ಹೈದರಾಬಾದ್ ಕರ್ನಾಟಕ

ಅಂಬೇಡ್ಕರ್ ನಮ್ಮೆಲ್ಲರಿಗೂ ಸಮಬಾಳು ನೀಡಿದ ಮಹಾನಾಯಕ: ಶಿವಾನಂದ ಪಾಟೀಲ

ಕಲಬುರಗಿ: ಅಂಬೇಡ್ಕರ್ ಇಡಿ ವಿಶ್ವಕಂಡ ಮಾಹಾನಾಯಕ, ಸಂವಿಧಾನದ ಪಿತಾಮಹಾ, ಇಂದು ಎಲ್ಲರೂ ಸಮಬಾಳು ಬಾಳುತ್ತಿರುವುದು ಅವರು ಕೊಟ್ಟ ಸಂವಿಧಾನದಿಂದಲೇ ಸಾಧ್ಯವಾಗಿದೆ. ಅವರ ಜ್ಞಾನಕ್ಕೆ ಇಡಿ ಪ್ರಪಂಚವೇ ತಲೆಬಾಗಿದೆ ಎಂದು ಜಿಲ್ಲಾ ಪಂಚಾಯತ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ ಅವರು ಹೇಳಿದರು.

ಅವರು ಶಹಾಬಾದ ತಾಲೂಕಿನ ಮರತೂರ ಗ್ರಾಮದಲ್ಲಿ ಯುವ ನಾಯಕ ವಿನೋದಕುಮಾರ ಉದಯಕರ್ ನೇತೃತ್ವದಲ್ಲಿ ಗ್ರಾಮದ ಯುವಕರು ಹಮ್ಮಿಕೊಂಡಿದ್ದ ಮಹಾ ನಾಯಕ ಧಾರಾವಾಹಿಯ ಅಭಿನಂಧನಾ ಸಮಾರಂಭ ಹಾಗೂ ಬ್ಯಾನರ್ ಅನಾವರಣ ಕಾರ್ಯಕ್ರಮ ಉದ್ಘಾಟನೆಗೊಳಿಸಿ ಮಾತನಾಡಿದ ಅವರು ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ನಮ್ಮೂರಿನ ಯುವಕರೆಲ್ಲರೂ ಒಂದಾಗಿ ಅಭಿನಂದಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಾವೆಲ್ಲರೂ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರಂತೆ ಓದಿ ಜ್ಞಾನಿಗಳಾಗಬೇಕು. ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಒಳ್ಳೆಯ ಹಾದಿಯಲ್ಲಿ ನಡೆದು ದೇಶದ ಅಭಿವೃದ್ಧಿಗೆ ಪೂರವಾಗುವ ಕೆಲಸ ಮಾಡಬೇಕು ಎಂದ ಪಾಟೀಲ ಅವರು ನಾವೆಲ್ಲರೂ ಮನಸ್ಪೂರ್ವಕವಾಗಿ ಆಸ್ವಾದಿಸಿ ಅನುಸರಿಸಬೇಕಾದದಾರಾವಾಹಿ ಮಹಾನಾಯಕ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮುಖಂಡರಾದ ಡಾ. ಬಸವರಾಜ ಪಾಟೀಲ್ ಅವರು ಮಾತನಾಡಿ, ಅಂಬೇಡ್ಕರ್ ಅವರ ಜೀವನ ಸಾಧನೆ ನಮಗೆಲ್ಲರಿಗೂ ಸ್ಪೂರ್ತಿಯಾಗಬೇಕು. ಅವರಂತೆ ನಮ್ಮ ಮಕ್ಕಳಿಗೆ ಓದಿಸಬೇಕು. ನಾವೆಲ್ಲರೂ ದುಶ್ಚಟಗಳಿಂದ ದೂರವಾಗಬೇಕು. ಅಂದಾಗ ಮಾತ್ರ ಗ್ರಾಮ ಹೆಸರು ಬೆಳಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ನಿಯಮಿತದ ಅಧ್ಯಕ್ಷರಾದ ರವೀಂದ್ರ ನರೋಣಿ ಅವರು, ಅಂಬೇಡ್ಕರ್ ಅವರು ಈ ದೇಶಕಂಡ ಒಬ್ಬ ಅದ್ಭುತ ನಾಯಕ. ಅವರು ಬರೆದ ಸಂವಿಧಾನ ಇವತ್ತು ಪ್ರಪಂಚದಲ್ಲೇ ಬಹುದೊಡ್ಡದಾಗಿದೆ. ವಿಶ್ವದಜ್ಞಾನಿಯಾಗಿ ಅಂಬೇಡ್ಕರ್ ಅವರ ಆದರ್ಶಗಳು ಈ ಸಮಾಜಕ್ಕೆ ಮಾದರಿಯಾಗಲಿ ಎಂದು ಹೇಳಿದರು.

ಉಪನ್ಯಾಸ ನೀಡಿದ ಯುವ ಬರಹಗಾರ ಕೆ.ಎಂ.ವಿಶ್ವನಾಥ ಮರತೂರ ಇವರು ಮರತೂರ ಗ್ರಾಮದ ಶಕ್ತಿಯು ದಿಲ್ಲಿಯವರೆಗೂ ಹಬ್ಬಿದೆ, ದೇಶದತುಂಬೆಲ್ಲ ಹೆಸರುವಾಸಿಯಾಗಿದೆ. ಇಲ್ಲಿಯುವಕ ಶಕ್ತಿ ಉತ್ತಮವಾಗಿ ಬಳಕೆಯಾಗಬೇಕು. ಗ್ರಾಮದ ಪ್ರತಿಯೊಂದು ಮಗುವು ಶಾಲೆಗೆ ದಾಖಲಾಗಿ ಅಂಬೇಡ್ಕರ್ ಶಿಕ್ಷಣದ ಮಾರ್ಗ ಅನುಸರಿಸಿ ಎಲ್ಲರೂ ತಪ್ಪದೇ ಮಾಹಾನಾಯಕದಾರಾವಾಹಿ ನೋಡಿ ಅದನ್ನು ಬುದುಕಿನಲ್ಲಿ ಅನುಸರಿಸಿ ಎಂದು ಯುವಕರಿಗೆ ಸಲಹೆ ನೀಡಿದರು.

ಪ್ರಸ್ತಾವಿಕ ಮಾತನಾಡಿದ ಶಿಕ್ಷಕರಾದ ಮಾಣಿಕಾರಾವ್ ಸಕ್ಪಾಲ್ ಅವರು, ಅಂಬೇಡ್ಕರ್ ಅವರು ಕೇವಲ ಒಂದೇ ಸಮೂದಾಯಕ್ಕೆ ಸೀಮಿತವಾದ ನಾಯಕಲ್ಲ; ಅವರೊಬ್ಬರು ವಿಶ್ವ ನಾಯಕರಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಹೇಳಿದರು.

ಎಪಿಎಂಸಿ ಸದಸ್ಯ ಸಿದ್ದುಗೌಡ ಅಫಜಲಪೂರಕರ್, ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಅಜೀತ್ ಕುಮಾರ ಪೊಲೀಸ್ ಪಾಟೀಲ, ದಲಿತ ಮುಖಂಡರಾದ ಸುರೇಶ ಮೆಂಗನ್, ಬೌದಿಷ್ಟ ಸೋಸೈಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಅಂಬರಾಯ ಬೆಳಮಗಿ, ವಕೀಲರಾದ ಧರ್ಮಣ್ಣ ಕೋಣೆಕರ್, ಯುವ ಮುಖಂಡ ವಿನೋದಕುಮಾರ ಉದಯಕರ್, ಶೇರ್‌ಅಲಿ, ಉಪನ್ಯಾಸಕ ಡಾ. ಕರಿಗೂಳೇಶ್ವರ್ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯ ರಮೇಶ ರೆಡ್ಡಿ, ಹುನೇಸ್ ದೊಡ್ಡಮನಿ, ಕಾಶಿನಾಥ ಪೂಜಾರಿ, ಕಲ್ಪನಾ ಗುರುನಾಥ ಗೌತಮ್, ಗುರುನಾಥ ಗೌತಮ್, ರಾಜು, ಸಂಜೀವಕುಮಾರ ಗರ್, ವಿಶ್ವನಾಥ ಮೌರ್ಯ, ಪತ್ರಕರ್ತರಾದ ವಿಜಯಕುಮಾರ ಜಿಡಗಿ, ಶ್ರೀಕಾಂತ ಬಿರಾಳ ಸೇರಿದಂತೆ ಗ್ರಾಮದ ಮುಖಂಡರು, ಮಹಿಳೆಯರು ಹಾಗೂ ಯುವಕರು ಉಪಸ್ಥಿತರಿದ್ದರು. ಮಾಣಿಕರಾವ್ ಸಕ್ಪಾಲ್ ಪ್ರಸ್ತಾವಿಕ ಮಾತನಾಡಿ, ನಿರೂಪಿಸಿದರು. ಭೀಮಾಶಂಕರ ಕಾಂಬಳೆ ಸ್ವಾಗತಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

2 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

2 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

2 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

19 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

21 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago