ಹೈದರಾಬಾದ್ ಕರ್ನಾಟಕ

ಕಟ್ಟಡ ಕಾರ್ಮಿಕರಿಂದ ಕ್ರಾಂತಿಕಾರಿ ಭಗತ್‌ಸಿಂಗ್ ಸ್ಮರಣೆ

ವಾಡಿ: ಪಟ್ಟಣದಲ್ಲಿ ಕಟ್ಟಡ ಕಾರ್ಮಿಕರಿಂದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್‌ಸಿಂಗ್ ಅವರ ೧೧೩ನೇ ಜನ್ಮ ದಿನ ಆಚರಿಸಲಾಯಿತು. ಎಐಯುಟಿಯುಸಿಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಭಗತ್ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಕ್ರಾಂತಿಕಾರಿ ಘೋಷಣೆ ಕೂಗಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ರಾಂತಿಕಾರಿ ನಾಯಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಭಗತ್‌ಸಿಂಗ್, ನೇತಾಜಿ ಸುಭಾಶಚಂದ್ರ ಬೋಸ್, ಖುದಿರಾಮ ಬೋಸ್, ಅಶ್ಪಾಖುಲ್ಲಾಖಾನ್, ಚಂದ್ರಶೇಖರ ಆಜಾದರಂತಹ ಧೀರರ ರಾಜೀರಹಿತ ಹೋರಾಟದಿಂದ ಬ್ರಿಟೀಷ್ ಸಾಮ್ರಾಜ್ಯ ಕೊನೆಗೊಂಡಿತು ಎಂಬ ಕಟು ಸತ್ಯವನ್ನು ಇತಿಹಾಸದಿಂದ ಅಳಿಸಿಹಾಕುವ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಆದರೂ ಈ ಧೀರ ಹುತಾತ್ಮರು ಜನರ ಹೃದಯ ತಟ್ಟುತ್ತಲೇ ಮತ್ತೊಂದು ಕ್ರಾಂತಿಗೆ ಸ್ಪೂರ್ತಿಯಾಗುತ್ತಿದ್ದಾರೆ.

ದುಡಿಯುವ ಜನರನ್ನು ಶೋಷಣೆಯಿಂದ ಮುಕ್ತಗೊಳಿಸುವ ಕನಸು ಹೊತ್ತ ಭಗತ್‌ಸಿಂಗ್, ಸಮಾಜವಾದದ ಗುರಿಯೊಂದಿಗೆ ಹೋರಾಟ ಆರಂಭಿಸಿದ್ದರು. ಕೇವಲ ೨೩ ವರ್ಷದ ವಯಸ್ಸಿನಲ್ಲೇ ಗಲ್ಲುಗಂಭಕ್ಕೆ ಮುತ್ತಿಟ್ಟು ದೇಶದ ಯುವಜನರ ನಾಡಿಮಿಡಿತ ಜಾಗೃತಗೊಳಿಸಿದರು. ಅವರ ಕನಸು ನನಸು ಮಾಡುವ ಜಬಾವ್ದಾರಿ ಇಂದಿನ ಯುವಜನತೆ ಮತ್ತು ದುಡಿಯುವ ಜನತೆಯ ಮೇಲಿದೆ ಎಂದರು.

ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಹೇರೂರ ಮಾತನಾಡಿ, ಕ್ರಾಂತಿಕರಿಗಳ ಕುಟುಂಬದ ಹಿನ್ನೆಲೆಯಿಂದ ಬಂದ ಶಹೀದ್ ಭಗತ್‌ಸಿಂಗ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಬಾಲ್ಯದಿಂದಲೇ ಬ್ರಿಟೀಷರ ವಿರುದ್ಧ ಹೋರಾಟ ಶುರುಮಾಡಿದ್ದರು. ಸಾಹಿತ್ಯಾಸಕ್ತ ಬಾಲಕ ಭಗತ್ ಸತತ ಅಧ್ಯಯನದ ಮೂಲಕ ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡರು.

ಸಮಾಜವಾದಿ ಭಾರತದ ಕನಸಿಗೆ ನಾಂದಿ ಹಾಡಿದರು. ಕೇವಲ ಬ್ರೀಟೀಷ್ ಸರ್ಕಾರವನ್ನು ಕಿತ್ತೊಗೆಯುವುದು ಅವರ ಗುರಿಯಾಗಿರಲಿಲ್ಲ. ಮಾನವನಿಂದ ಮಾನವನ ಶೋಷಣೆಗೆ ಶಾಸ್ವತ ಕಡಿವಾಣ ಹಾಕುವುದು ಅವರ ದೃಢವಾದ ನಿಲುವಾಗಿತ್ತು. ಹಿಂದುಸ್ತಾನ್ ರಿಪಬ್ಲಿಕ್ ಅಸೋಷಿಯೇಷನ್ ಅಂಘವನ್ನು ಹಿಂದುಸ್ಥಾನ್ ಸೋಷಲಿಸ್ಟ್ ರಿಪಬ್ಲಿಕ್ ಅಸೋಷಿಯೇಷನ್ ಎಂದು ಬದಲಾಯಿಸಿ ಕ್ರಾಂತಿಗೆ ಪಣತೊಟ್ಟ ಧೀರ ಹುತಾತ್ಮರ ಜೀವನ ನಮಗೆ ಆದರ್ಶವಾಗಬೇಕು ಎಂದು ಹೇಳಿದರು.

ಅವಿನಾಶ ಒಡೆಯರ, ವಿಠ್ಠಲ ರಾಠೋಡ, ಚಂದ್ರಕಾಂತ ಮಾಳಗಿ, ಶರಣಪ್ಪ ಚಿತ್ತಾಪುರಕರ, ದವಲಪ್ಪಾ ದೊರೆ, ಮಲ್ಲಪ್ಪ ಸೇಡಂ, ಆನಂದ ಜಿನಕೇರಿ, ಸ್ಯಾಮಸನ್ ಕೋಸಗಿ, ಅಬ್ರಾಹಂ ರಾಂಪೂರಹಳ್ಳಿ, ಶ್ರೀಶೈಲ ಕೆಂಚಗುಂಡಿ, ಸಾಯಿನಾಥ ಚಿಟೇಲಕರ್, ಎಸಪ್ಪ ಕೇದಾರ ಪಾಲ್ಗೊಂಡಿದ್ದರು.

emedialine

Recent Posts

‘ಸೌಭಾಗ್ಯ ಸಿರಿ’ ಸಾಮಾಜಿಕ ಸಿರಿಯಾಗಲಿ: ಡಾ. ಅವ್ವಾಜಿ

ಕಲಬುರಗಿ: ಅಪ್ಪ- ಅವ್ವ, ಹೆಂಡತಿ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಬಹುದು. ಆದರೆ ಅಕ್ಕ ತಂಗಿಯ ಸ್ಮರಣೆಯಲ್ಲಿ ಟ್ರಸ್ಟ್ ಸ್ಥಾಪಿಸುವುದು ಬಹಳ ಅಪರೂಪ…

1 hour ago

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹ

ಕಲಬುರಗಿ: ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕೆಂದು ಅಖಿಲ ಭಾರತ ಕಿಸಾನ್ ಸಭಾದ ರಾಜ್ಯಾಧ್ಯಕ್ಷ ಡಾ. ಸಿದ್ದನಗೌಡ…

1 hour ago

ವಾಡಿಯಲ್ಲಿ ಕಲರ್ ಕಲರ್ ಕುಡಿಯುವ ನೀರು ಪೂರೈಕೆ

ವಾಡಿ: ಮಾಡುತ್ತಿರುವ ಕುಡಿವ ನೀರಿನಲ್ಲಿ ಚರಂಡಿ ನೀರು ಹಾಗೂ ಮಳೆಯಿಂದ ಕಲುಷಿತ ನೀರು ಸೇರ್ಪಡೆಯಾಗಿ ಸಾರ್ವಜನಿಕರು ಅನಿವಾರ್ಯವಾಗಿ ರಾಡಿ ನೀರು…

1 hour ago

ಬಸವರಾಜ್ ಎಸ್ ಜಿಳ್ಳೆಗೆ ಸನ್ಮಾನ ನಾಳೆ

ಕಲಬುರಗಿ; ಬಸವರಾಜ್ ಎಸ್ ಜಿಳ್ಳೆ ಅಭಿಮಾನಿ ಬಳಗದ ವತಿಯಿಂದ ಡೆಪ್ಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೆ ಎಸ್ ಆರ್…

6 hours ago

ಐಆರ್‌ಎಸ್‌ಒ ಕರ್ನಾಟಕ ರಾಜ್ಯ ಕಾರ್ಯಕರ್ತರ ಸಭೆ

ರಾಯಚೂರು; ಮಾರ್ಕ್ಸ್ ಭವನದಲ್ಲಿ ಎಐಆರ್‌ಎಸ್‌ಒ ಕರ್ನಾಟಕ ರಾಜ್ಯ ಮಟ್ಟದ ಕಾರ್ಯಕರ್ತರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕರ್ತರ ಸಭೆಯಲ್ಲಿ, ಕೇಂದ್ರ ಸಂಘಟನಾ…

6 hours ago

ಶೈಲಜಾ ಶರಣಗೌಡಗೆ ಪಿಎಚ್. ಡಿ. ಡಾಕ್ಟರೇಟ್ ಪದವಿ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಶೋಧನಾ ವಿಭಾಗದ ವಿದ್ಯಾರ್ಥಿನಿ, ಶೈಲಜಾ ಶರಣಗೌಡ ಇವರು ಡಾ. ಶಾರದಾ ದೇವಿ ಎಸ್.…

6 hours ago