ಕಲಬುರಗಿ: ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ರಂಜಾನ್ ನ ಹಬ್ಬವನ್ನು ಕಲಬುರಗಿಯಲ್ಲಿ ಬಹಳ ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ರಂಜಾನ್ ಹಬ್ಬದ ನಿಮಿತ್ಯ ಮುಸ್ಲಿಂ ಬಾಂಧವರು ತಿಂಗಳ ಪರ್ಯಂತ ಉಪವಾಸ ಆಚರಿಸುವ ಮೂಲಕ ಅಲ್ಲಾಹನ ಕೃಪೆಗೆ ಪಾತ್ರರಾಗುವುದರ ಜೊತೆಗೆ ದಕ್ಕ ಪ್ರದೇಶವಾದ ಇಲ್ಲಿ ಬಹು ವಿಶಿಷ್ಠ ರೀತಿಯಲ್ಲಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತದೆ. ಬಿಳಿಗ್ಗಿನಿಂದ ಸಂಜೆವರೆಗೆ ಉಪವಾಸವಿರುವ ಮುಸ್ಲಿಂ ಬಾಂಧವರು ಸಂಜೆಯಾಗುತ್ತಲೇ ತಮ್ಮ ದಿನ ನಿತ್ಯದ ಕಾರ್ಯಗಳಲ್ಲದೆ ಊಟೋಪಚಾರಗಳಲ್ಲಿ ತೊಡಗುತ್ತಾರೆ.
ಹಬ್ಬದ ನಿಮಿತ್ಯ ಕೆಲವು ಹಿಂದೂಗಳು ಸಹ ತಮ್ಮ ಮನೆಗೆ ಮುಸ್ಲಿಂ ಗೆಳೆಯರನ್ನ ಆಹ್ವಾನಿಸಿ ಅವರಿಗೆ ಫಲ ಆಹಾರಗಳನ್ನು ಒದಗಿಸುವ ಮೂಲಕ ತಮ್ಮ ಪ್ರೀತಿ ಸ್ನೇಹ ಬಾಂಧವ್ಯ ಭ್ರಾತೃತ್ವ ಮೆರೆಯುತ್ತಾರೆ. ಇಲ್ಲಿನ ಮುಸ್ಲಿಂ ಬಾಂಧವರು ವಾಶಿಸುವ ಪ್ರದೇಶಗಳಲ್ಲಿ ಸಂಜೆಯಾಗುತ್ತಲೇ ಜನ ಸಂದಣಿ ಹೆಚ್ಚಾಗುತ್ತದೆ.
ಖರ್ಜುರ್, ಬಾಳೆ ಹಣ್ಣು, ಪೈನಾಪಲ್, ಸೆಬ್, ಕಲಂಗಡಿ ಮುಂತಾದ ಹಣ್ಣುಗಳಲ್ಲದೇ ಬಜಿ, ಪಕೋಡಾ, ಮುಂತಾದ ತಿನಿಸುಗಳನ್ನ ಸೇವಿಸುವುದರೊಂದಿಗೆ ಉಪವಾಸ ಬಿಡುತ್ತಾರೆ. ನಂತರ ಸಮಿಪದ ಮಸಿದಿಗೆ ತೆರಳಿ ನಮಾಜ್ ಮಾಡುವ ಮೂಲಕ ತಮ್ಮ ತಪ್ಪು ಅಪ್ಪುಗಳನ್ನು ದೇವರಿಗೆ ಅರ್ಪಿಸಿ ಕೃತರ್ಥರಾಗುತ್ತಾರೆ.
ಚಾಂದರಾತ್ ನ ವಿಶೇಷ
ಈ ದಿನ ಕಲಬುರಗಿಯ ಸೂಪರ್ ಮಾರ್ಕೆಟ್ ನಲ್ಲಿ ವಿಶೇಷ ಮಾರುಕಟ್ಟೆ ಎರ್ಪಟ್ಟಿರುತ್ತದೆ. ಅಲ್ಲಿನ ದೊಡ್ಡ ದೊಡ್ಡ ಶೋರುಮ್ ನವರು ತಮ್ಮ ತಮ್ಮ ಸಾಮಾಗ್ರಿಗಳನ್ನು ಅಂಗಡಿಯ ಮುಂದಿಟ್ಟು ಮಾರಾಟ ಮಾಡುತ್ತಿರುತಾರೆ. ಈ ವಿಶೇಷವಾದ ಮಾರುಕಟ್ಟಗೆ ಜಿಲ್ಲೆಯ ವಿವಿಧ ಭಾಗಗಳಿಂದ ಅಷ್ಟೇ ಎಕೆ, ನೆರೆಯ ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ ತಾಲೂಕುಗಳಿಂದಲು ಮುಸ್ಲಿಂ ಬಾಂಧವರು ಆಗಮಿಸಿ ತಮ್ಮಗೆ ಅಗತ್ಯ ವಾದ ಬಟ್ಟೆ ಬರೆಗಳನ್ನ ಖರೀದಿದುತ್ತಾರೆ.
ಹಾಗೇ ನೋಡಿದರೆ ಮುಸ್ಲಿಂ ಬಾಂಧವರಿಗಿಂತ ಹಿಂದೂಗಳೆ ಹೆಚ್ಚಾಗಿ ಕಾಣಸಿಗುತ್ತಾರೆ. ಅಂಗಡಿಗಳ ಮಾಲಿಕರು ಸಹ ರಂಜಾನ್ ಹಬ್ಬದ ನಿಮಿತ್ಯವಾಗಿ ತಮ್ಮ ವಸ್ತುಗಳನ್ನ ವಿಶೇಷ ರೀಯಾತಿ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ಹೀಗಾಗಿ ಈ ದಿನ ಇದನ್ನು ಚಾಂದ ರಾತ್ ಮಾರ್ಕೆಟ್ ಎಂದೆ ಕರೆಯಲ್ಪಡುತ್ತದೆ.
ಮಾರುಕಟ್ಟೆಯಲ್ಲಿ ತಮಗೆ ಬೇಕಾಗದ ವಸ್ತುಗಳನ್ನ ಖರೀದಿಸಿದ ಜನ, ಚಂದ್ರನ ವಿಶೇಷ ದರ್ಶನಕ್ಕೆ ಕಾಯುತಿರುತ್ತಾರೆ. ನಭ ಮೇಲೆ ಯಾವಗ ಹಬ್ಬದ ಚಂದ್ರ ಕಾಣಿಸಿಕೊಳುವುನೋ ಆಗ ಒಬ್ಬರಿಂದ ಒಬ್ಬರಿಗೆ ತಿಳಿಸುತ ಶುಭಕೋರುತ ಮರುದಿನದ ಹಬ್ಬದ ಸಿದ್ಧತೆಗಾಗಿ ಅಣಿಯಾಗುತ್ತಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…