ಗರ್ಭೀಣಿ ಬಾಣಂತಿಯರಿಗೆ ಪೌಷ್ಠಿಕ ಆಹಾರ ಅವಶ್ಯಕ: ನಟಿ ಪ್ರೇಮಾವರು

ರಾಯಚೂರು: ಗರ್ಭಿಣಿ ಬಾಣಂತಿಯರಿಗೆ ಪೌಷ್ಟಿಕಾಂಶ ಆಹಾರ ಅತಿ ಅವಶ್ಯಕವೆಂದು ಕನ್ನಡದ ಖ್ಯಾತೆ ಬಹುಭಾಷೆ ನಟಿ ಪ್ರೇಮಾವರು ಸಲಹೆ‌ ನೀಡಿದರು.

ಅವರು ತಾಲೂಕಿನ ಯರಗೇರಾ ಉಪ ಕೇಂದ್ರದಲ್ಲಿ ಲಯನ್ಸ್ ಕ್ಲಬ್, ಪ್ರಾಥಮಿಕ ಆರೋಗ್ಯ ಕೇಂದ್ರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೌಷ್ಟಿಕ ಆಹಾರ ಸೇವನೆಯಿಂದ ಮಗು ಮತ್ತು ಗರ್ಭಿಣಿ ಮಹಿಳೆಯರು ಅಪೌಷ್ಟಿಕತೆಯಿಂದ ಮುಕ್ತರಾಗುತ್ತಾರೆ. ಆರೋಗ್ಯ ಇಲಾಖೆಯಲ್ಲಿ ದೊರೆಯುವ ಹಲವಾರು ಸೇವೆಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಲಯನ್ಸ್ ಕ್ಲಬ್ ಅದ್ಯಕ್ಷರಾದ ಡಾ.ವೆಂಕಟೇಶ ವೈ.ನಾಯಕ ಮಾತನಾಡುತಾ, ಈ ಪೋಷಣೆ ಅಭಿಯಾನ ಕಾರ್ಯಕ್ರಮ ಉದ್ದೇಶದ ಬಗ್ಗೆ ವಿವರಾವಾಗಿ ಹೇಳುತಾ ಇದರ ಸದೋಪಯೋಗ ಪಡೆದುಕೊಳ್ಳಲು ಎಲ್ಲ ಗರ್ಭಿಣಿ ಬಾಣಂತಿಯರಿಗೆ ಸಲಹೆ ನೀಡುತ್ತಾ ಜೊತೆಗೆ ಲಯನ್ಸ ಕ್ಲಬ್ ವತಿಯಿಂದ ಆರೋಗ್ಯ ಇಲಾಖೆಯಲ್ಲಿ ಬರುವ ಹಲವಾರು ಸೇವೆಗಳನ್ನು ನೀಡಲು ಸದಾ ಸಿದ್ದವಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿರುವ ಡಾ.ಸುನೀತಾ ಅವರು ಮಾತನಾಡುತ್ತಾ, ಇಲಾಖೆಯಲ್ಲಿ ಬರುವ ಹಲವಾರು ಸೇವೆಗಳ ಬಗ್ಗೆ ತಿಳವಳಿಕೆ ನೀಡಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿಗಳಾದ ನರೇಶ ಬಾಬು ಕರೂಟೂರಿ  ವಂದನಾರ್ಪಣೆ ಮಾಡಿದರು. ನಂತರ ಗಬಿ೯ಣಿ ಬಾಣಂತಿಯರಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಹಾಗೂ ಐರನ್ ಟಾನಿಕ್ ಹಾಗೂ ಕ್ಯಾಲ್ಸಿಯಂ ಗುಳಿಗೆಳ ಕಿಟ್ಟು ಗಳನ್ನು ಬಾಣಂತಿಯರಿಗೆ ಸೀಮಂತ ಕಾರಣ ಮಾಡಿ ಪೌಷ್ಟಿಕ ಆಹಾರದ ಕಿಟ್ಟ ಗಳನ್ನು ವಿತರಿಸಿ ಶುಭ ಹಾರೈಸಿದರು.ಜೋತೆಗೆ ಪೋಷಣಾ ಅಭಿಯಾನದ ಹರಿವು ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕ್ಲಬ್ ಕಾಯ೯ದರ್ಶಿ ಲಯನ್ ನರೇಶಬಾಬು, ಖಜಾಂಚಿ ಲಯನ್ ಹೇಮಣ್ಣಾ ಉಣ್ಣಿ, ಹಿರಿಯ ಸದಸ್ಯರಾದ ಲಯನ್ ಬಸವರಾಜ ಗದಗಿನ,ಲಯನ್ ಮಹಾದೇವಪ್ಪ, ಲಯನ್ ದಿನೇಶ ದಪ್ತರಿ,ಹಾಗೂ ಬೆಂಗಳೂರು ಲಯನ್ಸ್ ಕ್ಲಬ್ ಸದಸ್ಯರಾದ ಲಯನ ಶ್ರೀಮತಿಶೋಭಾ, ಲಯನ್ ಶ್ರೀದೇವಿ, ಆರೋಗ್ಯಾಧಿಕಾರಿ ಶ್ರೀಮತಿ ಡಾ:ಸುಧಾ ಪ್ರಾ.ಆ.ಯರಗೇರಾ, ಶ್ರೀಮತಿ ಶಾರದಾ ಗೋನಾಳ,ಕಿ.ಆ.ಸ (ಮ) ವಿನಯಕುಮಾರ, ಕಿ.ಆ.ಸ(ಪು) ಹಾಗೂ ಆಶಾಕಾಯ೯ಕತೆ೯ಯರು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ವರದಿ: ಮುತ್ತಣ್ಣ ರಾಯಚೂರು

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

7 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

7 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

7 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

7 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

7 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

7 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420