ಕಲಬುರಗಿ: ಸಿಪಿಐಎಂ ಪಕ್ಷದ ಅಖಿಲ ಭಾರತ ಪ್ರದಾನ ಕಾರ್ಯದರ್ಶಿಗಳಾಗಿದ್ದ 72 ವಯಸ್ಸಿನ ಕಾ.ಸೀತಾರಾಮ ಯೇಚೂರಿಯವರು ಇಂದು ಸಂಜೆ ನಿಧನ ಹೊಂದಿದ್ದು, ಕಲಬುರಗಿ ಜಿಲ್ಲಾ ಪಕ್ಷದ ಕಚೇರಿಯಲ್ಲಿ ಹಿರಿಯ ಮುಖಂಡರಿಂದ ಶೃದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ವಿದ್ಯಾರ್ಥಿ ಜೀವನದಿಂದಲೇ ಚಳುವಳಿಗೆ ಧುಮುಕಿದ್ದ ಕಾ.ಸೀತಾರಾಮ ಅವರು ಅಂದಿನ ಪ್ರದಾನ ಮಂತ್ರಿಯವರಾಗಿದ್ದ ಇಂದಿರಾಗಾಂಧಿಯವರ ಧೋರಣೆ ಖಂಡಿಸಿ ಹೋರಾಟ ಮಾಡಿ ಜೈಲು ಸೇರಿದ್ದರು. ನಂತರ ಶ್ರಮಿಕರ ಪರವಾದ ಧೋರಣೆಯೊಂದಿಗೆ ಮುಂದುವರೆದ ಅವರ ಹೋರಾಟದ ಬದುಕು ಸೈದ್ಧಾಂತಿಕ ಬದ್ಧತೆಯೊಂದಿಗೆ ಇಲ್ಲಿವರೆಗೆ ಬಂದಿತು ಎಂದು ತಿಳಿಸಿದ್ದರು.
ಎರಡು ಬಾರಿ ಸಂಸದರಾಗಿ ನೀತಿ ನಿರೂಪಣೆಯಲ್ಲಿ ಅವರು ಕೊಟ್ಟ ಕೊಡುಗೆ ಅಗಾಧವಾದದ್ದು. ಅತ್ಯಂತ ವಿವೇಕಪೂರ್ಣವಾದ ಶ್ರಮಿಕರ ಪರವಾದ ವಾಕ್ಪಟುವಾಗಿದ್ದರು. ಭಾರತದಲ್ಲಿ ಸಿಪಿಐಎಂ ಪಕ್ಷವನ್ನು ಕಟ್ಟುವಲ್ಲಿ, ಬಹುಸಾಂಸ್ಕೃತಿಕ ಪರಂಪರೆಯನ್ನು ಬಲಿಷ್ಠಗೊಳಿಸುವಲ್ಲಿ ಕಾ.ಸೀತಾರಾಮ ಯೇಚೂರಿಯವರ ಅನವರತ ಶ್ರಮ ಭಾರತ ಎಂದೂ ಮರೆಯದು ಎಂದು ನೆನೆಪಿಸಿಕೊಂಡರು.
ದೇಶದ ಐಕ್ಯತೆಗಾಗಿ, ಭಾವೈಕ್ಯ ಪರಂಪರೆಗಾಗಿ, ಕೋಮುಸೌಹಾರ್ದತೆಗಾಗಿ ಕಾ.ಯೇಚೂರಿ ದಣಿವರಿಯದೆ ಶ್ರಮಿಸುವ ಸಂಗಾತಿಯಾಗಿದ್ದರು. ಫ್ಯಾಸಿಜಂನ ಕರಾಳ ಮುಖವನ್ನು ಬಯಲುಗೊಳಿಸಿ ಅದನ್ನು ಹಿಮ್ಮೆಟ್ಟಿಸಲು ಪಕ್ಷವನ್ನು ಮುನ್ನಡೆಸಿದವರು. ಚಿಂತನೆ ಮತ್ತು ಚಳುವಳಿ ಮೇಳೈಸಿದಂತಹ ವ್ಯಕ್ತಿತ್ವ ಅವರದಾಗಿತ್ತು ಎಂದು ತಿಳಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…