ಕಲಬುರಗಿ: ನೀರಿನ ಸಮಸ್ಯೆ ಕುರಿತು ನಗರದ ನೀರು ಸರಬರಾಜು ಇಲಾಖೆಯಲ್ಲಿ ಅನೇಕ ಬಾರಿ ಮನವಿ ಮಾಡಿಕೊಂಡರು ಬಹುತೇಕ ಅಧಿಕಾರಿಗಳು ಇನಚಾರ್ಜ ಮೇಲೆ ಇರುವ ಎ.ಇ J.E., AEE ಮತ್ತು EE ಅಧಿಕಾರಿಗಳು ಯಾವುದೇ ರೀತಿಯಾಗಿ ಸಮಸ್ಯೆ ಸ್ಪಂದಿಸುತ್ತಿಲ್ಲ ಎಂದು ವಿದ್ಯಾನಗರ ವೆಲ್ ಫೇರ್ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ತಮ್ಮ ಪ್ರಕಟಣೆಯಲ್ಲಿ ಆರೋಪಿಸಿದರು.
ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಬರುವ ವಾರ್ಡ ನಂ. 45 ರಲ್ಲಿ ಇರುವ ವಿದ್ಯಾನಗರ ಕಾಲೋನಿಯಲ್ಲಿ ಸುಮಾರು 100 ಕ್ಕಿಂತಲು ಹೆಚ್ಚು ಮನೆಗಳಿವೆ, ಕೆಲವು ತಿಂಗಳ ಹಿಂದೆ 3-4 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ಈಗ ಸುಮಾರು 1 ತಿಂಗಳಿನಿಂದ 8-10 ದಿನಗಳಿಗೊಮ್ಮೆಯಾದರೂ ಸರಿಯಾಗಿ ನೀರು ಬರುತ್ತಿಲ್ಲ. ಕಾರಣ ಕೇಳಿದರೆ ನೀರು ಸರಬರಾಜು ಮಾಡುವವರು ಮೈಬೂಬ ನಗರದಲ್ಲಿರುವ ನೀರಿನ ಟ್ಯಾಂಕ್ ಪೂರ್ಣ ಪ್ರಮಾಣದಲ್ಲಿ ತುಂಬದೆ ಇರುವ ಕಾರಣಕ್ಕೆ ಈ ರೀತಿ ಸರಬರಾಜಿನಲ್ಲಿ ತೊಂದರೆಯಾಗುತ್ತಿದೆ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ.
ವಿದ್ಯಾನಗರ ಕಾಲೋನಿ ಕೇವಲ ನೀರು ಸರಬರಾಜು ಇಲಾಖೆ ವ್ಯವಸ್ಥೆ ಮೇಲೆ ಅವಲಂಭಿತವಿದ್ದು, ಒಂದು ವೇಳೆ ನೀರು ಬರದೇ ಇದ್ದರೆ ಬಡೇಪೂರ ಕಾಲೋನಿ ಮತ್ತು ಆದೇಶ ನಗರದಲ್ಲಿರುವ ಸರ್ಕಾರಿ ಬೋರವೆಲ್‌ಗಳಿಗೆ ಮೋರೆ ಹೋಗಿ ದ್ವಿಚಕ್ರ, ಆಟೋ, ಕಾರಿನ ಮತ್ತು ಮಿನಿ ಲಾರಿ ಮೂಲಕ ನೀರು ತಂದು ಬಳಕೆ ಮಾಡುತ್ತಿದ್ದೇವೆ.
ಆದ್ದರಿಂದ ಮೈಬೂಬ ನಗರ ನೀರಿನ ಟ್ಯಾಂಕನ್ ಕನೆಕ್ಷನ್ ಬದಲಾಯಿಸಿ ಅದಕ್ಕಿಂತ ಸಮೀಪ ಇರುವ ನೀರಿನ ಟ್ಯಾಂಕಿನಿಂದ ನೀರು ಸರಬರಾಜು ಮಾಡುವಂತೆ ಮಾಡಬೇಕು. 15 ದಿನದೊಳಗಡೆ ನೀರು ಸರಬರಾಜು ವ್ಯವಸ್ಥೆ ಮಾಡದಿದ್ದರೆ ಬಡಾವಣೆ ಸದಸ್ಯರು ರಸ್ತಾ ರೋಖೋ ಮಾಡುವಂತಹ ಅಥವಾ ನಿಮ್ಮ ಕಚೇರಿಯ ಎದುರುಗಡೆ ಧರಣಿ ಕೂಡುವಂತಹ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾನಗರ ವೆಲೆಫೇರ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರಾದ ಬಸವಂತರಾವ ಜಾಬಶೆಟ್ಟಿ, ಮಲ್ಲಿಕಾರ್ಜುನ ನಾಗಶೆಟ್ಟಿ, ಕಾಶಿನಾಥ ಚಿನ್ನಮಳ್ಳಿ, ಶಾಂತಯ್ಯ ಬಿದಿಮನಿ, ಸುಭಾಷ ಮಂಠಾಳೆ, ನಾಗರಾಜ ಹೆಬ್ಬಾಳ, ಕರಣ ಆಂದೋಲಾ, ಅಮೀತ ಸಿಕೇದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…