ಬಿಸಿ ಬಿಸಿ ಸುದ್ದಿ

ಅ.27 ರಂದು ಕವಿರಾಜ ಮಾರ್ಗ ನೆಲದಿಂದಲೇ ಚಾಲನೆ

ಕಲಬುರಗಿ: ಕನ್ನಡವು ಕೇವಲ ನವ್ಹೆಂಬರ್ ತಿಂಗಳದ್ದಾಗದೇ ನಾವಿರುವವರೆಗೆ ಬಳಸುವ ಮೂಲಕ ಬೆಳೆಸಬೇಕೆನ್ನುವ ಅಭಿಲಾಷೆಯನ್ನಿಟ್ಟುಕೊಂಡು ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ನಿರಂತರವಾಗಿ ಹಮ್ಮಿಕೊಳ್ಳಲು ನಿರ್ಧರಿಸಿರುವ ‘ಜಗದೇಳಿಗೆಯಾಗುವದಿದೆ ಕರ್ನಾಟಕದಿಂದೆ’ ಎಂಬ ಕನ್ನಡಾಭಿಮಾನದ ಅಭಿಯಾನವನ್ನು ಜಿಲ್ಲೆಯ ಗಡಿ ಭಾಗದ ಪ್ರದೇಶಗಳು ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ-ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದರು.

ನಗರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೇಗಲತಿಪ್ಪಿ, ‘ಮಾನವ ಕುಲಂ ತಾನೊಂದೆ ವಲಂ’ ಎಂದಿರುವ ಕನ್ನಡದ ಆದಿ ಕವಿ ಪಂಪನಾದಿಯಾಗಿ ಕನ್ನಡಿಗರೆಲ್ಲರೂ ಬಾಳು ಭೂಮಿ ಇರುವ ತನಕ ನಗುತಲಿರಲಿ ಕನ್ನಡ ಎಂದು ಕನ್ನಡ ಭಾಷೆಯನ್ನು ಆಚರಿಸುತ್ತಾ ಹಾರೈಸಿದ್ದಾರೆ. ಕನ್ನಡದ ಕೊರಳು ಪಾಂಚಜನ್ಯವನ್ನು ಮೊಳಗಿಸುತ್ತದೆ. ಕನ್ನಡಕ್ಕಾಗಿ ಎತ್ತಿದ ಕೈ ಕಲ್ಪವೃಕ್ಷವಾಗುತ್ತದೆ. ಇಂಥ ಕನ್ನಡ ನೆಲದಿಂದಲೇ ಜಗದೇಳಿಗೆಯಾಗುವದಿದೆ ಎಂದು ಅನೇಕ ಕವಿವರ್ಯರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾದ ಸಂದಿಗ್ಧ ಸಂದರ್ಭದಲ್ಲೂ ಕೊರೊನಾದಿಂದ ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಸಂಬಂಧಿತ ವಿಷಯಗಳನ್ನು ತಿಳಿಸುತ್ತಾ, ನೆರೆ ಹಾವಳಿಯಿಂದ ತತ್ತರಿಸಿರುವ ಜನರಿಗೆ ಆತ್ಮಸ್ಥೈರ್ಯ ತುಂಬುವುದರ ಜತೆಗೆ, ಕನ್ನಡದ ರಥವನ್ನು ಸಮರ್ಪಕವಾಗಿ ಮುನ್ನಡೆಸುವ ಕಾರ್ಯ ಮಾಡಬೇಕಾಗಿದೆ. ಈ ಕಾರ್ಯ ವಿಶ್ವಜ್ಯೋತಿ ಪ್ರತಿಷ್ಠಾನ ವರ್ಷಪೂರ್ತಿಯಾಗಿ ಮಾಡುತ್ತಲೇ ಬರುತ್ತಿದೆ ಎಂದು ಅವರು ವಿವರಿಸಿದರು.

ಕರ್ನಾಟಕದಲ್ಲಿಯೇ ಕನ್ನಡ ಭಾಷೆಯನ್ನಾಡುವುದು ಕೀಳರಿಮೆಯೆಂದು ಭಾವಿಸಿದ ಕೆಲ ಕನ್ನಡಿಗರ ಕಣ್ಣು ತೆರೆಸಬೇಕಾಗಿದೆ. ಅನ್ಯ ಭಾಷೆಗಳ ಆರ್ಭಟದಲ್ಲಿ ಕನ್ನಡ ಕಣ್ಮರೆಯಾಗದಂತೆ ಕಾಪಾಡುವುದು ಕನ್ನಡಿಗರೆಲ್ಲರ ಕರ್ತವ್ಯವಾಗಿದೆ.

ಅಕ್ಟೋಬರ್ ೨೭ ರಿಂದ ಕನ್ನಡದ ಉಗಮ ಸ್ಥಾನವಾದ-ಕವಿರಾಜ ಮಾರ್ಗ ನೆಲವಾದ ಮಳಖೇಡದಿಂದಲೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಅಂದಿನ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಕವಿ-ಸಾಹಿತಿಗಳು, ಪತ್ರಕರ್ತರು, ಕನ್ನಡಾಭಿಮಾನಿಗಳು ಉಪಸ್ಥಿತರಿರಲಿದ್ದು, ನುರಿತ ಸಂಪನ್ಮೂಲ ವ್ಯಕ್ತಿ ಯೊಬ್ಬರೂ ಮಾತೃಭಾಷಾಭಿಮಾನದ ಕುರಿತು ಮಾತನಾಡಲಿದ್ದಾರೆ.

ಮರಾಠಿ ಮತ್ತು ತೆಲುಗು ಭಾಷೆಯ ಪ್ರಭಾವವಿರುವ ಜಿಲ್ಲೆಯ ಗಡಿಭಾಗದ ಪ್ರದೇಶಗಳಾದ ಮುಧೋಳ, ಚಿಂಚೊಳಿ, ಸೇಡಂ, ಆಳಂದ, ಖಜೂರಿ, ಅಣೂರ, ಮಾದನ ಹಿಪ್ಪರಗಾ, ಮಾಡಿಯಾಳ, ಧುತ್ತರರಗಾಂವ, ತಡಕಲ್, ಅಫಜಲಪುರ, ಮಣ್ಣೂರ, ಮಾಶಾಳ, ಕರ್ಜಗಿ ಸೇರಿದಂತೆ ಶಹಾಬಾದ, ಕಮಲಾಪುರ, ಜೇವರ್ಗಿ, ಯಡ್ರಾಮಿ, ನೆಲೋಗಿ, ಚಿತ್ತಾಪುರಗಳ ವಿಶೇಷವಾಗಿ ಸಂತೆ ನಡೆಯುವ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡುವುದರ ಜತೆಗೆ, ಮಾಸ್ಕ್ ಧರಿಸಿಕೊಂಡು ಕೊರೊನಾ ರಕ್ಷಿಸಿಕೊಳ್ಳುವ ವಿಚಾರಗಳು ತಿಳಿಸುವುದರ ಜತೆಗೆ ಕನ್ನಡಾಭಿಮಾನವನ್ನು ಮೂಡಿಸುವ ಹೊಸ ಪ್ರಯೋಗವೊಂದನ್ನು ವಿಶ್ವಜ್ಯೋತಿ ಪ್ರತಿಷ್ಠಾನ ನಿರಂತರವಾಗಿ ನಡೆಸಲಿದೆ.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕಲ್ಯಾಣಕುಮಾರ ಶೀಲವಂತ, ಶಿವರಾಜ್ ಎಸ್.ಅಂಡಗಿ, ವಿದ್ಯಾಸಾಗರ ದೇಶಮುಖ, ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಕಾರ್ಯಾಧ್ಯಕ್ಷ ಪ್ರಭವ ಪಟ್ಟಣಕರ್, ಪ್ರಭುಲಿಂಗ ಮೂಲಗೆ ಇತರರು ಉಪಸ್ಥಿತರಿದ್ದರು.

ಭಾರತೀಯ ಭಾಷೆಗಳಲ್ಲಿಯೇ ಕನ್ನಡಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಕನ್ನಡ ಭಾಷೆ ಮತ್ತು ಸಾಹಿತ್ಯದ ಮಹತ್ವವನ್ನು ಪ್ರಕಟಿಸಿದಂತಿದೆ. ಇಂತಹ ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿಯು ಇಂದಿನ ಮತ್ತು ಮುಂದಿನ ಕನ್ನಡಿಗರ ಮೇಲಿದೆ. ಈ ನಿಟ್ಟಿನಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನ ಸಾಂದರ್ಭಿಕವಾಗಿ ಹೊಸ ಹೊಸ ಪ್ರಯೋಗದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಹೃದಯವನ್ನು ಗೆದ್ದಂತಿದೆ. -ವಿಜಯಕುಮಾರ ತೇಗಲತಿಪ್ಪಿ, ಸಾಂಸ್ಕೃತಿಕ ಸಂಘಟಕ.
emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago