ಬಿಸಿ ಬಿಸಿ ಸುದ್ದಿ

ಶಿಕ್ಷಣದಿಂದ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆ ಸಾಧ್ಯ: ರಾಜು ಹಿರೇಮಠ

ಕಲಬುರಗಿ: ಶಿಕ್ಷಣದಿಂದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾದ್ಯ ಎಂದು ರಾಜ್ಯ ಬೇಡ ಜಂಗಮರ ಯುವ ಸಂಘಟನೆಯ ರಾಜ್ಯ ಮುಖಂಡ ರಾಜು ಎಮ್ ಹಿರೇಮಠ ಹೇಳಿದರು, ಅವರು ಆಳಂದ ತಾಲೂಕಿನ ಗುಂಜಬಬಲಾದ ಗ್ರಾಮದ ಜೈ ಭೀಮ ತರುಣ ಸಂಘವು ಹಮ್ಮಿಕೊಂಡಿದ್ದ ಡಾ ಬಿ.ಆರ್. ಅಂಬೇಡ್ಕರ ಅವರ ಮಾಹಾನಾಯಕ ಅಂಬೇಡ್ಕರ ಧಾರವಾಹಿಯ ಪೋಸ್ಟರನ ಉದ್ಟಾಟನಾ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ದಲಿತ ಸಮುದಾಯಗಳ ಸರ್ವಾಂಗೀಣ ಅಭಿವೃದ್ದಿಯಾಗಬೇಕಾದರೆ ಮೊದಲು ಶಿಕ್ಷಣ ನಂತರ ಸಂಘಟನೆ ಜೊತೆಗೆ ಹೋರಾಟ ಅಗತ್ಯವಾಗಿದೆ, ಹೋರಾಟಗಳನ್ನು ಮಾಡುವಾಗ ಇತರರ ಹಕ್ಕುಗಳಿಗೆ ಧಕ್ಕೆ ಬಾರದಂತೆ ಪ್ರತಿಯೋಬ್ಬರು ಹೋರಾಟ ಮಾಡುವ ಹಕ್ಕುಹೊಂದಿರುತ್ತಾರೆ, ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರೀಕರಿಗೂ ಹೋರಾಟ ಮಾಡುವ ಹಕ್ಕು ನೀಡಿದೆ ಆದರೆ ಆ ಹಕ್ಕು ಇತರರ ಹಕ್ಕುಗಳ ಮೇಲೆ ಕೆಟ್ಟ ಪರಿಣಾಮ ಬೀರಬಾರದು ಎಂಬ ನಿರ್ಭಂಧನೆಯೂ ಇದೆ ಇದನ್ನು ಪ್ರತಿಯೊಬ್ಬರು ಅರಿತು ಇತರರ ಹಕ್ಕುಗಳಿಗೆ ಧಕ್ಕೆಯಾಗದಂತೆ ತಮ್ಮ ತಮ್ಮ ಹಕ್ಕಿಗಾಗಿ ಕಾನೂನು ಬದ್ದ ಹೋರಾಟ ಮಾಡಲು ಮುಂದೆ ಬರಬೇಕು ಎಂದು ರಾಜು ಎಮ್ ಹಿರೇಮಠ ಅವರು ಕರೆಕೊಟ್ಟರು.

ಉಪನ್ಯಾಸಕರಾಗಿ ಆಗಮಿಸಿದ ಗೋರಖ ದೊಡ್ಮನಿ ಅವರು ಮಾತನಾಡಿ ಮಹಿಳೆಯರಿಗೆ ಶಿಕ್ಷಣದ ಹಕ್ಕು, ಯುವಕ ಯುವತಿಯರಿಗೆ ಮತಧಾನದ ಹಕ್ಕು ನೀಡಿರಿವಂತಹ ಬಾಬಾ ಸಾಹೇಬ ಅಂಬೇಡ್ಕರ ಅವರನ್ನು ಪ್ರತಿಯೊರು ಸ್ಮರಿಸಬೇಕೆಂದು ತಿಳಿಸಿದರು.

ಮುಖ್ಯ ಅಥಿತಿಯಾಗಿ ಆಗಮಿಸಿದ ಎಕ್ಸಿಕ್ಯೂಟಿವ ಇಂಜಿನಿಯರಿಂಗ ನಾಗಮೂರ್ತಿ ಅವರು ಮಾತನಾಡಿ ಎಲ್ಲ ಜನಾಂಗದ ಯುವಕರು ಮಹಿಳೆಯರು ಹಿರಿಯರು iಹಾನಾಯಕ ಅಂಬೇಡ್ಕರ ಎಂಬ ಧಾರವಾಹಿಯನ್ನು ನೋಡಬೇಕು, ಅದರಂತೆ ತಮ್ಮ ಮಕ್ಕಳನ್ನು ಬೆಳಸಬೇಕೆಂದು ಸಲಹೆ ನೀಡಿದರು.

ಮೊದಲಿಗೆ ಕಾರ್ಯಕ್ರಮವನ್ನು ಬಾಬಾ ಸಾಹೇಬ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪರಮೇಶ್ವರ ಮಾಂಗ ಸ್ವಾಗತಿಸಿದರು, ಪರಮೇಶ್ವರ ಸಿಂಗೆ ನಿರೂಪಿಸಿದರು, ಶಿವಕೂಮಾರ ಸಿಂಗೆ ವಂದಿಸಿದರು, ಕಾರ್ಯಕ್ರಮದಲ್ಲಿ ಮಾಜಿ ತಾಲೂಕಾ ಪಂ ಸದಸ್ಯರಾದ ಲಕ್ಷ್ಮಿಪುತ್ರ ಯಂಕಂಚಿ, ದಲಿತ ಸಂಘಟನೆಯ ರಾಜ್ಯಾಧ್ಯಕ್ಷರಾದ ನಾಮದೇವ ಬಬಲಾದಕರ್, ನಿವೃತ್ತ ಪಿಎಸ್ ಐ ಶಿವಪ್ಪ ಬಬಲಾದಕರ, ಮಾಜಿ ಗ್ರಾ.ಪಂ ಸದಸ್ಯರಾದ ಮಾಹಾತೇಶ ಸಿಂಗೆ, ಶ್ರೀಶೈಲ ಗಂಗಾಧರ, ಸಚೀನ, ವಿಠಲ, ಶೇಟ್ಟೆಪ್ಪ ಮುತಾಂದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

13 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

16 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

22 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

23 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago