ಬಿಸಿ ಬಿಸಿ ಸುದ್ದಿ

ರಾಜ್ಯ ಸರಕಾರದಿಂದ ತಳವಾರ ಪರಿವಾರಕ್ಕೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಿನ್ನಡೆ ಉಂಟಾಗುತ್ತಿದೆ: ಮಾನೆಗಾರ

ಕಲಬುರಗಿ: ಕೇಂದ್ರ ಸರಕಾರ ಆದೇಶಿಸಿರುವಂತೆ ತಳವಾರ, ಪರಿವಾರ  ಸಮುದಾಯಗಳಿಗೆ ರಾಜ್ಯ ಸರಕಾರ ತಕ್ಷಣ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಹಿಂದುಳಿದ ವರ್ಗಗ ಶಾಶ್ವತ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೆಗಾರ ಹೇಳಿದರು.

ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿ ನಡೆಸುತ್ತಿರುವ 26ನೇ ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಾಗೂ 10ನೇ ದಿನದ ಸರದಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು ರಾಜ್ಯ ಸರಕಾರ ಕಳುಸಿಕೊಟ್ಟಂತಹ ಬುಡಕಟ್ಟು ಅಧ್ಯಯನಗಳ ವರದಿಯ ಆಧಾರದ ಮೇಲೆ ಸಂಸತ್ತಿನಲ್ಲಿ ಅನುಮೋದನೆಗೊಂಡು ರಾಷ್ಟ್ರಪತಿಗಳವರ ಅಂಕಿತದೊಂದಿಗೆ ಸಮುದಾಯಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿ ರಾಜ್ಯಪತ್ರ ಹೊರಡಿಸಿದೆ. ಅದರಂತೆ ರಾಜ್ಯ ಸರ್ಕಾರ ಕೂಡ ಈ ಸಮುದಾಯಗಳಿಗೆ  ರಾಜ್ಯಪತ್ರ ಹೋರಡಿಸಿ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಿದೆ ಅನ್ಯಯಾ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ತನ್ನ  ಕುರ್ಚಿ  ಉಳಿಸಿಕೊಳ್ಳಲು ಒಂದು ಜನಾಂಗವನ್ನು ಬಲಿಕೊಡಲು ಮುಂದಾಗಿದೆ. ಸರಕಾರದ ಈ ನಡೆಯಿಂದ ತಳವಾರ ಪರಿವಾರ ಸಮಾಜ ಶೈಕ್ಷಣಿಕ ಸಾಮಾಜಿಕ ಆರ್ಥಿಕ ಹಿನ್ನಡೆ ಉಂಟಾಗುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕೆಳವರ್ಗಗಳಲ್ಲಿ  ಬರುವ ಇನ್ನೂ ಹಲವಾರು ಸಮುದಾಯಗಳು ಅತ್ಯಂತ ಹಿಂದುಳಿದಿವೆ. ಅವೆಲ್ಲವೂ ಪರಿಶಿಷ್ಟ ಪಂಗಡದಲ್ಲಿ ತುರ್ತಾಗಿ ಸೇರಿಸಬೇಕು.  ತಾನು ಶಾಶ್ವತ ಹಿಂದುಳಿದ ವರ್ಗಗ ಆಯೋಗದ ಸದಸ್ಯನಾಗಿದ್ದಾಗ  ಹಿಂದುಳಿದ ವರ್ಗಗಳವರ ಸ್ಥಿತಿಗತಿ ಕುರಿತು ಸರ್ವೆ ಮಾಡಲಾಗಿದೆ ಎಂದು ತಿಳಿಸಿದರು.

ಈ ವರದಿಯನ್ನು ಸರಕಾರ ಒಪ್ಪಿಕೊಳ್ಳದೆ ಇರುವುದರಿಂದ ಹಿಂದುಳಿದ ವರ್ಗಗಳ ಜನರ ಜೀವನ  ರಾಜ್ಯದಲ್ಲಿ  ನರಕವಾಸ ಇದ್ದಂತಾಗಿದ್ದು, ಪ್ರಸ್ತುತ ರಾಜ್ಯದಲ್ಲಿರುವ ಕೋಲಿ, ಕಬ್ಬಲಿಗ, ಅಂಬಿಗ, ಗೊಂಡ ಕುರುಬ, ಕಾಡು ಕುರುಬ , ಜೇನುಕುರುಬ ಸೇರಿದಂತೆ ಇನ್ನು ಹಲವಾರು ಜಾತಿಗಳಿವೆ ಇವೆಲ್ಲವೂ ಅತ್ಯಂತ ಹಿಂದುಳಿದ ಸಮುದಾಯಗಳಾಗಿವೆ ಆ ವರದಿಯ ಪ್ರಕಾರ ಇವರೆಲ್ಲರನ್ನೂ ಅತಿಶೀಘ್ರದಲ್ಲಿ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂದರು.

ಈ ಸಂದರ್ಭದಲ್ಲಿ ಶರಣ ಕೊತಲಪ್ಪ ಮುತ್ತ್ಯ ತೊನಸನಹಳ್ಳಿ, ಡಾ. ಸರ್ದಾರ ರಾಯಪ್ಪ, ಸುನಿತಾ ಎಮ್ ತಳವಾರ, ದೇವೇಂದ್ರ ಕೆ ಚಿಗರಹಳ್ಳಿ, ರಾಜೇಂದ್ರ ರಾಜವಾಳ, ಚಂದ್ರಶೇಖರ್ ಜಮಾದಾರ ವಕೀಲರು, ಶರಣು ಕೋಳಿ, ರಾಜಶೇಖರ ಸೊಪ್ಪಿ  ಹಂಚಿನಾಳ,  ಚಂದ್ರು ಗಂವ್ಹಾರ, ಶರಣು ಎಸ್ ಬಿದನೂರು, ಮಡಿವಾಳಪ್ಪ ಹಣಮಂತಗೊಳ, ಸಾಬಣ್ಣ ಜಾಲಗಾರ, ಕರಣ ಬಿರಾದಾರ್, ಇತರರು ಸೇರಿದಂತೆ  ಮುಖಂಡರು ಇದ್ದರು.

emedialine

Recent Posts

ಯತ್ನಾಳ ಹೋರಾಟಕ್ಕೆ ಬೆಂಬಲವಿಲ್ಲ : ಆನಂದ ಕಣಸೂರ

ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…

1 second ago

ವಕ್ಫ್ ಮಸೂದೆ ತಿದ್ದುಪಡಿಗೆ ಮುಸ್ಲೀಮ ವೈಯಕ್ತಿಕ ಕಾನೂನು ಮಂಡಳಿ ವಿರೋಧ

ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…

11 mins ago

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

23 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago