“ಮಾತಂಗಿನಿ ಹಜ್ರಾ” ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಮಾತಂಗಿನಿ ಹಜ್ರಾ ಸ್ವಾತಂತ್ರ್ಯ ಹೋರಾಟದ ದಿಟ್ಟ ಮಹಿಳೆ. ಕ್ವಿಟ್ ಇಂಡಿಯಾ ಹಾಗೂ ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತನ್ನ 73 ನೇ ವಯಸ್ಸಿನಲ್ಲೂ 1942ರ ಸೆಪ್ಟೆಂಬರ್ 29ರಂದು ತಮ್ಲುಕ್ ಪೊಲೀಸ್ ಠಾಣೆ ವಶಪಡಿಸಿಕೊಳ್ಳಲು ಬೆಂಬಲಿಗರೊಂದಿಗೆ ಮೆರವಣಿಗೆ ಸಾಗುತ್ತಾ ಹೋಗುತ್ತಿದ್ದಾಗಲೇ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾದ ಧೀರ ಮಹಿಳೆ ಮಾತಂಗಿನಿ ಹಜ್ರಾ.
1870ರಲ್ಲಿ ತಮ್ಲುಕ್ ಬಳಿಯ ಹೋಗ್ಲಾ ಎಂಬ ಹಳ್ಳಿಯಲ್ಲಿ ಅಕ್ಟೋಬರ್ 19 ರಂದು ಜನಿಸಿದ ಮಾತಂಗಿನಿ ಹಜ್ರಾ ಆ ಕಾಲಕ್ಕೇ ಅಸಾಮಾನ್ಯ ಮಹಿಳೆ. ಅವರು ಓರ್ವ ಬಡರೈತನ ಮಗಳಾಗಿದ್ದು ,ಯಾವುದೇ ಔಪಚಾರಿಕ ಶಿಕ್ಷಣವನ್ನು ಹೊಂದಿರಲಿಲ್ಲ. ಕೇವಲ ಹನ್ನೆರಡು ವರ್ಷ ವಯಸ್ಸಿಗೇ ಬಾಲ್ಯವಿವಾಹಕ್ಕೊಳಪಟ್ಟ ಅವರು 18ನೇ ವಯಸ್ಸಿನಲ್ಲೇ ವಿಧವೆಯಾಗುತ್ತಾರೆ.
ತನ್ನ ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡುತ್ತಾ ಜನಾನುರಾಗಿಯಾಗಿದ್ದ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಲು ಆಸಕ್ತಿ ವಹಿಸಿದರು. ಆದರೆ ಸುಮಾರು ವರ್ಷಗಳ ನಂತರ ಅವರ ಜೀವನವು ಮಹತ್ವದ ತಿರುವು ಪಡೆಯಿತು. ಜನವರಿ 26,1932 , ಅವರ ಗುಡಿಸಲಿನ ಮುಂದೆ ಮೆರವಣಿಗೆ ಹೋಗುತ್ತಿದ್ದಾಗ ತಾವೂ ಸೇರಿಕೊಂಡು ಬ್ರಿಟಿಷರ ಹಿಡಿತದಿಂದ ಭಾರತದ ವಿಮೋಚನೆಗಾಗಿ ಹೋರಾಡುವುದಕ್ಕಾಗಿ ಪ್ರತಿಜ್ಞೆ ತೊಟ್ಟರು. ಮೆರವಣಿಗೆಯಲ್ಲಿ ಮುಂದೆ ಸಾಗುತ್ತಾ ತನ್ನ ಜೀವನದ ಗುರಿಯನ್ನು ಕಂಡುಕೊಂಡ ಅವರು ನಂತರ ಹಿಂದೆಂ ದೂ ನೋಡಲಿಲ್ಲ.
ಇತಿಹಾಸವು ಮಾತಂಗಿನಿ ಹಾಜ್ರಾ ರವರನ್ನು ಸ್ಮರಿಸುತ್ತದೆ: ಹಜ್ರಾರವರ ಪ್ರತಿಮೆಯು ಕಲ್ಕತ್ತಾದ ಹೃದಯಭಾಗದಲ್ಲಿರುವ ಮೈದಾನದಲ್ಲಿ ಇದೆ. ಸ್ಥಳೀಯವಾಗಿ ತಮ್ಲುಕ್ ನಲ್ಲೂ ನಾವು ಕಾಣಬಹುದು.
ದೇಶದುದ್ದಗಲಕ್ಕೂ ಸ್ಫೋಟಗೊಳ್ಳುತ್ತಿದ್ದ ಸ್ವಾತಂತ್ರ್ಯ ಚಳುವಳಿಯಲ್ಲಿ ಹಿರಿಯ ಮಹಿಳೆಯರೂ, ಯುವತಿಯರು, ಬಾಲಿಕೆಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆದರೆ ಅವುಗಳ ಬಗ್ಗೆ ಉಲ್ಲೇಖಗಳು ಅತಿ ಕಡಿಮೆ. ಬ್ರಿಟಿಷರಿಂದ 1947 ರಲ್ಲಿ ಅಧಿಕಾರವಹಿಸಿಕೊಂಡ ನಮ್ಮ ಆಳ್ವಿಕರು ಅಂದರೆ ಬಂಡವಾಳಶಾಹಿ ವರ್ಗ ಶೋಷಣೆಯಲ್ಲಿ ಬ್ರಿಟಿಷರನ್ನು ಮೀರಿಸಿದ್ದಾರೆ.
ನಮ್ಮ ದೇಶದ ನೈಜ ಇತಿಹಾಸವನ್ನು ಮರೆಮಾಚುತ್ತಿದ್ದಾರೆ. ಮಹಿಳೆಯರನ್ನು ಅಬಲೆಯ ರೂಪದಲ್ಲಿ ಅಡಗಿಸುವ ಪ್ರಯತ್ನ ಪಡುತ್ತಿದ್ದಾರೆ.ಇಂದು ತನ್ನ ಮೇಲೆ ನಡೆಯುತ್ತಿರುವ ಅನ್ಯಾಯ,ದೌರ್ಜನ್ಯ ,ಅತ್ಯಾಚಾರ ಹಾಗೂ ಸಾಮಾಜಿಕ ಸಮಸ್ಯೆಗಳ ವಿರುದ್ಧ ಅವಳು ಪ್ರತಿಭಟಿಸಿದಂತೆ ಆಳುವ ಬಂಡವಾಳಶಾಹಿ ವ್ಯವಸ್ಥೆ ಮಾಡುತ್ತಿದೆ. ಇಂದಿನ ಪ್ರಸ್ತುತ ವ್ಯವಸ್ಥೆಯ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಹಜ್ರಾ ಒಬ್ಬ ಆದರ್ಶ ಮಹಿಳೆಯಾಗಿ ಕಾಣುತ್ತಾರೆ. ಮಹಿಳೆಯನ್ನು ಎರಡೇ ದರ್ಜೆಯಾಗಿ ನೋಡುವ ಪುರುಷಪ್ರಧಾನ ಸಮಾಜ ಇಂದಿಗೂ ಕೂಡ ಸಂಪೂರ್ಣವಾಗಿ ಬದಲಾಗಿಲ್ಲ. ಮಾರ್ಯಾದೆ ಹತ್ಯೆ, ವರದಕ್ಷಿಣೆ ಕಿರುಕುಳ ಮಹಿಳೆಯರ ಮೇಲಿನ ಶೋಷಣೆ ಇಂತ ಹಲವಾರು ಸಮಸ್ಯೆಗಳ ವಿರುದ್ಧ ಚಳುವಳಿಯನ್ನ ಬೆಳೆಸಲು ಇವರ ಸ್ಪೂರ್ತಿದಾಯಕ ಜೀವನ ಯಾವತ್ತೂ ನಮಗೆ ಆದರ್ಶವಾಗಿದೆ.
ಆದ್ದರಿಂದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಣನೀಯ ಪಾತ್ರ ವಹಿಸಿ, ಹುತಾತ್ಮರಾದ ಮಾತಂಗಿನಿ ಹಜ್ರಾರವರನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ನೆನೆಯೋಣ.
ಭೀಮಾಶಂಕರ್ ಪಾಣೇಗಾಂವ್,
ಹವ್ಯಾಸಿ ಬರಹಗಾರರು, ಕಲಬುರಗಿ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…