ವಾಣಿಜ್ಯ

ಪಿಯಾಜಿಯೊ ಸಂಸ್ಥೆಯಿಂದ “ಶಿಕ್ಷಾ ಸೆ ಸಮೃದ್ಧಿ” ಕಾರ್ಯಕ್ರಮದಡಿ ಆಟೋ ರಿಕ್ಷಾ ಚಾಲಕರ ಮಕ್ಕಳಿಗಾಗಿ ವಿದ್ಯಾರ್ಥಿವೇತನ

ಪುಣೆ: ಮಹಾತ್ಮ ಗಾಂಧಿಯವರ ೧೫೧ ನೇ ಜನ್ಮ ದಿನಾಚರಣೆಯನ್ನು ಆಚರಿಸಲು ರಾಷ್ಟ್ರವು ಸಿದ್ಧತೆಯನ್ನು ನಡೆಸುತ್ತಿರುವಾಗ, ೧೦ ಅಥವಾ ೧೨ ರ ನಂತರ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಆಟೋ ರಿಕ್ಷಾ ಚಾಲಕರ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಬೆಂಬಲಿಸಲು ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್, ವಿಶಿಷ್ಟ ವಿದ್ಯಾರ್ಥಿವೇತನ ಕಾರ್ಯಕ್ರಮವಾದ “ಶಿಕ್ಷಾ ಸೆ ಸಮೃದ್ಧಿ” ಯನ್ನು ಘೋಷಿಸಲು ಹೆಮ್ಮೆಪಡುತ್ತದೆ ಹಾಗೂ ಈ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕಾಗಿ ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ (ಪಿವಿಪಿಎಲ್) ತನ್ನ ಸಿಎಸ್‌ಆರ್ ಉಪಕ್ರಮದ ಭಾಗವಾಗಿ ಬಡ್ಡಿ೪ಸ್ಟಡಿ ಇಂಡಿಯಾ ಫೌಂಡೇಶನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದು ೧೦ ನೇ / ೧೨ ನೇ ತರಗತಿಯ ನಂತರ ಪೂರ್ಣ ಸಮಯದ ತಾಂತ್ರಿಕ ಅಥವಾ ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾದ ಆಯ್ದ ವಿದ್ಯಾರ್ಥಿಗಳ ವಾರ್ಷಿಕ ಕೋರ್ಸ್ ಶುಲ್ಕದ ೮೦% ವರೆಗೆ ಬೆಂಬಲಿಸುವ ಉಪಕ್ರಮವಾಗಿದೆ.

ಹಣಕಾಸಿನ ತೊಂದರೆಯಿಂದಾಗಿ ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ಆರ್ಥಿಕವಾಗಿ ಹಿಂದುಳಿದ ಆಟೋ ರಿಕ್ಷಾ ಚಾಲಕರ ಮಕ್ಕಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮವು ಅರ್ಹ ವಿದ್ಯಾರ್ಥಿಗಳ ಆರ್ಥಿಕ ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಅರ್ಜಿ ಸಲ್ಲಿಕೆಗೆ, ವಿದ್ಯಾರ್ಥಿಗಳು ೧೦ ಅಥವಾ ೧೨ ನೇ ತರಗತಿಯಲ್ಲಿ ೫೫% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು ಮತ್ತು ತಾಂತ್ರಿಕ ಅಥವಾ ವೃತ್ತಿಪರ ಕೋರ್ಸ್‌ಗಳಾದ ಐಟಿಐ ಅಥವಾ ಪಾಲಿಟೆಕ್ನಿಕ್‌ನ ಪೂರ್ಣ ಸಮಯದ ಅಧ್ಯಯನಕ್ಕೆ ದಾಖಲಾಗಿರಬೇಕು ಮತ್ತು ಅವರ ಕುಟುಂಬಗಳ ವಾರ್ಷಿಕ ಆದಾಯವು ೩,೦೦,೦೦೦ ರೂ. ಗಿಂತ ಕಡಿಮೆ ಇರಬೇಕು. ಶಾರ್ಟ್‌ಲಿಸ್ಟ್ ಆದ ವಿದ್ಯಾರ್ಥಿಗಳು ವಾರ್ಷಿಕ ಕೋರ್ಸ್ ಶುಲ್ಕದ ೮೦% ಅಥವಾ ವರ್ಷಕ್ಕೆ ಗರಿಷ್ಠ ೨೦,೦೦೦ ರೂ. ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಹೆಲ್ಪ್‌ಲೈನ್ ಸಂಖ್ಯೆ (೧೮೦-೦೧೨-೦೫೫೭೭) ಮತ್ತು ವೆಬ್‌ಲಿಂಕ್ https://www.buddy4study.com/page/piaggio-shiksha-se-samriddhi-scholarship ಮೂಲಕ ಈ ಮೀಸಲಾದ ಟೆಲಿ ಕೌನ್ಸೆಲಿಂಗ್ ಬೆಂಬಲವನ್ನು ಒದಗಿಸಲಾಗುವುದು.

ವೆಬ್‌ಲಿಂಕ್ ಮತ್ತು ಸಹಾಯವಾಣಿ ಸಂಖ್ಯೆ ಎರಡೂ ಅಕ್ಟೋಬರ್ ೨, ೨೦೨೦ ರಿಂದ ಕಾರ್ಯನಿರ್ವಹಿಸಲಿವೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ತ್ರಿಚಕ್ರ ವಾಹನ ಚಾಲನಾ ಸಮುದಾಯದೊಂದಿಗೆ ಕೇಂದ್ರೀಯವಾಗಿ ಮತ್ತು ಪ್ರತಿ ಪಿಯಾಜಿಯೊ ವಾಣಿಜ್ಯ ವಾಹನ ಮಾರಾಟಗಾರರಲ್ಲೂ ವ್ಯಾಪಕವಾದ ತಲುಪುವಿಕೆಯ ಕಾರ್ಯಕ್ರಮದ ಮೂಲಕ ಹಂಚಿಕೊಳ್ಳಲಾಗುತ್ತದೆ. ಪಿವಿಪಿಎಲ್‌ನ ಮಾರಾಟಗಾರರಾದ್ಯಂತ ಆಫ್‌ಲೈನ್ ಅರ್ಜಿ ನಮೂನೆಗಳ ವಿತರಣೆ ಮತ್ತು ಸಂಗ್ರಹವನ್ನು ಸಹ ಮಾಡಲಾಗುತ್ತದೆ.

ಅರ್ಜಿಯಲ್ಲಿ ಭರ್ತಿ ಮಾಡಿದ ಮಾಹಿತಿಯ ಸಿಂಧುತ್ವವನ್ನು ಧೃಡೀಕರಿಸಲು ಮತ್ತು ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಅರ್ಹ ವಿದ್ಯಾರ್ಥಿಗಳ ದೂರವಾಣಿ ಸಂದರ್ಶನಗಳನ್ನು ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ಅಂತಿಮ ಆಯ್ಕೆಯ ನಂತರ, ಪ್ರತ್ಯೇಕ ಆನ್‌ಬೋರ್ಡಿಂಗ್ ಚಟುವಟಿಕೆಯನ್ನು ನಡೆಸಲಾಗುತ್ತದೆ ಮತ್ತು ಅವರ ಕಾರ್ಯಕ್ಷಮತೆಯನ್ನು ನಿರ್ದಿಷ್ಟ ಅವಧಿಯಲ್ಲಿ ಪತ್ತೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತದೆ.

ಈ ಪ್ರಕಟಣೆಯ ಕುರಿತು ಮಾತನಾಡುತ್ತಾ, ಪಿಯಾಜಿಯೊ ವೆಹಿಕಲ್ಸ್ ಪ್ರೈ. ಲಿಮಿಟೆಡ್ ನ ಅಧ್ಯಕ್ಷ ಮತ್ತು ಎಂಡಿ ಶ್ರೀ ಡಿಯಾಗೋ ಗ್ರಾಫಿ. ಹೇಳಿದರು, “ಆರ್ಥಿಕ ಸಂಪನ್ಮೂಲಗಳ ಕೊರತೆ ಮತ್ತು ಸಾಂಸ್ಥಿಕ ಬೆಂಬಲದಿಂದಾಗಿ ಅನೇಕ ಅರ್ಹ ವಿದ್ಯಾರ್ಥಿಗಳು ಭಾರತದಲ್ಲಿ ಔಪಚಾರಿಕ ಶಿಕ್ಷಣದಿಂದ ವಂಚಿತರಾಗುತ್ತಾರೆ. ಕೋವಿಡ್-೧೯ ರ ಸಾಂಕ್ರಾಮಿಕವು ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಆಟೋ ಡ್ರೈವರ್ ಸಮುದಾಯದೊಂದಿಗೆ ಮತ್ತು ಅವರಿಗೆ ಸಂಬಂಧಿಸಿದ ಸಮಸ್ಯೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ ಪಿವಿಪಿಎಲ್, ಆಟೋ ರಿಕ್ಷಾ ಚಾಲಕ ಕುಟುಂಬಗಳಿಗೆ ತಮ್ಮ ಮಕ್ಕಳ ಶೈಕ್ಷಣಿಕ ಕನಸುಗಳನ್ನು ಸಾಧಿಸಲು ಸಾಧನಗಳನ್ನು ಒದಗಿಸುವ ಮೂಲಕ ಸಮುದಾಯಕ್ಕೆ ತನ್ನ ಬೆಂಬಲವನ್ನು ವಿಸ್ತರಿಸಲು ಈ ಅವಕಾಶವನ್ನು ಪಡೆದುಕೊಂಡಿದೆ. ಪಿಯಾಜಿಯೊ ಯಾವಾಗಲೂ ಭಾರತದಲ್ಲಿ ಜವಾಬ್ದಾರಿಯುತ ಕಾರ್ಪೊರೇಟ್ ಪ್ರಜೆಯಾಗಿದ್ದಾರೆ ಮತ್ತು ಈ ಕಾರ್ಯಕ್ರಮವು ಭಾರತದಲ್ಲಿ ಆಟೋ ಚಾಲಕರ ಸಮುದಾಯದ ಉನ್ನತಿಗಾಗಿ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.” ಎಂದು ಹೇಳಿದರು.

emedialine Desk

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago