ರಾಯಚೂರು: ಗರ್ಭಿಣಿ ಬಾಣಂತಿಯರಿಗೆ ಪೌಷ್ಟಿಕಾಂಶ ಆಹಾರ ಅತಿ ಅವಶ್ಯಕವೆಂದು ಕನ್ನಡದ ಖ್ಯಾತೆ ಬಹುಭಾಷೆ ನಟಿ ಪ್ರೇಮಾವರು ಸಲಹೆ ನೀಡಿದರು.
ಅವರು ತಾಲೂಕಿನ ಯರಗೇರಾ ಉಪ ಕೇಂದ್ರದಲ್ಲಿ ಲಯನ್ಸ್ ಕ್ಲಬ್, ಪ್ರಾಥಮಿಕ ಆರೋಗ್ಯ ಕೇಂದ್ರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೌಷ್ಟಿಕ ಆಹಾರ ಸೇವನೆಯಿಂದ ಮಗು ಮತ್ತು ಗರ್ಭಿಣಿ ಮಹಿಳೆಯರು ಅಪೌಷ್ಟಿಕತೆಯಿಂದ ಮುಕ್ತರಾಗುತ್ತಾರೆ. ಆರೋಗ್ಯ ಇಲಾಖೆಯಲ್ಲಿ ದೊರೆಯುವ ಹಲವಾರು ಸೇವೆಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಲಯನ್ಸ್ ಕ್ಲಬ್ ಅದ್ಯಕ್ಷರಾದ ಡಾ.ವೆಂಕಟೇಶ ವೈ.ನಾಯಕ ಮಾತನಾಡುತಾ, ಈ ಪೋಷಣೆ ಅಭಿಯಾನ ಕಾರ್ಯಕ್ರಮ ಉದ್ದೇಶದ ಬಗ್ಗೆ ವಿವರಾವಾಗಿ ಹೇಳುತಾ ಇದರ ಸದೋಪಯೋಗ ಪಡೆದುಕೊಳ್ಳಲು ಎಲ್ಲ ಗರ್ಭಿಣಿ ಬಾಣಂತಿಯರಿಗೆ ಸಲಹೆ ನೀಡುತ್ತಾ ಜೊತೆಗೆ ಲಯನ್ಸ ಕ್ಲಬ್ ವತಿಯಿಂದ ಆರೋಗ್ಯ ಇಲಾಖೆಯಲ್ಲಿ ಬರುವ ಹಲವಾರು ಸೇವೆಗಳನ್ನು ನೀಡಲು ಸದಾ ಸಿದ್ದವಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಡಾ.ಸುನೀತಾ ಅವರು ಮಾತನಾಡುತ್ತಾ, ಇಲಾಖೆಯಲ್ಲಿ ಬರುವ ಹಲವಾರು ಸೇವೆಗಳ ಬಗ್ಗೆ ತಿಳವಳಿಕೆ ನೀಡಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿಗಳಾದ ನರೇಶ ಬಾಬು ಕರೂಟೂರಿ ವಂದನಾರ್ಪಣೆ ಮಾಡಿದರು. ನಂತರ ಗಬಿ೯ಣಿ ಬಾಣಂತಿಯರಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಹಾಗೂ ಐರನ್ ಟಾನಿಕ್ ಹಾಗೂ ಕ್ಯಾಲ್ಸಿಯಂ ಗುಳಿಗೆಳ ಕಿಟ್ಟು ಗಳನ್ನು ಬಾಣಂತಿಯರಿಗೆ ಸೀಮಂತ ಕಾರಣ ಮಾಡಿ ಪೌಷ್ಟಿಕ ಆಹಾರದ ಕಿಟ್ಟ ಗಳನ್ನು ವಿತರಿಸಿ ಶುಭ ಹಾರೈಸಿದರು.ಜೋತೆಗೆ ಪೋಷಣಾ ಅಭಿಯಾನದ ಹರಿವು ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕ್ಲಬ್ ಕಾಯ೯ದರ್ಶಿ ಲಯನ್ ನರೇಶಬಾಬು, ಖಜಾಂಚಿ ಲಯನ್ ಹೇಮಣ್ಣಾ ಉಣ್ಣಿ, ಹಿರಿಯ ಸದಸ್ಯರಾದ ಲಯನ್ ಬಸವರಾಜ ಗದಗಿನ,ಲಯನ್ ಮಹಾದೇವಪ್ಪ, ಲಯನ್ ದಿನೇಶ ದಪ್ತರಿ,ಹಾಗೂ ಬೆಂಗಳೂರು ಲಯನ್ಸ್ ಕ್ಲಬ್ ಸದಸ್ಯರಾದ ಲಯನ ಶ್ರೀಮತಿಶೋಭಾ, ಲಯನ್ ಶ್ರೀದೇವಿ, ಆರೋಗ್ಯಾಧಿಕಾರಿ ಶ್ರೀಮತಿ ಡಾ:ಸುಧಾ ಪ್ರಾ.ಆ.ಯರಗೇರಾ, ಶ್ರೀಮತಿ ಶಾರದಾ ಗೋನಾಳ,ಕಿ.ಆ.ಸ (ಮ) ವಿನಯಕುಮಾರ, ಕಿ.ಆ.ಸ(ಪು) ಹಾಗೂ ಆಶಾಕಾಯ೯ಕತೆ೯ಯರು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ವರದಿ: ಮುತ್ತಣ್ಣ ರಾಯಚೂರು