ಸುರಪುರ: ನಾನು ಇಲ್ಲಿಯ ವರೆಗೆ ೧೧ ಬಾರಿ ಕೊರೊನಾ ಪರೀಕ್ಷೆ ಮಾಡಿಸಿದ್ದೇನೆ ಆದರೆ ಇಲ್ಲಿಯವರೆಗೆ ನನಗರ ಕೊರೊನಾ ಪಾಸಿಟಿವ್ ಬಂದಿಲ್ಲ,ಆದರೆ ನನಗೆ ಕೊರೊನಾ ಪಾಸಿಟಿವ್ ಬಂದಿದೆ,ಚಿಕಿತ್ಸಾ ವೆಚ್ಚವಾಗಿ ೧೨ ಲಕ್ಷ ರೂಪಾಯಿ ಸರಕಾರದಿಂದ ಪಡೆದಿರುವುದಾಗಿ ಸುಳ್ಳು ಸುದ್ದಿಯನ್ನು ಹರಡಲಾಗಿದೆ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವೀಡಿಯೊ ಸಂದೇಶ ಒಂದನ್ನು ನೀಡಿರುವ ಅವರು,ಖಾಸಗಿ ಸುದ್ದಿ ವಾಹಿನಿಯೊಂದು ನನಗೆ ಕೊರೊನಾ ಬಂದಿದೆ,ಕೊರೊನಾದ ಚಿಕಿತ್ಸೆಗಾಗಿ ಸರಕಾರದಿಂದ ೧೨ ಲಕ್ಷ ರೂಪಾಯಿಗಳ ಚಿಕಿತ್ಸಾ ವೆಚ್ಚ ಪಡೆದಿರುವುದಾಗಿ ಸುದ್ದಿ ಹರಡಲಾಗಿದೆ.ಇದು ಸತ್ಯಕ್ಕೆ ದೂರವಾಗಿದೆ.
ಸುದ್ದಿ ಪ್ರಸಾರ ಮಾಡುವವರು ನನ್ನಿಂದ ಯಾವುದೇ ಮಾಹಿತಿಯನ್ನು ಪಡೆಯದೆ ಸುಳ್ಳು ಸುದ್ದಿ ಹಬ್ಬಿಸಿರುವುದು ಬೇಸರ ಮೂಡಿಸಿದೆ.ಸ್ಪಷ್ಟತೆ ಇಲ್ಲದೆ ಸುಳ್ಳು ಸುದ್ದಿ ಹರಡುವುದು ಸರಿಯಲ್ಲ.ನಾನು ಅನೇಕ ಜನರು ಸಂಕಷ್ಟದಲ್ಲಿರುವಾಗ ನೆರವಾಗಿದ್ದೇನೆ,ಆದರೆ ನಾನು ಸರಕಾರದಿಂದ ಚಿಕಿತ್ಸಾ ವೆಚ್ಚ ಪಡೆದಿರುವುದಾಗಿ ಹೇಳುವ ಮೂಲಕ ಜನರಲ್ಲಿ ತಪ್ಪು ಸಂದೇಶ ಹರಡುವುದು ನೋವಿನ ಸಂಗತಿಯಾಗಿದೆ.
ಯಾರೇ ಆಗಲಿ ನನಗೆ ಕೊರೊನಾ ಸೊಂಕು ತಗುಲಿದ್ದರ ಬಗ್ಗೆ ಚರ್ಚೆ ಮಾಡುವುದಾದರೆ ಮಾಡಲಿ ಅದು ಬಿಟ್ಟು ವಿಷಯ ಸ್ಪಷ್ಟನೆ ಇಲ್ಲದೆ ಸುದ್ದಿ ತೋರಿಸುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…