ಬಿಸಿ ಬಿಸಿ ಸುದ್ದಿ

ಯಾಳಗಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಯಾದಗಿರ: ಭಾರತದ ಮೊಟ್ಟಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ ‘ಆದಿಕವಿ’ ಮಹರ್ಷಿ ವಾಲ್ಮೀಕಿಯ ಜಯಂತ್ಯುತ್ಸವವನ್ನು ಅಕ್ಟೋಬರ್‌ 31ರಂದು ಕರ್ನಾಟಕ ರಾಜ್ಯಾದ್ಯಂತ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ.

ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶನಿವಾರ ಬೆಳಗ್ಗೆ 10.30ಕ್ಕೆ ಸಾಹಿತ್ಯ ಇತಿಹಾಸದ ಅತ್ಯುನ್ನತ ಕೃತಿ ರಾಮಾಯಣದ ಕರ್ತೃ, ಆದಿ‌ಕವಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಮಾಯಣದ ಮೂಲಕ‌ ಜೀವನ ಮೌಲ್ಯ ಸಾರಿದ, ತತ್ವಾದರ್ಶಗಳನ್ನು ಬೋಧಿಸಿದ ದಾರ್ಶನಿಕ ಋಷಿಕವಿಗೆ ಅನಂತ ಪ್ರಣಾಮಗಳು ಸಲ್ಲಿಸಲಾಯಿತು.

ರತ್ನಾಕರರಾಗಿರುವ ಇವರು ಹೇಗೆ ವಾಲ್ಮೀಕಿಯಾದರು ಎಂಬುದಕ್ಕೆ ಇದಕ್ಕೊಂದು ಪೌರಾಣಿಕ ಹಿನ್ನಲೆ ಇದೆ. ಶ್ರೀ ವಾಲ್ಮೀಕಿ ಮಹರ್ಷಿಗಳು ಗುರುವಿನ ಅನುಗ್ರಹದಿಂದ ಪ್ರಾಣಿಹಿಂಸೆಯನ್ನು ಬಿಟ್ಟು “ರಾಮತಾರಕ” ಎಂಬ ಮಂತ್ರವನ್ನು ದಿನನಿತ್ಯ ಪಠಿಸುತ್ತಾ ಜಪದಲ್ಲಿ ತೊಡಗಿ, ಅದರಲ್ಲಿಯೇ ತನು ಮನದಿಂದ ತಲ್ಲೀನರಾಗುತ್ತಾರೆ. ಆ ಸಂದರ್ಭದಲ್ಲಿ ಅವರ ಸುತ್ತಲು ಹುತ್ತ ಬೆಳೆದುಕೊಂಡರೂ ಅದರ ಪರಿವಿಲ್ಲದೆ ಜಪ ಮಾಡುವುದರಲ್ಲಿ ತಮ್ಮನ್ನು ತಾವು ಮರೆತಿರುತ್ತಾರೆ. ಮುಂದೆ ಅದೇ ದಾರಿಯಲ್ಲಿ ಗುರುಗಳು ಬಂದು ವಲ್ಮಿಕದಲ್ಲಿರುವ (ಹುತ್ತಿನಲ್ಲಿರುವ) ರತ್ನಾಕರರನ್ನು ಎಚ್ಚರಗೊಳಿಸುತ್ತಾರೆ, ಆಗ ಹುತ್ತೆನ್ನುವ ಜಡತ್ವದಿಂದ ಹೊರಬಂದ ರತ್ನಾಕರ ಅವರು ವಾಲ್ಮೀಕಿಯಾಗುತ್ತಾರೆ.

ಪ್ರಪಂಚದಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಯ ಮೂಲಕ ಪರಿಚಿತರಾಗಿ, ರಾಮಾಯಣಕ್ಕೆ ಒಂದು ವಿಶೇಷ ಸ್ಥಾನವನ್ನು ಒದಗಿಸಿದ ಕೀರ್ತಿ ಆದಿಕವಿ ವಾಲ್ಮೀಕಿ ಮಹರ್ಷಿ ಅವರಿಗೆ ಸಲ್ಲುತ್ತದೆ. ವಾಲ್ಮೀಕಿ ಮಹರ್ಷಿ ಅವರು ಸರ್ವತೋಮುಖ ಚಿಂತಕ, ಚರಿತ್ರೆಗಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞ, ತತ್ವಜ್ಞಾನಿ ಹಾಗೂ ಆದಿಕವಿಯಾಗಿ ಬಹು ವೈವಿದ್ಯಮಯವಾಗಿ ಜನರ ಮನಸೊರೆಗೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದಂತ ಅಮೀಮರೆಡ್ಡಿ ಹೋಸಮನಿ, ಶ್ರೀನಿವಾಸರೆಡ್ಡಿ ಪಾಟೀಲ, ಬಸವರಾಜ ಎಸ್. ಹೆಳವರ, ಶಿವಶರಣಪ್ಪ ಶಿರೂರ, ಸಾಹೇಬಣ್ಣ ದೊಡ್ಡಮನಿ, ಹಣಮಂತ್ರಾಯ ಮಾಣಸುಣಗಿ, ಮಲ್ಕಣ್ಣ ಮಾಣಸುಣಗಿ, ರಾಮಣ್ಣ ಕಾಡಮಗೇರಿ, ಭೀಮಣ್ಣ ಬೆಕಿನಾಳ, ಹಣಮಂತ ಯಡಹಳ್ಳಿ, ದನರಾಜ ಗೋಸಲ, ರವಿ ನಾಯ್ಕೋಡಿ ಮತ್ತು ಇನ್ನಿತರರಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

19 mins ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

11 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

11 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

13 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

13 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

13 hours ago