ಬಿಸಿ ಬಿಸಿ ಸುದ್ದಿ

ರೈಲ್ವೆ ಖಾಸಗೀಕರಣ ವಿರೋಧಿಸಿ ಎಸ್ ಯು ಸಿ ಐ ವತಿಯಿಂದ ಪ್ರತಿಭಟನೆ

ಶಹಾಬಾದ: ಭಾರತಿಯ ರೈಲ್ವೆ ಜನಗಳ ಬೆವರಿಂದ ಕಟ್ಟಿದ್ದು  ಜನಗಳ ಆಸ್ತಿಯಾಗಿದ್ದು ಇದನ್ನು ಸರ್ಕಾರ ಖಾಸಗೀಕರಣ ಮಾಡಬಾರದೆಂದು ಎಸ್ ಯು ಸಿ ಐ ಕಮುನಿಷ್ಟ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ರಾಮಣ್ಣ ಎಸ್.ಇಬ್ರಾಹಿಂಪುರ ಹೇಳಿದರು.

ಅವರು ಶಹಾಬಾದ ನಗರದ ರೈಲ್ವೆ ನಿಲ್ದಾಣದ ಎದುರುಗಡೆ   ರೈಲ್ವೆ ಖಾಸಗೀಕರಣ ವಿರೋಧಿಸಿ ಪ್ರತಿಭಟನಾ ಪ್ರದರ್ಶನದಲ್ಲಿ ಮಾತನಾಡಿ, ಮುಂದುವರೆದು ಅವರು ರೈಲ್ವೆಯು ಸರ್ಕಾರದ ದೊಡ್ಡ ಸಂಸ್ಥೆಯಾಗಿದ್ದು  ನೂರಾರು ಕೋಟಿ ರೂಪಾಯಿ  ಆದಾಯದಲ್ಲಿದೆ ಸರ್ಕಾರವು ಬಂಡವಾಳಶಾಹಿಯ ಹಿತಾಶಕ್ತಿಯ ಅನುಗುಣವಾಗಿ ಖಾಸಗೀಕರಣ ಮಾಡುತ್ತಿದ್ದು ಕೂಡಲೇ ಸರ್ಕಾರವು ಈ ನೀತಿಯನ್ನು ಕೈ ಬಿಟ್ಟು ಜನರ ಜ್ವಾಲಂತ ಸಮಸ್ಯಗಾಳದ ನೀರುದ್ಯೋಗ, ಬಡತನದಂತಹ ಸಮಸ್ಯಗಳ ಕಡೆಗೆ ಗಮನ ಹರಿಸಿ ಪರಿಹರಿಸಬೇಕೆಂದರು.

ಇದೇ ಸಂದರ್ಭದಲ್ಲಿ ಎಸ್ ಯು ಸಿ ಐ ಕಮುನಿಷ್ಟ ಪಕ್ಷದ ಶಹಾಬಾದ ಕಾರ್ಯದರ್ಶಿಗಳಾದ ಗಣಪತ್ ರಾವ್ ಕೆ ಮಾನೆ ರವರು ಮಾತನಾಡುv ೧೯೯೨ ರಲ್ಲಿ ಗ್ಯಾಟ್ ಒಪಂದ ಮಾಡಿಕೊಂಡು ಅಧಿಕಾರ ಕ್ಕೆ ಬಂದ ಎಲ್ಲಾ ರಾಜಕೀಯ ಪಕ್ಷಗಳು ಖಾಸಗಿಕರಣ,ಉದಾರಿಕರಣ ನೀತಿಗಳನ್ನ ಅನುಸರಿಸುತ್ತ ಎಲ್ಲಾ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿ ಮಾಲಿಕತ್ವಕ್ಕೆ ವಹಿಸುತ್ತಿದ್ದಾರೆ.  ಕೋವಿಡ್ ೧೯  ಸಂಕಷ್ಟದ ಪರಿಸ್ಥಿನಲ್ಲಿನು ಬಡ ಜನರ ಬಗ್ಗೆ  ಗಮನ ಕೊಡುವುದರ  ಬದಲು ರೈಲ್ವೆ ಖಾಸಗೀಕರಣ ,ಪೇಟ್ರೊಲ್,ಡಿಸಲ್, ಬೆಲೆ ಏರಿಕೆ, ರೈತ ವಿರೋಧಿ ಕೃಷಿ ಉತ್ಪಾನ ಮಸೂದೆಗಳಂತ ನೀತಿಗಳು ಜಾರಿಮಾಡುತ್ತಿರುವುದು ಬೆಸರದ ಸಂಗತಿಯಾಗಿದ್ದು  ಇದರ ವಿರುದ್ದ ಸಂಘಟಿತ  ಹೋರಾಟ ಕಟ್ಟಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಎಸ್ ಯು ಸಿ ಐ ಕಮುನಿಷ್ಟ ಪಕ್ಷದ ಸದಸ್ಯರಾದ ಜಗನ್ನಾಥ ಎಸ್ ಹೆಚ್.ರವರುಮಾತನಾಡುತ್ತ ರೈಲ್ವೆ ಬಹುದೊಡ್ಡ ಸಂಸ್ಥೆಯಾಗಿ ಆಸ್ಪತ್ರೆ, ಶಾಲೆ ಒಳಗೊಂಡಿದೆ, ಇಂತಹ ಸಂಸ್ಥೆ ಖಾಸಗೀಕರಣಮಾಡುವುದನ್ನು ಸರಕಾರ ನಿಲ್ಲಿಸಬೇಕೆಂದರು.

ನಂತರ ರೈಲ್ವೆ ಸ್ಟೇಷನ್ ಮಾಸ್ಟರ್ ಮುಖಾಂತರ ಮಾನ್ಯೆ ಪ್ರಧಾನ ಮಂತ್ರಿ ಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು .  ಈ ಪ್ರತಿಭಟನೆಯ ನೆತೃತ್ವವನ್ನು  ಪಕ್ಷದ ಸದಸ್ಯರಾದ ಗುಂಡಮ್ಮ ಮಡಿವಾಳ ವಹಿಸಿದ್ದರು, ಈ ಪ್ರತಿಭಟನೆಯಲ್ಲಿ ಸದಸ್ಯರಾದ ರಾಜೆಂದ್ರ ಅತೂನೂರ, ಸಿದ್ದುಚೌದರಿ, ತಿಮ್ಮಯ್ಯಾ ಬಿ.ಮಾನೆ ನೀಲಕಂಠ ಎಮ್.ಹುಲಿ,ತುಳಜರಾಮ ಎನ್.ಕೆ, ಮಾಹಾದೇವಿ ಮಾನೆ, ರಾಧಿಕ ಚೌದರಿ,ಶಿಲ್ಪಾ ಹುಲಿ, ರಮೇಶ ದೇವಕರ್,ಪ್ರವೀಣ್ ಬಣಿಮಿಕರ್,ರಘು.ಜಿ.ಮಾನೆ, ರಘು ಪವರ್, ವಿಶ್ವನಾಥ ಸಿಂಘೆ,ಸೇರಿ ನೂರಾರು ಜನ ಭಾಗವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

15 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

17 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago