂಗರಗಿ ಸ್ವಾಗತಿಸಿದರು. ಶಿವಕುಮಾರಕಲ್ಲಾ ವಂದಿಸಿದರು.

ಸಭೆಯಲ್ಲಿ ಅವ್ವನಗೌಡ ಪಾಟೀಲ, ಶಿವಶರಣ ದೇಗಾಂವ, ಈರಣ್ಣ ಭೂತನೂರ, ಮಲ್ಲಣ್ಣಗೌಡ ಯತ್ನಾಳ, ಬಂಡೆಪ್ಪ ಹಾಗರಗಿ, ಕವಿತಾ ಮಕ್ಕಳ ಕೇಂದ್ರ, ತ್ರಿವೇಣಿ ಕುಳಗೇರಿ, ಪಂಪಣ್ಣಗೌಡ ಮಳಗ, ಷಣ್ಮುಖ ಜೈನ ಹಾಗೂ ನೀಲಾಂಬಿಕೆ ಬಳಗದ ಸದಸ್ಯರು ಉಪಸ್ಥಿತರಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

9 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

9 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

9 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

9 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420