ಕಲಬುರಗಿ: ಅಥಣಿ ಶಿವಯೋಗಿಗಳು ಚುಂಬಕವಾಗಿ ಲೋಕವನ್ನೇ ಆಕರ್ಷಿಸಿದರು.ಯೋಗ್ಯರಾದವರನ್ನು ಪರುಷವಾಗಿ ಪರಿವರ್ತಿಸಿದರು. ಪ್ರದೀಪವಾಗಿ ಕೆಲವರನ್ನು ಪ್ರಕಾಶಗೊಳಿಸಿದರು.ಹಾಗೆಯೇಅವರ ಪ್ರಸಾದ ಪ್ರಭಾವದಿಂದ ಮತ್ತುಕೃಪಾದೃಷ್ಟಿಯಿಂದಅವರ ಆಶೀರ್ವಾದದಆಶ್ರಯದಿಂದತಮ್ಮಆತ್ಮ ಶಕ್ತಿಯನ್ನು ಅರಳಿಸಿಕೊಂಡವರು ಅಸಂಖ್ಯಜನ.
ನಗರದ ಬಸವ ಸಮಿತಿಯಅನುಭವ ಮಂಟಪದಲ್ಲಿ ಶರಣರ ಸ್ಮರಣಾರ್ಥ೬೪೦ ನೆಯಅರಿವಿನ ಮನೆ ಕಾರ್ಯಕ್ರಮದಲ್ಲಿಅಥಣಿ ಮುರುಘೇಂದ್ರ ಶಿವಯೋಗಿಗಳು ಎಂಬ ವಿಷಯ ಕುರಿತು ಅನುಭಾವ ನೀಡಿದ ನಿವೃತ್ತ ಪ್ರಾಂಶುಪಾಲರಾದ ಪ್ರೊ. ನಿಂಗಮ್ಮ ಪತಂಗೆ ಯವರಯ ಅಥಣಿ ಮುರುಘೇಂದ್ರ ಶಿವಯೋಗಿಗಳು ಲಿಂಗೈಕ್ಯರಾಗಿ ನೂರು ವರ್ಷಗಳಾದರೂ ಆ ತಾಣ ಇಂದಿಗೂ ಅವರು ನೆಲೆಸಿದೆ ಪರಂಜ್ಯೋತಿಯ ಸ್ಫುರಣವಾಗಿ ಅವರ ಕ್ರಿಯಾಗದ್ದುಗೆಯಲ್ಲಿ ಮತ್ತು ಆ ಪರಿಸರದಲ್ಲಿ ನೆಲೆಸಿದ ಎಂದುಅಭಿಪ್ರಾಯ ಪಟ್ಟರು.ಬೆಳಗಾವಿ ಜಿಲ್ಲೆ ಅಥಣಿತಾಲೂಕಿನ ಇಂಗಳಗಾವಿ ಎಂಬ ಗ್ರಾಮದಲ್ಲಿ ಭಾಗೋಜಿ ಮನೆತನದಲ್ಲಿ ಇವರಜನ್ಮವಾಗುತ್ತದೆ. ರಾಚಯ್ಯ ಮತ್ತು ನೀಲಮ್ಮರು ಇವರ ಪೂರ್ವಾಶ್ರಮದ ತಂದೆ-ತಾಯಿಗಳು. ಇವರಆರುಜನ ಮಕ್ಕಳಲ್ಲಿ ಮೂರನೆಯವರಾಗಿಗುರುಲಿಂಗಯ್ಯ ಜನಿಸಿ, ಇವರೇ ಮುಂದೆಅಥಣಿಯ ಮುರುಘೇಂದ್ರ ಶಿವಯೋಗಳೆಂಬ ಅಭಿದಾನ ಪಡೆಯುತ್ತಾರೆ.ಅಥಣಿಯಗಚ್ಚಿನಮಠದ ಆಗಿನ ಪೀಠಾಧಿಪತಿಗಳಾದ ಮರುಳು ಶಂಕರ ಸ್ವಾಮಿಗಳು ಬಾಲಕನನ್ನು ಬೆಳೆಸುವ ಹೊಣಗಾರಿಯನ್ನು ಹೊರುತ್ತಾರೆ.
ಮುಂದಿನ ಶಿಕ್ಷಣಕ್ಕಾಗಿ ಬಾಲಕ ಗುರುಸಂಗಯ್ಯನನ್ನುತೆಲಸಂಗದ ಬಸವಲಿಂಗ ಸ್ವಾಮಿಗಳ ಬಳಿ ಕರೆದೊಯ್ಯತ್ತಾರೆ.ಆ ಪೂಜ್ಯರು ಜ್ಞಾನಿಗಳಾಗಿದ್ದರೂ ಅವರಿಗೆಕುಷ್ಠರೋಗವಿತ್ತು.ಅವರ ಬಳಿ ಜ್ಞಾನರ್ಜನೆಗಾಗಿ ಹೋದ ಬಾಲಕ ಗುರುಲಿಂಗಯ್ಯ ಗುರುಗಳ ಕುಷ್ಠರೋಗದ ಗಾಯಗಳನ್ನು ದಿನಕ್ಕೆ ಮೂರುಬಾರಿ ಸ್ವತಃ ತೊಳೆದು ಔಷದ ಹಾಕಿ ಅವರಅಂತಃಕರಣವನ್ನುಗೆಲ್ಲುತ್ತಾರೆ. ಶಿಷ್ಯನಿಂದ ಎನ್ನಕುಷ್ಠರೋಗ ಮಾಯವಾಯಿತುಎಂದು ಬಸವಲಿಂಗ ಸ್ವಾಮಿಗಳು ಉದ್ಗಾರತೆಗೆದರೆಂದುಇತಿಹಾಸದಲ್ಲಿ ಬರುತ್ತದೆ.
ಎರಡನೆಯ ಗುರುಗಳಾದ ಗುರುಶಾಂತದೇವರಲ್ಲಿ ಸಕಲ ವಿದ್ಯಾ ಸಂಪನ್ನರಾಗಿಅವರಿಂದಲೇಚಿನ್ಮಯ ದೀಕ್ಷೆಯನ್ನು ಪಡೆದು ಮುರುಘೇಂದ್ರ ಎಂಬ ಅಭಿದಾನವನ್ನು ಸಹ ಪಡೆಯುತ್ತಾರೆ.ನಂತರಇಪ್ಪತ್ತು ವರ್ಷ ಲೋಕ ಸಂಚಾರ ಮಾಡುತ್ತ ಶಿವಯೋಗ ಸಾಧನೆಯನ್ನು ಮಾಡುತ್ತಾರೆ.ಆರು ವರ್ಷಗಳ ಕಾಲ ತಪಸ್ಸು ಮಾಡಿಯೋಗಾಂಗ ಸಿದ್ಧಿಯನ್ನು ಪಡೆಯುತ್ತಾರೆ.ಪ್ರಕೃತಿ ಶುದ್ಧಿಯನ್ನು ಹೊಂದುತ್ತಾರೆ.ತದನಂತರಅಥಣಿಯಚರಪಟ್ಟಾಧಿಕಾರವನ್ನು ವಹಿಸಿಕೊಂಡು ಅನೇಕ ಮವಾಡಗಳನ್ನು ಮಾಡಿಜನ ಮಾನಸದಲ್ಲಿ ನೆಲೆಗೊಳ್ಳುತ್ತಾರೆ.
ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಉಪಾಧ್ಯಾಕ್ಷರಾದಡಾ.ಜಯಶ್ರೀದಂಡೆ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ.ವೀರಣ್ಣದಂಡೆ ಉಪಸ್ಥಿತರಿದ್ದರು.ಶ್ರೀ ಹೆಚ್.ಕೆ.ಉದ್ದಂಡಯ್ಯಅವರು ನಿರೂಪಿಸಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…