ಬಿಸಿ ಬಿಸಿ ಸುದ್ದಿ

ಜಿಲ್ಲಾ ಜೆಡಿಎಸ್ ಯುವ ಘಟಕ ಒತ್ತಾಯ: ಕಾಮಗಾರಿ ಆರಂಭ

ಕಲಬುರಗಿ: ನಗರದ ಹುಮನಾಬಾದ ಕ್ರಾಸ್‌ದಿಂದ ರಾಮ ಮಂದಿರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ಪೂರ್ಣ ಹದಗೆಟ್ಟಿದ್ದು, ಕೂಡಲೇ ಇದನ್ನು ದುರಸ್ತಿ ಮಾಡಬೇಕೆಂದು ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಅಲಿಮುದ್ದೀನ್ ಇನಾಮದಾರ್ ನೇತೃತ್ವದಲ್ಲಿ ಇತ್ತೀಚಿಗೆ ರಾಪ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕೂಡಲೇ ಸ್ಪಂದಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಸೋಮವಾರದಿಂದ ನಗರದ ಟಿಪ್ಪು ಚೌಕ್ ಬಳಿ ಕಾಮಗಾರಿ ಕೂಡ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಅಲಿಮುದ್ದೀನ್ ಇನಾಮದಾರ್ ನೇತೃತ್ವದ ತಂಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಮತ್ತೆ ಕಳಪೆ ಕಾಮಗಾರಿ ಮಾಡದಂತೆ ಎಚ್ಚರಿಕೆ ನೀಡಿದರು.

ಪ್ರವೀಣ ಜಾಧವ, ಅರವಿಂದ ರಂಜೇರಿ, ಶಾದಾಬ್ ಮಲ್ಲೀಕ್, ಶಫಿ ಪಟೇಲ್, ನಜೀರ್ ಮೌಲಾನಾ, ನಾಗರಾಜ ರೇವಣಕರ್, ಸುಲೇಮಾನ್ ಮತ್ತಿತರರು ಇದ್ದರು.

emedialine

Recent Posts

ಕನ್ನಡದ ನೆಲದಲ್ಲಿ ಕನ್ನಡಿಗರ ಮಕ್ಕಳೇ ಉದ್ಯೋಗ ಮಿಸಲಾತಿ ಕೇಳುವಂತಹ ಪರಸ್ಥಿತಿ ಆಘಾತಕಾರಿ

ಕಲಬುರಗಿ: ಡಾ.ಸರೋಜನಿ ಮಹಿಷಿ ವರದಿ ಅನುಷ್ಠಾನಕ್ಕೆ ನಡೆದ, ನಡೆಯುತ್ತಿರುವ ಹೋರಾಟಗಳಿಗೆ ಲೆಕ್ಕವೇ ಇಲ್ಲ. ಮಹಿಷಿ ವರದಿಯ ಹೆಸರು ಹೇಳಿ ಆಳಿದ…

43 seconds ago

ವೀರಶೈವ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸದಸ್ಯ ಸಮಿತಿಗೆ ಮಹೇಶ್ ರೆಡ್ಡಿ ನಾಮಪತ್ರ ಸಲ್ಲಿಕೆ

ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸದಸ್ಯ ಸಮಿತಿಗೆ ಮಹಾಸಭಾದ ಅಧ್ಯಕ್ಷ ಶರಣಕುಮಾರ ಮೋದಿ ಹಾಗೂ ಸಮಾಜದ…

7 mins ago

ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ವಿಫಲ: ರಾಜ್ಯ ಸರಕಾರದ ವಿರುದ್ಧ ಸಾಂಕೇತಿಕ ಧರಣಿ ಸತ್ಯಾಗೃಹ

ಕಲಬುರಗಿ: ಕರ್ನಾಟಕ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ವಿಫಲವಾದ ರಾಜ್ಯ ಸರ್ಕಾರ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪುನೀತರಾಜ…

10 mins ago

ನಿವೃತ್ತಿ ಜೀವನ ಸುಖಕರವಾಗಿರಲಿ; ಪಾಟೀಲ್

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸ್ಥಳೀಯ ಪೊಲೀಸ್ ಠಾಣೆಯಲ್ಲಿ 20 ವರ್ಷ ಒಂದೇ ಕಡೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಎಎಸ್'ಐ…

15 mins ago

KKRDB ಸಭೆ: 5,000 ಕೋಟಿ ರೂ. ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಲು ಅನುಮೋದನೆ

ಕಲಬುರಗಿ: ಪ್ರಸಕ್ತ 2024-25ನೇ ಸಾಲಿನ ಆಯವ್ಯಯದಲ್ಲಿ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶದ‌ ಅಭಿವೃದ್ಧಿಗೆ ಘೋಷಿಸಿರುವ 5,000 ಕೋಟಿ ರೂ.…

11 hours ago

ರೋಗಿಗಳ ಆತ್ಮವಿಶ್ವಾಸ ಹೆಚ್ಚಿಸಲು ರೋಗಿಗಳೊಂದಿಗೆ ವೈದ್ಯರು ಹೆಚ್ಚು ಮಾತಾಡಬೇಕು: ಡಾ. ಫಾರುಕ್ ಮನ್ನೂರ

ಕಲಬುರಗಿ: ರೋಗಿಗಳೊಂದಿಗೆ ವೈದ್ಯರು ಹೆಚ್ಚುಹೊತ್ತು ಮಾತನಾಡಿದಷ್ಟು ಆತ್ಮವಿಶ್ವಾಸ ರೋಗಿಗಳಲ್ಲಿ ಬೆಳೆಯುತ್ತದೆ ಜತೆಗೆ ಕಾಯಿಲೆಯ ಬಗ್ಗೆ ವೈದ್ಯರಿಗೂ ಸ್ಪಷ್ಠತೆ ಸಿಗುತ್ತದೆ. ಇದರಿಂದಾಗಿ…

11 hours ago