Tuesday, July 16, 2024
ಮನೆಬಿಸಿ ಬಿಸಿ ಸುದ್ದಿಪರಿಸರ ಸಮತೋಲನಕ್ಕೆ ಮಾನದಂದಡ ಅನಿವಾರ್ಯ

ಪರಿಸರ ಸಮತೋಲನಕ್ಕೆ ಮಾನದಂದಡ ಅನಿವಾರ್ಯ

ಕಲಬುರಗಿ: ಪರಿಸರ ಅಸಮತೋಲನ ಮತ್ತು ವಾತಾವರಣ ಏರುಪೇರು ಆಗುವುದನ್ನು ತಡೆಗಟ್ಟಲು ಮಾನದಂಡಗಳ ಅನಿವಾರ್ಯತೆಯಿದ್ದು ಜನರು ಅದಕ್ಕೆ ತಕ್ಕಂತೆ ತಮ್ಮ ಜೀವನ ಶೈಲಿಯನ್ನು ರೂಪಿಸಿಕೊಂಡರೆ ಮಾತ್ರ ನಮ್ಮ ಪರಿಸರವನ್ನು ಸಧೃಢಗೊಳಿಸಬಹುದಾಗಿದೆ ಎಂದು ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಅಶೋಕ ಪಾಟೀಲ ತಮ್ಮ ಅಭಿಮತ ವ್ಯಕ್ತಪಡಿಸಿದರು.

ನಗರದ ಇನಸ್ಟಿಟ್ಯೂಟ್ ಆಫ್ ಇಂಜಿನಿಯರ‍್ಸನ್ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಲಾಗಿದ್ದ “ಇಂಟರ್‌ನ್ಯಾಶನಲ್ ಸ್ಟ್ಯಾಂಡರ‍್ಡ್ ಡೇ – ೨೦೨೦”ರಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ “ಪ್ರೋಟೆಕ್ಟಿಂಗ್ ಪ್ಲಾನಟ್ ವಿತ್ ಸ್ಟ್ಯಾಂಡರ‍್ಡ್’ ಎಂಬ ವಿಷಯದ ಮೇಲೆ ಮಾತನಾಡಿದರು. ಇನಸ್ಟಿಟ್ಯೂಟ್ ಆಫ್ ಇಂಜಿನಿಯರ‍್ಸನ್ ಅದ್ಯಕ್ಷರಾದ ಬಿ.ಎಸ್.ಮೋರೆ ಅವರು ಇಂದಿನ ಪರಿಸರ ಅಸಮತೋಲನ ಹಾಗೂ ಕೋವಿಡ್ – ೧೯ನ ಪರಿಣಾಮ ಕುರಿತು ಮಾತನಾಡುತ್ತ ಇಂದು ನಮ್ಮ ಗೃಹವನ್ನು ಮಾನದಂಡಗಳು ಹಾಗೂ ಅಳತೆಗೋಳುಗಳನ್ನು ಗಮನದಲ್ಲಿಟ್ಟುಕೊಂಡು ಅದನ್ನು ಸಂರಕ್ಷಿಸಬೇಕಾಗಿದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ ಕಾಶಪ್ಪ ವಾಂಜರಖೇಡೆ, ನಿವೃತ್ತ ಉಪ-ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ, ಕಲಬುರಗಿ, ಪ್ರಕಾಶ ಹಾರಕೂಡೆ, ಜಂಟಿ ನಿರ್ದೆಶಕರು, ಟೌನ್ ಪ್ಲಾನಿಂಗ್, ಡಾ. ರವೀಂದ್ರ ಮಾಲಿಪಾಟೀಲ, ಪಿ.ಡಿ.ಎ, ಕಾಲೇಜು, ಚಂದ್ರಶೇಖರ ಗುರುಗುಂಟಿ ನಿವೃತ್ತ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು, ಕಲಬುರಗಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಇನಸ್ಟಿಟ್ಯೂಟ್ ಆಫ್ ಇಂಜಿನಿಯರ‍್ಸನ್ ಕಾರ್ಯದರ್ಶಿಗಳಾದ ಡಾ.ಬಾಬುರಾವ ಶೇರಿಕಾರ ಸರ್ವರನ್ನು ಸ್ವಾಗತಿಸಿದರು. ಅದ್ಯಕ್ಷರಾದ ಬಿ.ಎಸ್.ಮೋರೆ ಅಧ್ಯಕ್ಷತೆ ವಹಿಸಿದ್ದರು ಹಾಗೂ ಚಂದ್ರಶೇಖರ ಗುರುಗುಂಟಿ ಇವರು ವಂದಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular