ಶಶೀಲ್ ನಮೋಶಿ ಅವರನ್ನು ಗೆಲ್ಲಿಸುವಲ್ಲಿ ಕಾರ್ಯಕರ್ತರು ಶ್ರಮಿಸಿ- ವಲ್ಯಾಪುರೆ

ಶಹಾಬಾದ:ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಅವರನ್ನು ಗೆಲ್ಲಿಸುವಲ್ಲಿ ಕಾರ್ಯಕರ್ತರು ಶ್ರಮಿಸಬೇಕೆಂದು ವಿಧಾನಪರಿಷತ್ ಸದಸ್ಯ ಹಾಗೂ ಚುನಾವಣೆಯ ಪ್ರಭಾರಿ ಸುನೀಲ ವಲ್ಯಾಪುರೆ ಹೇಳಿದರು.

ಅವರು ಗುರುವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ನಿಮಿತ್ತ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.

ಈಗಾಗಲೇ ಶಶೀಲ್ ನಮೋಶಿ ಅವರು ಮೂರು ಬಾರಿ ಸತತವಾಗಿ ಶಿಕ್ಷಕರ ಮತಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಕಳೆದ 1998,2002 ಹಾಗೂ 2008 ರಲ್ಲಿ ಶಿಕ್ಷಕರು ಅವರ ಗೆಲುವಿಗೆ ಕಾರಣರಾಗಿದ್ದಾರೆ.ಕಳೆದ 2014 ರ ಚುನಾವಣೆಯಲ್ಲಿ ಶಿಕ್ಷಕರು ಬದಲಾವಣೆ ಬಯಸಿ ಶರಣಪ್ಪ ಮಟ್ಟೂರ್ ಅವರಿಗೆ ಕೈಹಿಡಿದಿದ್ದರು.ಆದರೆ ಅವರು ಸರಕಾರಿ, ಅನುದಾನಿತ ಹಾಗೂ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ.ಅಲ್ಲದೇ ಬೆಂಗಳೂರಿನಲ್ಲಿಯೇ ಹೆಚ್ಚಿನ ಕಾಲ ಕಳೆದಿದ್ದರಿಂದ ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಶಿಕ್ಷಕರ ಸಮಸ್ಯೆಗಳನ್ನು ಆಲಿಸಿಲ್ಲ. ಈ ಬಾರಿ ನಮ್ಮ ಜಿಲ್ಲೆಯವರಾದ ಶಶೀಲ ನಮೋಶಿ ಅವರನ್ನು ಗೆಲ್ಲಿಸುವ ಭಾರ ನಮ್ಮೆಲ್ಲರ ಮೇಲಿದೆ.ಅಲ್ಲದೇ ಅವರಿಗೆ ಸಾಕಷ್ಟು ಅನುಭವ ಇದೆ.ನಮ್ಮದೇ ಸಕರ್ಾರ ಇರುವುದರಿಂದ ಶಿಕ್ಷಕರ ಸಮಸ್ಯೆಗಳನ್ನು ಆದಷ್ಟು ಬೇಗನೆ ಬಗೆಹರಿಸಬಹುದು.ಆದ್ದರಿಂದ ಈ ಬಗ್ಗೆ ಶಿಕ್ಷಕ ಮತದಾರರಿಗೆ ತಿಳಿಸುವ ಮೂಲಕ ಶಶೀಲ ನಮೋಶಿ ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ.ಅದಕ್ಕೆ ಎಲ್ಲಾ ಕಾರ್ಯಕರ್ತರು ಶ್ರಮವಹಿಸಬೇಕೆಂದು ಹೇಳಿದರು.

ನಗರ ಸಹ ಉಸ್ತುವಾರಿ ಮುರುಳಿಧರ್ ಕುಲಕರ್ಣಿ ಮಾತನಾಡಿದರು. ನಗರ ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಚಿತ್ತಾಪೂರ ಬಿಜೆಪಿ ಅಧ್ಯಕ್ಷ ನೀಲಕಂಠರಾವ ಪಾಟೀಲ,ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಭಾಗಿರಥಿ ಗುನ್ನಾಪೂರ,ಜ್ಯೋತಿ ಶರ್ಮಾ, ಶಶಿಕಲಾ ಸಜ್ಜನ್, ನಿಂಗಣ್ಣ ಹುಳಗೋಳಕರ್,ಸೂರ್ಯಕಾಂತ ವಾರದ,ಮಹಾದೇವ ಗೊಬ್ಬೂರಕರ್,ಅನೀಲ ಭೋರಗಾಂವಕರ್, ಭೀಮರಾವ ಸಾಳುಂಕೆ, ಅಪ್ಪಾರಾವ ಪಾಟೀಲ ಮಾಲಗತ್ತಿ, ಕನಕಪ್ಪ ದಂಡಗುಕರ್,ಅರುಣ ಪಟ್ಟಣಕರ್, ಚಂದ್ರಕಾಂತ ಗೊಬ್ಬುರಕರ್, ಶಿವುಗೌಡ ಪಾಟೀಲ,ವೈಜನಾಥ ಹುಗ್ಗಿ, ರಾಜು ದಂಡಗುಲಕರ್ ಇತರರು ಇದ್ದರು.

ಸದಾನಂದ ಕುಂಬಾರ ನಿರೂಪಿಸಿದರು, ಬಸವರಾಜ ಬಿರಾದಾರ ಸ್ವಾಗತಿಸಿದರು, ಸಂಜಯ ಕೋರೆ ವಂದಿಸಿದರು.

emedia line

Recent Posts

ಸುಗ್ರೀವಾಜ್ಞೆ ಮೂಲಕ ಒಳಮೀಸಲಾತಿ ಜಾರಿಗೊಳಿಸಲು ಆಗ್ರಹ

ಶಹಾಬಾದ: ಸುಗ್ರೀವಾಜ್ಞೆ ಮೂಲಕ ಕೂಡಲೇ ಒಳಮೀಸಲಾತಿ ಜಾರಿಗೊಳಿಸುವಂತೆ ಅಗ್ರಹಿಸಿ ದಲಿತ ಮಾದಿಗ ಸಮನ್ವಯ ಸಮಿತಿ(ಡಿಎಂಎಸ್‍ಎಸ್)ಯಿಂದ ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ…

12 mins ago

ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಬಿಡುಗಡೆಗೆ ಕಾರ್ಮಿಕರ ಆಗ್ರಹ

ಶಹಾಬಾದ: ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಶೀಘ್ರವೇ ಬಿಡುಗಡೆ ಮಾಡಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು…

14 mins ago

ದಿಗ್ಗಾಂವ ಶ್ರೀ ಭಕ್ತರ ಕ್ಷಮೆಯಾಚಿಸಲಿ

ವಾಡಿ: ಶಿಲೆಗೆ ಪ್ರಾಣಪ್ರತಿಷ್ಠೆ ನೀಡಿ ಪೂಜೆಗೆ ಅರ್ಹವಾಗಿಸುವ ಭರದಲ್ಲಿ ಶಿವಲಿಂಗದ ಮೇಲೆ ಪಾದವಿಟ್ಟು ಅಸಂಖ್ಯಾತ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ…

16 mins ago

ಶರಣಬಸವ ವಿಶ್ವವಿದ್ಯಾಲಯದಲ್ಲಿ 14ರಂದು ರಾಷ್ಟ್ರೀಯ ವಿಚಾರ ಸಂಕಿರಣ

ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಜಂಟಿಯಾಗಿ, ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ…

1 hour ago

ಕಾ.ಸೀತಾರಾಮ ಯೇಚೂರಿಗೆ ಸಿಪಿಐಎಂ ಕಚೇರಿಯಲ್ಲಿ ಶೃದ್ಧಾಂಜಲಿ

ಕಲಬುರಗಿ: ಸಿಪಿಐಎಂ ಪಕ್ಷದ ಅಖಿಲ ಭಾರತ ಪ್ರದಾನ ಕಾರ್ಯದರ್ಶಿಗಳಾಗಿದ್ದ 72 ವಯಸ್ಸಿನ ಕಾ.ಸೀತಾರಾಮ ಯೇಚೂರಿಯವರು ಇಂದು ಸಂಜೆ ನಿಧನ ಹೊಂದಿದ್ದು,…

2 hours ago

ಕ್ರೀಡೆಗಳು ವಿದ್ಯಾರ್ಥಿಗಳನ್ನು ಸಧೃಡ ಆರೋಗ್ಯವಾಗಿ ಇಡುತ್ತವೆ

ಕಲಬುರಗಿ: ಕ್ರೀಡೆಗಳು ವಿದ್ಯಾರ್ಥಿಗಳು ಸದೃಢವಾಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಅವರು ದೈನಂದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅನಿರೀಕ್ಷಿತ ರೋಗಗಳು…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420