ಹೈದರಾಬಾದ್ ಕರ್ನಾಟಕ

ಗ್ರಾಮೀಣ ಭಾಗದಲ್ಲಿ ಡ್ರೋಣ್ ಸಹಾಯದಿಂದ ನೈಜ ಆಸ್ತಿ ಗುರುತು ದಾಖಲೀಕರಣ

ಕಲಬುರಗಿ: ಗ್ರಾಮೀಣ ಭಾಗದ ಖಾಸಗಿ, ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಆಸ್ತಿಗಳನ್ನು ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿದು ಸರ್ವೇ ಮಾಡಿ ನಿವೇಶನ-ಕಟ್ಟಡಗಳನ್ನು ಗುರುತಿಸಿ ಸಂಬಂಧಿಸಿದವರಿಗೆ ಹಕ್ಕು ಪತ್ರ ನೀಡುವ ಹಾಗೂ ಆಸ್ತಿ ಮಾಲೀಕತ್ವದ ದಾಖಲೆಗಳ ಲೋಪದೋಷವನ್ನು ಸರಿಪಡಿಸುವ ಕೇಂದ್ರ ಸರ್ಕಾರದ “ಸ್ವಾಮಿತ್ವ” ಸರ್ವೇ ಯೋಜನೆಗೆ ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೆ ಚಾಲನೆ ನೀಡಲಾಗಿದ್ದು, ಸರ್ವೇ ಕಾರ್ಯ ಭರದಿಂದ ಸಾಗಿದೆ.

ಕೇಂದ್ರ ಸರ್ಕಾರವು ಕಳೆದ ಏಪ್ರಿಲ್ 24 ಪಂಚಾಯತ್ ರಾಜ್ ದಿನದಂದು ಈ ಯೋಜನೆಗೆ ಚಾಲನೆ ನೀಡಿದೆ. ರಾಜ್ಯದ 16 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು 16600 ಗ್ರಾಮಗಳಲ್ಲಿ ಸರ್ವೇ ಕಾರ್ಯ ನಡೆಯುತ್ತಿದ್ದೆ. ಇದರಲ್ಲಿ ಕಲಬುರಗಿ ಜಿಲ್ಲೆಯೂ ಒಂದಾಗಿದೆ. ಕಲಬುರಗಿಯಲ್ಲಿ ಸರ್ವೇ ಕಾರ್ಯ ಕಳೆದ ಸೆ.14 ರಿಂದಲೇ ಆರಂಭಗೊಂಡಿದೆ.

ಕಲಬುರಗಿ ಜಿಲ್ಲೆಯ 263 ಗ್ರಾಮ ಪಂಚಾಯತಿಗಳ 922 ಕಂದಾಯ ಗ್ರಾಮಗಳಲ್ಲಿ ಸರ್ವೇ ಕಾರ್ಯ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. ಇದಲ್ಲದೆ ಜಿಲ್ಲೆಯ 481 ತಾಂಡಾಗಳು ಮತ್ತು 10 ಕ್ಕಿಂತ ಹೆಚ್ಚಿನ ಮನೆ, ವಸತಿ ಹೊಂದಿರುವ ಪ್ರದೇಶಗಳಲ್ಲಿಯೂ ಸಹ ಸರ್ವೇ ಕಾರ್ಯ ನಡೆಸಲಾಗುತ್ತಿದೆ ಎಂದು ಭೂಮಾಪನ ಇಲಾಖೆಯ ಕಲಬುರಗಿ ಉಪನಿರ್ದೇಶಕ ಶಂಕರ್ ಅವರು ತಿಳಿಸಿದ್ದಾರೆ.

ಗ್ರಾಮೀಣ ಭಾಗದ ಮನೆ, ನಿವೇಶನ, ಗಡಿ ಸೇರಿದಂತೆ ಗ್ರಾಮದ ಸಂಪೂರ್ಣ ಆಸ್ತಿಯನ್ನು ನಿಖರವಾಗಿ ದಾಖಲಿಸುವುದು, ಆಸ್ತಿಗಳ ದಾಖಲೆಯ ಲೋಪದೋಷಗಳಿದಲ್ಲಿ ಸರಿಪಡಿಸಿ ಮಾಲೀಕರಿಗೆ ಹಕ್ಕು ಪತ್ರ ವಿತರಿಸಿ ಗ್ರಾಮೀಣ ಭಾಗದ ಜನರ ಸಂಕಟ ದೂರ ಮಾಡುವ ಉದ್ದೇಶ ಈ ಯೋಜನೆಯದಾಗಿದೆ.

ಸರ್ವೇ ಕಾರ್ಯ ಮುನ್ನ ಭೂಮಾಪನ ಇಲಾಖೆಯ ಅಧಿಕಾರಿಗಳು ಅಧಿಸೂಚನೆ ಹೊರಡಿಸುತ್ತಾರೆ. ತದನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಭೂಮಾಪನ ಇಲಾಖೆಯಿಂದ ಸರ್ವೇ ಕಾರ್ಯ ಕುರಿತು ಗ್ರಾಮದಲ್ಲಿ ಗ್ರಾಮ ಸಭೆ ಆಯೋಜಿಸಿ ಸಾರ್ವಜನಿಕರಿಗೆ ಯೋಜನೆ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಸರ್ವೇ ಕಾರ್ಯ ಹೇಗೆ: ಆಸ್ತಿ ಸರ್ವೆ ಕಾರ್ಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಭೂಮಾಪನ ಇಲಾಖೆ ಹಾಗೂ ಭಾರತೀಯ ಸರ್ವೇಕ್ಷಣ ಸಂಸ್ಥೆ ಜಂಟಿಯಾಗಿ ನಡೆಸುತ್ತದೆ. ಆರಂಭಿಕವಾಗಿ ಭೂಮಾಪನ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ ವಸೂಲಿಗಾರರು, ವಾಟರ್‍ಮೆನ್, ಗ್ರೂಪ್ ‘ಡಿ ಸಿಬ್ಬಂದಿಗಳು ಗ್ರಾಮದಾದ್ಯಂತ ಸಂಚರಿಸಿ ಗ್ರಾಮದ ಆಸ್ತಿಗಳನ್ನು ಮತ್ತು ಗ್ರಾಮಠಾಣಾ ಆಸ್ತಿಗಳನ್ನು ಬಿಳಿ ಬಣ್ಣದಿಂದ ಗುರುತು ಮಾಡಿ ಕೈ ನಕ್ಷೆ ರೂಪಿಸುತ್ತಾರೆ.

ಮಾರ್ಕ್ ಮಾಡಲಾದ ಆಸ್ತಿಗಳನ್ನು ಭಾರತೀಯ ಸರ್ವೇಕ್ಷಣ ಸಂಸ್ಥೆಯು ಡ್ರೋಣ್ ಕ್ಯಾಮೆರಾ ಮೂಲಕ ಸೆರೆ ಹಿಡಿಯುವ ಮೂಲಕ ಸರ್ವೇ ಕಾರ್ಯ ಕೈಗೊಳ್ಳುತ್ತದೆ. ಡ್ರೋಣ್ ಸರ್ವೇ ನಂತರ ಆಸ್ತಿ ಮಾಲೀಕರಿಗೆ ಇಲಾಖೆಯಿಂದ ಸರಿಯಾದ ದಾಖಲೆ ಪತ್ರ ವಿತರಿಸಿ ಗ್ರಾಮ ಪಂಚಾಯತಿಗಳ ಆಸ್ತಿ ದಾಖಲೆಗಳ ನೋಂದಣಿಯಲ್ಲಿ ಸರಿಪಡಿಸಲಾಗುತ್ತದೆ.

ಪ್ರಾಪರ್ಟಿ ಕಾರ್ಡ್ ವಿತರಣೆ: ಡ್ರೋಣ್ ಸರ್ವೇ ಕಾರ್ಯದ ನಂತರ ಸರ್ವೇ ಇಲಾಖೆಯಿಂದ ಆಸ್ತಿದಾರರಿಗೆ ಡ್ರಾಫ್ಟ್ ಪ್ರಾಪರ್ಟಿ ಕಾರ್ಡ್ ನೀಡಲಾಗುತ್ತದೆ. ಸದರಿ ಕಾರ್ಡ್‍ಗಳಲ್ಲಿ ಆಸ್ತಿ ಹಕ್ಕಿನ ಬಗ್ಗೆ ಏನಾದರು ಆಕ್ಷೇಪಣೆಗಳಿದಲ್ಲಿ ಸಾರ್ವಜನಿಕರು ವಿಚಾರಣಾಧಿಕಾರಿಗಳಾಗಿರುವ ಸಹಾಯಕ ಭೂಮಾಪನ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ವಿಚಾರಣಾಧಿಕಾರಿಗಳು ದಾಖಲಾತಿಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಂಡ ನಂತರ ಅಂತಿಮವಾಗಿ ಪಿ.ಐ.ಡಿ. ಸಂಖ್ಯೆವುಳ್ಳ ಪ್ರಾಪರ್ಟಿ ಕಾರ್ಡ್ ಆಸ್ತಿದಾರರಿಗೆ ವಿತರಿಸಲಾಗುತ್ತದೆ. ಪ್ರತಿ ಗ್ರಾಮದಲ್ಲಿ 3-4 ದಿನದಲ್ಲಿ ಸರ್ವೇ ಕಾರ್ಯ ಮುಗಿಯಲಿದೆ.

ಯೋಜನೆಯ ಲಾಭ: ಗ್ರಾಮೀಣ ಭಾಗದಲ್ಲಿ ಆಸ್ತಿ ಹೊಂದಿದ್ದರು ಮೌಲ್ಯೀಕರಣ ಹಾಗೂ ಸೂಕ್ತ ದಾಖಲೆಗಳಿಲ್ಲದೆ ಚಿಂತೆ ಮಾಡುವ ಗ್ರಾಮೀಣ ಭಾಗದ ಜನರ ಸಂಕಷ್ಟಕ್ಕೆ ಕೊನೆ ಹಾಡಿ ಹಕ್ಕು ಪತ್ರ ವಿತರಿಸುವ ಮೂಲಕ ಆಸ್ತಿಯ ನೈಜ ವಿಸ್ತೀರ್ಣ, ಮಾಲೀಕತ್ವ ದೃಢಪಡಿಸುವುದೇ ಯೋಜನೆಯ ಬಹುಮುಖ್ಯ ಲಾಭವಾಗಿದೆ. ಇದಲ್ಲದೆ ಗ್ರಾಮೀಣ ಪರಿಸರದಲ್ಲಿ ಆಸ್ತಿಗಳ ನಿಖರ ಮಾಹಿತಿ ಲಭ್ಯವಾಗಿ ಸ್ಥಳೀಯ ಸಂಸ್ಥೆಗಳ ತೆರಿಗೆ ಸಂಗ್ರಹಗೊಂಡು ಗ್ರಾಮೀಣಾಭಿವೃದ್ಧಿಗೆ ಮತ್ತು ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕೆ ಯೋಜನೆ ವರದಾನವಾಗಲಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

13 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

23 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

23 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

23 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago