ಬಿಸಿ ಬಿಸಿ ಸುದ್ದಿ

ಪ್ರಜಾಪ್ರಭುತ್ವದ ಉಳಿವಿಗೆ ಪತ್ರಿಕಾರಂಗದ ಸೇವೆ ಶ್ಲಾಘನೀಯ-ಡಾ.ಕೆ.ಗುರಲಿಂಗಪ್ಪ

ಶಹಾಬಾದ: ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಪ್ರಜಾಪ್ರಭುತ್ವದ ಉಳಿವಿಗೆ ಸಾಕಷ್ಟು ಶ್ರಮವಹಿಸುತ್ತಿರುವ ಪ್ರಜಾಪ್ರಭುತ್ವದ ಕಾವಲುನಾಯಿ ಎಂದೇ ಕರೆಯಲ್ಪಡುವ ಪತ್ರಿಕಾರಂಗದ ಸೇವೆ ಶ್ಲಾಘನೀಯವಾದುದು ಎಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.

ಅವರು ಮಂಗಳವಾರ ನಗರಸಭೆಯ ಸಭಾಂಗಣದಲ್ಲಿ ಆಯೋಜಿಸಲಾದ ತಾಲೂಕಾ ಕಾರ್ಯನಿರತ ಪತ್ರಕರ್ತ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳನ್ನು ನಾಲ್ಕನೇ ಅಂಗ ಎಂದೇ ಪರಿಗಣಿಸಲಾಗುತ್ತದೆ.ಸರಕಾರ ಮತ್ತು ಜನತೆಯ ನಡುವೆ ಮಾಧ್ಯಮಗಳು ಸೇತುವೆಗಳಾಗಿ ಕೆಲಸ ಮಾಡುತ್ತವೆ.ಸಂವಿಧಾನಬದ್ಧ ಆಡಳಿತ ಸಂಸ್ಥೆಗಳು ಹದ್ದುಮೀರಿದಾಗ ಅವುಗಳ ಹೊಣೆಗಾರಿಕೆಯನ್ನು ನೆನಪಿಸುವ ಹಾಗೂ ಸರಿದಾರಿಗೆ ಬರುವಂತೆ ಕೆಲಸ ಮಾಡುತ್ತಿದೆ ಎಂದರು. ಪತ್ರಕರ್ತರು ಸಮಾಜದ ಒಳಿತಿಗಾಗಿ ಹೊಸತನವನ್ನು ನೀಡುವಲ್ಲಿ ಸಫಲರಾಗಬೇಕು.ಪ್ರತಿನಿತ್ಯದ ಎಲ್ಲಾ ಆಗು ಹೋಗುಗಳನ್ನು ತಿಳಿಯಬೇಕಾದರೆ ಅದು ಮಾಧ್ಯಮದಿಂದ ಸಾಧ್ಯ. ಸತ್ಯವನ್ನು ಮರೆಮಾಚದೇ ಸಮಾಜ ಬದಲಾವಣೆಯ ಸುದ್ದಿಗಳು ಹೆಚ್ಚು ಪ್ರಕಟಗೊಂಡಾಗ ಸಮಾಜ ಎಚ್ಚರದಲ್ಲಿರುತ್ತದೆ. ಸತ್ಯ, ಪ್ರಾಮಾಣಿಕತೆ, ದಕ್ಷತೆಯಿಂದ ಸಮಾಜದ ಓರೆ ಕೋರೆಗಳನ್ನು ತಿದ್ದುವ ಕೆಲಸ ಪತ್ರಕರ್ತರಿಂದಾಗಲಿ ಹಾಗೂ ತಾಲೂಕಿನ ಅಭಿವೃದ್ಧಿಗೆ ಉತ್ತಮ ಲೇಖನಗಳು ತಮ್ಮಿಂದ ಹೊರಬರಲಿ ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ರಮೇಶ ಭಟ್ಟ ಮಾತನಾಡಿ, ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಪ್ರಜಾಪ್ರಭುತ್ವದ ಮೂರು ಅಂಗಗಳಾದರೆ ನಾಲ್ಕನೇ ಅಂಗವೇ ಪತ್ರಿಕಾರಂಗ.ಇಂದು ಸಾಮಾಜಿಕ ಜಾಲತಾಣಗಳು ಮತ್ತು ದೃಶ್ಯ ಮಾಧ್ಯಮಗಳು ಪ್ರಸಕ್ತ ಕಾಲಘಟ್ಟದಲ್ಲಿ ಮುದ್ರಣ ಮಾಧ್ಯಮಕ್ಕೆ ಸವಾಲಾಗಿದ್ದು, ವರದಿಗಾರರು ಕ್ಲಿಷ್ಟಕರ ಸನ್ನವೇಶದಲ್ಲಿ ಕಾರ್ಯನಿರ್ವಹಿಸುತ್ತಾರೆ. ದೇಶದಲ್ಲಿನ ಪತ್ರಿಕೆಯ ದರ ವಿದೇಶದಲ್ಲಿನ ಪತ್ರಿಕೆಯ ದರಕ್ಕಿಂತ ಬಹಳಷ್ಟು ಕಡಿಮೆಯಿದೆ. ಇಂದು ಪತ್ರಿಕೆಗಳು ಉಳಿಯಬೇಕಾದರೆ ಜನರು ಪತ್ರಿಕೆಯನ್ನು ಕೊಂಡು ಓದುವ ಹವ್ಯಾಸವನ್ನು ರೂಢಿಸಿಕೊಂಡಾಗ ಪತ್ರಿಕೆ ಬೆಳೆಯುತ್ತದೆ ಎಂದರು.

ಪತ್ರಕರ್ತರಾದ ವಾಸುದೇವ ಚವ್ಹಾಣ ನಿರೂಪಿಸಿದರು, ಮಲ್ಲಿನಾಥ ಪಾಟೀಲ ಸ್ವಾಗತಿಸಿದರು, ರಘುವೀರಸಿಂಗ ಠಾಕೂರ ವಂದಿಸಿದರು.
ಚಿತ್ತಾಪೂರ ಪಿಎಲ್ಡಿ ಬ್ಯಾಂಕಿನ ಉಪಾಧ್ಯಕ್ಷ ರಾಚಪ್ಪ ಅಲ್ಲಂಶೆಟ್ಟಿ,ಸುಭಾಷ ಜಾಪೂರ, ಬಸವರಾಜ ಬಿರಾದಾರ, ಶರಣು ಪಗಲಾಪೂರ,ಸಾಹೇಬಗೌಡ ಬೋಗುಂಡಿ, ಸೂರ್ಯಕಾಂತ ಕೋಬಾಳ, ರಾಜೇಶ ಯನಗುಂಟಿಕರ್, ಬಸವರಾಜ ಮದ್ರಿಕಿ, ಜಗನ್ನಾಥ.ಎಸ್.ಹೆಚ್, ವಿಜಯಕುಮಾರ, ಶಾಂತಪ್ಪ ಹಡಪದ, ಮಹಾಂತೇಶ ವಾಡಿ, ನಾಗಪ್ಪ ರಾಯಚೂರಕರ್,ರವಿ ಬೆಳಮಗಿ, ಉಬೆದುಲ್ಲಾ, ನಗರಸಭೆಯ ಅಧಿಕಾರಿ ಸುನೀಲಕುಮಾರ, ಜೆಇ ಬಸವರಾಜ, ಸಾಬಣ್ಣ ಸುಂಗಲಕರ್, ಸಿದ್ದು ಬಾಳಿ, ಫಜಲ್ ಪಟೇಲ ಇತರರು ಇದ್ದರು.

emedia line

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

6 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

9 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

15 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

16 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

16 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago