ಬಿಸಿ ಬಿಸಿ ಸುದ್ದಿ

ದೇವಾಪುರ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲು ಒತ್ತಾಯ

ಸುರಪುರ: ತಾಲ್ಲೂಕಿನ ದೇವಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ತುಂಬಾ ಉಂಟಾಗಿದ್ದು,ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ತಾಲ್ಲೂಕು ಪಂಚಾಯತಿ ಕಚೇರಿ ಮುಂದೆ ಗ್ರಾಮದ ಮಹಿಳೆಯರು ಮತ್ತು ನಾಗರಿಕರು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿದ್ದ ವಿವಿಧ ಮುಖಂಡರು ಮಾತನಾಡಿ,ದೇವಾಪುರ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅನೇಕ ಬಾರಿ ಹೋರಾಟ ನಡೆಸಿ ಮನವಿ ಮಾಡಿಕೊಳ್ಳಲಾಗಿದೆ.ಆದರೆ ಇದುವರೆಗೂ ಸ್ಥಳಿಯ ಗ್ರಾಮ ಪಂಚಾಯತಿ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ.ಕಳೆದ ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ನೀರಿನ ತೊಂದರೆ ನಿವಾರಿಸುವುದಾಗಿ ಭರವಸೆ ನೀಡಿದ್ದರು,ಆದರೆ ಇದುವರೆಗೂ ಸಮಸ್ಯೆ ಹಾಗೆಯಿದೆ.ಗ್ರಾಮಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ಕೃಷ್ಣಾ ನದಿಯಿಂದ ಪೈಪ್‌ಲೈನ್ ಕಾಮಗಾರಿ ನಡೆಸಿ ಅರ್ಧಂಬರ್ಧ ಕಾಮಗಾರಿ ಮಾಡಿ ನಿಲ್ಲಿಸಿದ್ದಾರೆ.

ಅಲ್ಲದೆ ಗ್ರಾಮದಲ್ಲಿ ಕೊಳವೆಬಾವಿಗಳಿಂದ ನಲ್ಲಿಗಳಿಗೆ ನೀರು ಹರಿಸಲು ಅವಕಾಶವಿದೆ.ಆದರೆ ಗ್ರಾಮ ಪಂಚಾಯತಿಯ ಪಮಪ್ ಆಪರೇಟರ್ ನಿರ್ಲಕ್ಷ್ಯದಿಂದಾಗಿ ನಿರು ಬಿಡುತ್ತಿಲ್ಲ.ನೀರು ಬಿಡುವಂತೆ ಕೇಳಿದರೆ ಅಹಂಕಾರದ ಮಾತುಗಳಿಂದ ಜನರನ್ನು ನಿಂದಿಸುತ್ತಾರೆ.ಆದ್ದರಿಂದ ಕೂಡಲೆ ಪಂಪ್ ಆಪರೇಟರನ್ನು ಕೆಲಸದಿಂದ ತೆಗೆಯಬೇಕು.ಮತ್ತು ನದಿಯಿಂದ ನೀರು ತರಲು ನಿರ್ಮಿಸುತ್ತಿರುವ ಪೈಪಲೈನ್ ಕಾಮಗಾರಿ ಬೇಗ ಮುಗಿಸಬೇಕು.ಅಲ್ಲದೆ ಸದ್ಯ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಬೇಕು,ಒಂದು ವೇಳೆ ಈ ನಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಿದಲ್ಲಿ ದೇವಾಅಪುರ ಕ್ರಾಸ್ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಸರಕಾರಕ್ಕೆ ಒತ್ತಾಯಿಸಿದರು.

ನಂತರ ಮನವಿಯನ್ನು ತಾಲ್ಲುಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೇವಪ್ಪ ಅವರಿಗೆ ಸಲ್ಲಿಸಿದರು,ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದ ಗ್ರಾಮೀಣ ನೀರು ಸರಬರಾಜು ಇಂಜಿನಿಯರ್ ಹಣಮಂತಪ್ಪ ಅಂಬಲಿ ಹಾಗು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ ಬೈರಿಮಡ್ಡಿ,ಸಂಘಟನೆ ದೇವಪುರ ಗ್ರಾಮ ಘಟಕದ ಅಧ್ಯಕ್ಷ ಶಾಂತಗೌಡ ತಾಳಿಕೋಟೆ,ಪ್ರಧಾನ ಕಾರ್ಯದರ್ಶಿ ಮಲ್ಲು ರಾಯಣ್ಣ,ನಾಗರಾಜ ಕಲಕೇರಿ, ಉದಯಕುಮಾರ ಬಾಕಲಿ,ರವಿ ಡಂಬರ,ಯಮನಪ್ಪ ಪೂಜಾರಿ,ರಾಯಪ್ಪ ಪೂಜಾರಿ, ಶರಣಬಸವ ಯಾದವ,ಸಾಬಣ್ಣ ಡಂಬರ,ಮಾನಪ್ಪ ಜುಂಗಿ,ಯಂಕಪ್ಪ ನಾರಬಂಡಿ,ಯಂಕಮ್ಮ ಡಂಬರ, ಮಲ್ಲಮ್ಮ ಡಂಬರ, ಪದ್ಮಣ್ಣ ಇಂಗಳಗಿ, ಮಲ್ಲಪ್ಪ ಕೊಂಗಂಡಿ,ವಿಶ್ವನಾಥ ಜಾಲಹಳ್ಳಿ,ಹುಲ್ಲೇಶ ಗುತ್ತೇದಾರ,ಮಲ್ಲಿಕಾರ್ಜುನ ಸಗರ, ರಾಜಶೇಖರ ಸೂಗುರ,ಶರಣಯ್ಯಸ್ವಾಮಿ ಹಿರೇಮಠ,ಮಾಳಪ್ಪ ಕಾಮನಟಿಗಿ,ಬಲಭೀಮ ಯಮನೂರ ಸೇರಿದಂತೆ ಅನೇಕರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago