ಕಲಬುರಗಿ: ಪರಿಸರ ಅಸಮತೋಲನ ಮತ್ತು ವಾತಾವರಣ ಏರುಪೇರು ಆಗುವುದನ್ನು ತಡೆಗಟ್ಟಲು ಮಾನದಂಡಗಳ ಅನಿವಾರ್ಯತೆಯಿದ್ದು ಜನರು ಅದಕ್ಕೆ ತಕ್ಕಂತೆ ತಮ್ಮ ಜೀವನ ಶೈಲಿಯನ್ನು ರೂಪಿಸಿಕೊಂಡರೆ ಮಾತ್ರ ನಮ್ಮ ಪರಿಸರವನ್ನು ಸಧೃಢಗೊಳಿಸಬಹುದಾಗಿದೆ ಎಂದು ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಅಶೋಕ ಪಾಟೀಲ ತಮ್ಮ ಅಭಿಮತ ವ್ಯಕ್ತಪಡಿಸಿದರು.
ನಗರದ ಇನಸ್ಟಿಟ್ಯೂಟ್ ಆಫ್ ಇಂಜಿನಿಯರ‍್ಸನ್ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಲಾಗಿದ್ದ “ಇಂಟರ್‌ನ್ಯಾಶನಲ್ ಸ್ಟ್ಯಾಂಡರ‍್ಡ್ ಡೇ – ೨೦೨೦”ರಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ “ಪ್ರೋಟೆಕ್ಟಿಂಗ್ ಪ್ಲಾನಟ್ ವಿತ್ ಸ್ಟ್ಯಾಂಡರ‍್ಡ್’ ಎಂಬ ವಿಷಯದ ಮೇಲೆ ಮಾತನಾಡಿದರು. ಇನಸ್ಟಿಟ್ಯೂಟ್ ಆಫ್ ಇಂಜಿನಿಯರ‍್ಸನ್ ಅದ್ಯಕ್ಷರಾದ ಬಿ.ಎಸ್.ಮೋರೆ ಅವರು ಇಂದಿನ ಪರಿಸರ ಅಸಮತೋಲನ ಹಾಗೂ ಕೋವಿಡ್ – ೧೯ನ ಪರಿಣಾಮ ಕುರಿತು ಮಾತನಾಡುತ್ತ ಇಂದು ನಮ್ಮ ಗೃಹವನ್ನು ಮಾನದಂಡಗಳು ಹಾಗೂ ಅಳತೆಗೋಳುಗಳನ್ನು ಗಮನದಲ್ಲಿಟ್ಟುಕೊಂಡು ಅದನ್ನು ಸಂರಕ್ಷಿಸಬೇಕಾಗಿದೆ ಎಂದು ಹೇಳಿದರು.
ಈ ಸಮಾರಂಭದಲ್ಲಿ ಕಾಶಪ್ಪ ವಾಂಜರಖೇಡೆ, ನಿವೃತ್ತ ಉಪ-ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ, ಕಲಬುರಗಿ, ಪ್ರಕಾಶ ಹಾರಕೂಡೆ, ಜಂಟಿ ನಿರ್ದೆಶಕರು, ಟೌನ್ ಪ್ಲಾನಿಂಗ್, ಡಾ. ರವೀಂದ್ರ ಮಾಲಿಪಾಟೀಲ, ಪಿ.ಡಿ.ಎ, ಕಾಲೇಜು, ಚಂದ್ರಶೇಖರ ಗುರುಗುಂಟಿ ನಿವೃತ್ತ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು, ಕಲಬುರಗಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಇನಸ್ಟಿಟ್ಯೂಟ್ ಆಫ್ ಇಂಜಿನಿಯರ‍್ಸನ್ ಕಾರ್ಯದರ್ಶಿಗಳಾದ ಡಾ.ಬಾಬುರಾವ ಶೇರಿಕಾರ ಸರ್ವರನ್ನು ಸ್ವಾಗತಿಸಿದರು. ಅದ್ಯಕ್ಷರಾದ ಬಿ.ಎಸ್.ಮೋರೆ ಅಧ್ಯಕ್ಷತೆ ವಹಿಸಿದ್ದರು ಹಾಗೂ ಚಂದ್ರಶೇಖರ ಗುರುಗುಂಟಿ ಇವರು ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…