ರಾಯಚೂರು: ರಾಷ್ಟೀಯ ಪೋಷಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಅಂಗವಾಗಿ ಹರಿಜನವಾಡ ವಲಯದ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವರು ಗರ್ಭಿಣಿ ಮಹಿಳೆಯರಿಗೆ ವನ ಭೋಜನ ಕೂಟ ಹಮ್ಮಿಕೊಳ್ಳಲಾಗಿತ್ತು.
೧೦ ಜನ ಗರ್ಭೀಣಿ ಮಹಿಳೆಯರನ್ನು ವಾಸವಿನಗರದ ಬಳಿಯಿರುವ ಉದ್ಯಾನವನಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅವರಿಗೆ ಕೋವಿಡ್-೧೯ ಸುರಕ್ಷಿತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಪೌಷ್ಟಿಕ ಆಹಾರ ಬಗೆ ಹಸಿರು ಸೊಪ್ಪು ತರಕಾರಿ, ಮಹತ್ವಾಕಾಂಕ್ಷಿ ಕೇಂದ್ರ ಸರಕಾರದ ಪ್ರಥಮ ಗರ್ಭಿಣಿ ಮಹಿಳೆಯರಿಗೆಂದು ಮಾತೃವಂದನಾ ಯೋಜನೆ ಮತ್ತು ಅದರ ಉಪಯೋಗದ ಬಗ್ಗೆ ತಿಳಿಸಿ ಅವರಿಗೆ ಜೋಕಾಲೆ ವ್ಯವಸ್ಥೆ ಮಾಡಲಾಯಿತು.
ಉದ್ಯಾನವನದ ಹಸಿರು ಸವಿಯನ್ನು ಸವಿಸಿ ಗರ್ಭಿಣಿ ಮಹಿಳೆಯರಿಗೆ ಜಾನಪದ ಗೀತೆಗಳನ್ನು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿದರು. ಈ ವೇಳೆ ಗರ್ಭಿಣಿ ಮಹಿಳೆಯರು ಮನ ಪೂರ್ವಕವಾಗಿ ನೃತ್ಯ ಮಾಡಿ ಆನಂದ ಪಟ್ಟರು ಕೂನೆಗೆ ಎಲ್ಲಾ ಮಹಿಳೆಯರಿಗೆ ಪೌಷ್ಟಿಕ ಆಹಾರ ಸವಿದರು.
ಈ ಸಂದರ್ಭದಲ್ಲಿ ಹರಿಜನವಾಡ ವಲಯ ಮೇಲ್ವಿಚಾರಕಿ ಮೂಕಾಂಬಿಕಾ, ಅಂಗನವಾಡಿ ಕಾರ್ಯಕರ್ತೆರಾದ ಹೆಚ್.ಪದ್ಮಾ, ಚಂದ್ರಕಲಾ, ವಿಧ್ಯಾಶ್ರೀ, ಬಸವರಾಜೇಶ್ವರಿ, ಅಂಜಿನಮ್ಮ ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…