ಬಿಸಿ ಬಿಸಿ ಸುದ್ದಿ

ಸುರಪುರ ನಗರದ ವಣಕಿಹಾಳಕ್ಕೆ ಶಾಸಕ ರಾಜುಗೌಡ ಭೇಟಿ

ಸುರಪುರ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಅಪಾರ ಪ್ರಮಾಣದಲ್ಲಿ ನಷ್ಟಕ್ಕೀಡಾಗಿರುವ ನಗರದ ವಾರ್ಡ್ ಸಂಖ್ಯೆ ೩೦ ಹಾಗು ೩೧ರ ವಣಕಿಹಾಳದ ಭಿಕ್ಷಕುರ ಕಾಲೋನಿಗೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಭೇಟಿ ನೀಡಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಶಾಸಕರು ಅಲ್ಲಿಯ ಕುಟುಂಬಸ್ಥರನ್ನುದ್ದೇಶಿಸಿ ಮಾತನಾಡಿ,ಇದು ಅನೇಕ ವರ್ಷಗಳ ಸಮಸ್ಯೆಯಾಗಿದ್ದು ಶೀಘ್ರದಲ್ಲಿಯೆ ಇದಕ್ಕೆ ಶಾಸ್ವತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.ಅಲ್ಲದೆ ಸದ್ಯ ಮಳೆ ನೀರಿನಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳನ್ನು ಶಾಲೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಅವರಿಗೆ ಎಲ್ಲ ರೀತಿಯ ನೆರವು ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ರಾಜುಗೌಡರಿಗೆ ಸ್ಥಳಿಯರ ಮನವಿ ಮಾಡಿ,ನಮಗೆ ಪ್ರತಿಬಾರಿ ಮಳೆ ಬಂದರೆ ನಮ್ಮ ಜೀವ ಕೈಯಲ್ಲಿ ಹಿಡಿದು ಬದುಕುವ ಸ್ಥಿತಿಯಿದೆ.ಹಾಗಾಗಿ ನಾವು ತಮ್ಮಲ್ಲಿ ಕಳಕಳಿಯಿಂದ ವಿನಂತಿಸುತ್ತೇವೆ ನಮಗೆ ಶಾಸ್ವತ ಪರಿಹಾರ ದೊರಕಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶಾಂತಪ್ಪ ಸಮುದಾಯ ಸಂಘಟನಾಧಿಕಾರಿ ಓಂಕಾರೆಪ್ಪ ಪೂಜಾರಿ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಮುಖಂಡರಾದ ಸಿದ್ದನಗೌಡ ಕರಿಬಾವಿ ಯಲ್ಲಪ್ಪ ಕುರಕುಂದಿ ಹೆಚ್.ಸಿ.ಪಾಟೀಲ ಅಯ್ಯಪ್ಪ ಅಕ್ಕಿ ಜೆಟ್ಟೆಪ್ಪ ವಿರುಪಾಕ್ಷಿ ಮಕಾಶಿ ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ ಸೇರಿದಂತೆ ಅನೇಕರಿದ್ದರು.

emedialine

Recent Posts

ವಾಸವದತ್ತಾ ರೈಲು ಸಂಚಾರ ಸಮಯ ಬದಲು : ಡಿಸಿ ಭರವಸೆ

ರೈಲ್ವೆ ಇಲಾಖೆ ಜೊತೆಗೆ ಚರ್ಚಿಸಿ ಕ್ರಮ : ನಂತರ ರೈಲು ಹಳಿ ಸ್ಥಳಾಂತರಕ್ಕೆ ಕ್ರಮ ಸೇಡಂ: ವಾಸವದತ್ತಾ ಸಿಮೆಂಟ್ ಕಾರ್ಖಾನೆಗೆ…

1 min ago

ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹ

ಕಲಬುರಗಿ: ತಾಲೂಕಿನ ಇಟಗಾ ಗ್ರಾಮದ ಹಿಂದೂ ಕಾರ್ಯಕರ್ತನಾದ ಭೀಮು ದಾಸರ ಇವರ ಮೇಲೆ ಅನ್ಯ ಕೋಮಿನ ಜನ ಹಲ್ಲೆ ಮಾಡಿದವರ…

9 mins ago

ವಾರ್ಡ ನಂ 6 ಉದ್ಯಾನವನ ಕಳಪೆ ಕಾಮಗಾರಿ ಆರೋಪ

ಕಲಬುರಗಿ: ನಗರದ ವಾರ್ಡ ನಂ 6 ರಲ್ಲಿ ಬರುವ ಚೆನ್ನವೀರ ಬಡಾವಣೆಯಲ್ಲಿ ಕೆಕೆಆರ್.ಡಿಬಿ ಅನುದಾನದಲ್ಲಿ ಕೆ.ಆರ್.ಐ.ಡಿ.ಎಲ್. ನಿಂದ ಕಾಮಗಾರಿ ಉದ್ಯಾನವನವು…

11 mins ago

ಆದಿಜಾಂಭವ ಅಭಿವೃದ್ದಿ ನಿಗಮಕ್ಕೆ 500 ಕೋಟಿ ರೂ. ಮೀಸಲಿಡಲು ಆಗ್ರಹ

ಕಲಬುರಗಿ: ಕಳೆದ 25 ವರ್ಷಗಳಿಂದ ಮಾದಿಗರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯದ ವಿವಿಧ ರಾಜಕೀಯ ಆಡಳಿತ ಸರಕಾರಗಳಿಗೆ ಪ್ರತಿಭಟನೆ,ಧರಣಿ, ಸತ್ಯಾಗೃಹ,…

16 mins ago

ಪ್ರೊ. ಎ. ಎಸ್. ಹೊಸಮನಿ ಜಪಾನ್ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಪ್ರಾಧ್ಯಾಫಕ ಹಾಗೂ ವಾಣಿಜ್ಯ ನಿಕಾಯದ ಡೀನ್ ಪ್ರೊ. ಎ.…

19 mins ago

“ಲವ್ ಇಸ್ ಬ್ಲೈಂಡ್” ಚಿತ್ರದ ಪೋಸ್ಟರ್ ಬಿಡುಗಡೆ

ಕಲಬುರಗಿ: ಜುಲೈ 1ರ ಸೋಮವಾರ ರಾತ್ರಿ 8 ಗಂಟೆಗೆ ಕಲಬುರಗಿ ನಗರದ ಆರಾಧ್ಯ ದೈವ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದೇವಸ್ಥಾನದ…

22 mins ago