ಸಾಧಕರಿಗೆ ಸರಿಯಾದ ಮಾರ್ಗ ತೋರಿದ ಲೋಕ ಸಂಚಾರಿ ಅಲ್ಲಮಪ್ರಭು: ಶಿವರಂಜನ್ ಸತ್ಯಂಪೇಟೆ

ಕಲಬುರಗಿ: ದೀನ ದಲಿತರನ್ನು ಸಂತೈಸುವ, ಅಜ್ಞಾನಿಗಳನ್ನು ಎಚ್ಚರಿಸುವ, ಅಧ್ಯಾತ್ಮ ಸಾಧನೆಯಲ್ಲಿ ತೊಡಗಿರುವ ಸಾಧಕರಿಗೆ ಸರಿಯಾದ ಮಾರ್ಗ ತೋರಿದ ಶೂನ್ಯ ಪೀಠದ ಅಧ್ಯಕ್ಷ ಅಲ್ಲಮಪ್ರಭುಗಳು ಲೋಕೋಪಕಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಲೋಕಸಂಚಾರಿ ಎಂದು ಪತ್ರಕರ್ತ ಲೇಖಕ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಬಸವ ಸಮಿತಿ ಬೆಂಗಳೂರು, ಕಲಬುರಗಿ ಮತ್ತು ಧಾರವಾಡ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಗರದ ಅನುಭವ ಮಂಟಪದಲ್ಲಿ ಭಾನುವಾರ ಸಂಜೆ ಲಿಂ. ಶಿವಶರಣಪ್ಪಗೌಡ ಗುರುಲಿಂಗಪ್ಪಗೌಡ ಪಾಟೀಲ (ಕಲ್ಲೂರ) ಸ್ಮರಣಾರ್ಥ ಅರಿವಿನ ಮನೆ ೬೩೮ನೇ ದತ್ತಿ ಕಾರ್ಯಕ್ರಮದಲ್ಲಿ “ಅಲ್ಲಮರ ವಚನ ಪಕ್ವಾನ್ನ” ವಿಷಯ ಕುರಿತು ಮಾತನಾಡಿದ ಅವರು, ಮಾತಿಗೆ ನಿಲುಕದ ಅನುಭಾವವನ್ನು ಮಾತುಗಳಿಂದಲೇ ನಿರೂಪಿಸುವ ಅಲ್ಲಮಪ್ರಭವಿನ ವಚನಗಳು ಅನೇಕರಿಗೆ ಉಕ್ಕಿನ ಕಡಲೆಯಾಗಿ ತೋರುತ್ತಿದ್ದರೂ ಉದರಕ್ಕೆ ಸಿಹಿಯಾಗಿವೆ ಎಂದು ತಿಳಿಸಿದರು.

ಪ್ರಭುದೇವರ ವಚನಗಳನ್ನು ಅರ್ಥಮಾಡಿಕೊಳ್ಳುವುದು, ಅರಗಿಸಿಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಪ್ರಭುದೇವರ ವಚನಗಳೆಂಬ ಪಕ್ವಾನ್ನದಲ್ಲಿ ಸಾಹಿತ್ಯದ ಸಕ್ಕರೆ, ಅಧ್ಯಾತ್ಮದ ಹಾಲು, ಜ್ಞಾನದ ಬಿಸಿ ಇವುಗಳ ಹೊದಿಕೆ ಹೊಂದಾಣಿಕೆ ಇರುತ್ತದೆ. ಅಂತಹ ಪಕ್ವಾನ್ನದ ರುಚಿಯನ್ನು ಅವರ ಪ್ರತಿಯೊಂದು ವಚನಗಳಲ್ಲಿ ಕಾಣಬಹುದು. “ಪದವನರ್ಪಿಸಬಹುದಲ್ಲದೆ ಪದಾರ್ಥವನರ್ಪಿಸಬಾರದು” ಎಂಬ ವಚನವು ಮೇಲ್ನೋಟಕ್ಕೆ ಶಬ್ದ ಸಂಭ್ರಮದಲ್ಲಿ ಮುಳುಗಿರುವ ಈ ಮೂರು ಲೋಕಕ್ಕೆ ಹಿಂದೇನಿತ್ತು? ಮುಂದೇನಿದೆ? ಎಂಬುದು ತಿಳಿದಿಲ್ಲ ಎಂದು ಮೇಲ್ನೋಟಕ್ಕೆ ಅರ್ಥೈಯಿಸಬಹುದಾಗಿದ್ದರೂ ಇನ್ನೊಂದು, ಮಗದೊಂದು ಮಗ್ಗಲು ನಮಗೆ ಅರ್ಥವಾಗುವುದಿಲ್ಲ ಎಂದು ಹೇಳಿದರು.

ಅಲ್ಲಮಪ್ರಭುವಿನ ಪ್ರಕಾರ ಪದದಲ್ಲಿ ಅರ್ಥವಿಲ್ಲ. ಅದೊಂದು ನೆಪ ಅಷ್ಟೇ. ಅರ್ಥವಿರುವುದು ಸಂದರ್ಭದಲ್ಲಿ. ಕಾಲದಲ್ಲಿ. ಶರಣರಿಗೆ ಭೂತ-ಭವಿಷತ್ತಿಗಿಂತ ವರ್ತಮಾನ ಮುಖ್ಯವಾಗಿತ್ತು. ಶರಣ ಚಳವಳಿ ಹೊರಗಿನ ಯಾವುದೇ ಒಂದು ದೇವರು, ಒಂದು ದೈವ, ಒಂದು ವಿಧಿ ಯಾವುದನ್ನೇ ಒಪ್ಪಿಕೊಳ್ಳದ ಚಳವಳಿ. ನನ್ನ ಅರಿವು, ನನ್ನ ಆತ್ಮಜ್ಞಾನ ಇದುವೇ ಅತ್ಯಂತ ಕೊನೆಯ ಸತ್ಯ ಎಂದು ಪ್ರತಿಪಾದಿಸಿದರು. ಇದನ್ನು ಅಲ್ಲಮರು ಬಹಳ ಗಟ್ಟಿಯಾಗಿ ಹೇಳಿದ್ದಾರೆ ಎಂದು ಅವರ ವಚನಗಳನ್ನು ವಿಶ್ಲೇಷಿಸಿದರು.

ಬೆಂಗಳೂರು ಬೇಲಿಮಠದ ಪೂಜ್ಯ ಶಿವರುದ್ರ ಸ್ವಾಮೀಜಿ, ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ, ದತ್ತಿ ದಾಸೋಹಿ ಮಲ್ಲನಗೌಡ ಎಸ್. ಪಾಟೀಲ (ಕಲ್ಲೂರ) ಇತರರು ಭಾಗವಹಿಸಿದ್ದರು.

ಎಚ್.ಕೆ. ಉದ್ದಂಡಯ್ಯ ನಿರೂಪಿಸಿ ವಂದಿಸಿದರು. ಇದೇ ವೇಳೆಯಲ್ಲಿ ಇತ್ತೀಚೆಗೆ ಹೃದಯಘಾತದಿಂದ ನಿಧನರಾದ ಡಾ. ವೀಣಾ ಸಿದ್ರಾಮ ಜತ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

5 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420