ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದ ಚುನಾವಣೆ: ಅಧಿಕಾರಿಗಳಿಗೆ ತರಬೇತಿ

ಕಲಬುರಗಿ: ಚುನಾವಣೆಯಲ್ಲಿ ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿಆರ್‍ಓ)ಯ ಪಾತ್ರ ಬಹುಮುಖ್ಯವಾಗಿರುತ್ತದೆ. ಮತಗಟ್ಟೆಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಳ್ಳುವುದು ಪಿ.ಆರ್.ಓ. ಕರ್ತವ್ಯವಾಗಿದೆ ಎಂದು ರಾಷ್ಟ್ರೀಯಮಟ್ಟದ ಮಾಸ್ಟರ್ ಟ್ರೈನರ್ ಆದ ಕಲಬುರಗಿಯ ಸರಕಾರಿ ಮಹಿಳಾ ಪದವಿ ಕಾಲೇಜು ಸಹ ಪ್ರಾಧ್ಯಾಪಕರಾದ ಡಾ. ಶಶಿಶೇಖರ ರೆಡ್ಡಿ ಅವರು ತಿಳಿಸಿದ್ದಾರೆ.

ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದ ಚುನಾವಣೆ-2020 ಕುರಿತು ಪ್ರಿಸೈಡಿಂಗ್ ಅಧಿಕಾರಿಗಳು ಮತ್ತು ಪೋಲಿಂಗ್ ಅಧಿಕಾರಿಗಳಿಗೆ ಜಿಲ್ಲಾಡಳಿತ ವತಿಯಿಂದ ಗುರುವಾರದಂದು ಪಂಡಿತ ರಂಗಮಂದಿರದಲ್ಲಿ ಮೊದಲನೇಯ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡುತಿದ್ದ ಅವರು, ಈ ಅಧಿಕಾರಿಗಳು ಶಿಸ್ತು ಮತ್ತು ಸಮಯಪಾಲನೆ ಕೂಡ ಮಾಡಬೇಕೆಂದು ಹೇಳಿದರು.

ಇತ್ತೀಚೆಗೆ ಚುನಾವಣೆ ಸಂಬಂಧ ಬದಲಾಗುತ್ತಿರುವ ಕಾನೂನು ವಿಧಾನಗಳನ್ನು ಬಗ್ಗೆ ತಿಳಿದುಕೊಳ್ಳಬೇಕು. ಚುನಾವಣೆಗೆ ಸಂಬಂಧಿಸಿದ ಎಲ್ಲಾ ಆದೇಶಗಳ ಪ್ರತಿಗಳನ್ನು ಹೊಂದಿರಬೇಕು. ಮಹಿಳೆಯರು, ಪುರುಷರು, ವಿಕಲಚೇತನರು, ವೃದ್ಧರು, ಗರ್ಭಿಣಿಯರು, ಅಸಹಾಯಕರು ಮುಂತಾದ ಮತದಾರರಿಗೆ ಮತದಾನಕ್ಕೆ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು ಎಂದರು.

ಪರಿಶೀಲನಾ ಪಟ್ಟಿಯ ಪ್ರಕಾರ ಚುನಾವಣಾ ಸಾಮಾಗ್ರಿಗಳು ಸರಿಯಾಗಿರುವದನ್ನು ಖಾತ್ರಿಪಡಿಸಿಕೊಳ್ಳಬೇಕು. ಚುನಾವಣೆ ಅಕ್ಟೋಬರ್ 28ನೇ ತಾರೀಖ ನಡೆಯುವ ಬೆಳಿಗ್ಗೆ 7 ಗಂಟೆಗೆ ತಮ್ಮ ತಮ್ಮ ಬೂತ್Àಗಳಲ್ಲಿ ಎಲ್ಲಾ ಸಿಬ್ಬಂದಿಗಳ ಜೊತೆಗೆ ಸರಿಯಾದ ಸಮಯಕ್ಕೆ ಹಾಜರಿರಬೇಕು ಎಂದು ಹೇಳಿದರು.

ಮತದಾನದ ದಿನದಂದು 7.30 ಘಂಟೆಗೆ ಪ್ರಕ್ರಿಯೆ ಪ್ರಾರಂಭಿಸಿ, ಹಾಜರಿರುವ ಏಜೆಂಟರಿಗೆ ಪರೀಕ್ಷಿಸಲು ಅವಕಾಶ ನೀಡಬೇಕು. ಈಶಾನ್ಯ ವಲಯದ ಶಿಕ್ಷಕರ ಚುನಾವಣೆ ಮುಂಜಾನೆ 8 ಗಂಟೆಯಿಂದ ಪ್ರಾರಂಭವಾಗಿ ಸಂಜೆ 5 ಗಂಟೆಯವರೆಗೆ ನಡೆಯುತ್ತದೆ. ಉಮೇದುವಾರ/ಏಜೆಂಟ್/ಪ್ರತಿನಿಧಿಗೆ ಮತದಾನದ ರಹಸ್ಯ ಕಾಪಾಡಲು ಎಚ್ಚರಿಕೆ ನೀಡಬೇಕು ಎಂದು ತಿಳಿಸಿದರು.

ಮತದಾನದ ಸಂದರ್ಭದಲ್ಲಿ ಕೋವಿಡ್-19 ತಡೆಗಟ್ಟುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ಕ್, ಸ್ಯಾನಿಟೈಸರ್ (ಜೆಲ್ ಅಥವಾ ಸ್ಪ್ರೇ), ಥರ್ಮಲ್ ಗನ್, ಸಾಮಾಜಿಕ ಅಂತರ ಕಾಪಾಡುವುದು, ಚಳಿ, ಜ್ವರ ಕೆಮ್ಮು ಉಸಿರಾಟದ ತೊಂದರೆ ಇದ್ದರೆ ಸೂಕ್ತ ಕ್ರಮ ವಹಿಸುವುದು. ಆರೋಗ್ಯ ಸೇತು ಆಪ್ ಡೌನ್ಲೋಡ್ ಮಾಡಿಕೊಳ್ಳುವುದು. ಮತಗಟ್ಟೆಯನ್ನು ಸ್ಯಾನಿಟೈಜೇಶನ್ ಮಾಡುವುದು ಮುಂತಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.

ಒಬ್ಬ ಮತಗಟ್ಟ್ಟೆಯ ಅಧಿಕಾರಿ ಎದುರಲ್ಲಿ ಒಬ್ಬ ಮತದಾರ ಮಾತ್ರ ಇರಬೇಕು. ಮತದಾರರ ದಟ್ಟಣೆ ಹೆಚ್ಚಿದ್ದರೆ ಟೋಕನ್ ನೀಡಬೇಕು. ಮತಗಟ್ಟೆಯ ಹೊರಗೆ ಮತದಾರರು ಸಾಮಾಜಿಕ ಅಂತರದಿಂದರಬೇಕು ಎಂದು ಸಲಹೆ ನೀಡಿದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

1 hour ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

1 hour ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

1 hour ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

1 hour ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

1 hour ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420