ಕಲಬುರಗಿ: ಸಂಸ್ಕೃತ ಕವಿ, ಶ್ರೀ ಮಹರ್ಷಿ ವಾಲ್ಮೀಕಿಯವರ ಹಾಗೂ ಉಕ್ಕಿನ ಮನುಷ್ಯ, ಸ್ವತಂತ್ರ ಭಾರತದ ಪ್ರಥಮ ಗ್ರಹಮಂತ್ರಿಯಾದ ಶ್ರೀ ಸರದಾರ್ ವಲ್ಲಭಭಾಯಿ ಪಟೇಲ್ ರವರ ಜನ್ಮದಿನೋತ್ಸವದ ಅಂಗವಾಗಿ ನಗರದ ಅನನ್ಯ ಪದವಿ ಮತ್ತು ಸ್ನಾತಕೋತ್ತರ ವಿದ್ಯಾಲಯದಲ್ಲಿ ಆಚರಿಸಲಾಯಿತು.
ಪ್ರಾಂಶುಪಾಲರಾದ ಶರಣಪ್ಪ ಬಿ ಹೊನ್ನಗೆಜ್ಜೆ ಅವರು ಮಾತನಾಡುತ್ತಾ ಸಂಸ್ಕೃತ ಕವಿ ಹಾಗೂ ಮಹರ್ಷಿ ವಾಲ್ಮೀಕಿ ಹಾಗೂ ಉಕ್ಕಿನ ಮನುಷ್ಯ ಶ್ರೀ ಸರದಾರ್ ವಲ್ಲಭಭಾಯಿ ಪಟೇಲ್‌ರವರು ಮನುಕುಲದ ದಾರಿದೀಪ ಎನ್ನಲು ಹೆಮ್ಮೆಯನಿಸುತ್ತದೆ.
ಇವರುಗಳ ಪ್ರಕಾರ ಅಧಿಕಾರಕ್ಕಿಂತ ಸನ್ನಡತೆ ರೂಢಿಸಿಕೊಂಡು ಮತ್ತು ನೀಡಿದ ವಾಗ್ವಾದವನ್ನು ಈಡೇರಿಸುವುದೇ ಜನಪ್ರತಿನಿಧಿಗಳ ಧರ್ಮ ಎಂಬುದು ಇವರ ಮೂಲ ವಾಗ್ವಾದವಾಗಿತ್ತು. ಜಾತಿರಹಿತ, ವರ್ಗರಹಿತ, ಶೋಷಣೆರಹಿತ, ಸಮಪಾಲು – ಸಮಬಾಳು, ಸಮಾನ ಅವಕಾಶದ ಸಮಾಜವೇ ರಾಮರಾಜ್ಯ ಎಂಬುದನ್ನು ಮನುಕುಲಕ್ಕೆ ತೋರಿಸಿದರೂ ಇದು ಇನ್ನು ಜಾರಿಗೆಯಲ್ಲಿರದಿದ್ದನ್ನು ಕಂಡು ಅಸಮಧಾನವೆನಿಸುತ್ತದೆ.
ಅಲ್ಲದೆ ಧರ್ಮಿಷ್ಟರು ಅಬಲರ ಪರವಾಗಿ ನಿಲ್ಲುವುದೇ ಮನುಷ್ಯ ಧರ್ಮ ಎಂದು ಸಾರಿ ಸಾರಿ ಹೇಳಿದ ಇವರ ಮಾತು ಇಂದು ತತ್ವವಿರುದ್ಧವಾಗಿ ತಾಂಡವವಾಡುತ್ತಿದೆ. ಅಷ್ಟೇ ಅಲ್ಲ ಆಂಜನೆಯನು ಲಕ್ಷ್ಮಣನ ಪ್ರಾಣ ಉಳಿಸಲು ಸಂಜೀವಿನಿ ಪರ್ವತವನ್ನು ತಂದು ಪ್ರಾಣ ಉಳಿಸಿದ ಪ್ರಸಂಗದ ಮೂಲಕ ಯಾವ ಸಮಾಜ ಪರಿಸರವನ್ನು ಕಾಪಾಡುತ್ತದೋ ಆ ಪರಿಸರ ಪ್ರತಿಯೊಬ್ಬರ ಬದುಕನ್ನು ರೂಪಿಸಲು ಸಾಧ್ಯವಾಗುತ್ತದೆ.
ಆದರೆ ಇಂದು ಪ್ರತಿಯೊಬ್ಬರು ದುರಾಸೆಗೆ ಬಲಿಯಾಗಿ ಪರಿಸರವನ್ನು ನಾಶಮಾಡಿ ಕರೋನಾ ದಂತಹ ಮಹಾಮಾರಿ ಕಾಯಿಲೆಗೆ ತುತ್ತಾಗಿ ಕಷ್ಟಪಡುವ ಪರಿಸ್ಥಿತಿ ಎದುರಿಸಬೇಕಾದ ದುಸ್ಥಿತಿ ನಾವೇ ಮಾಡಿಕೊಂಡಿದ್ದಲ್ಲವೇ ? ತಂದೆಗೆ ಕೊಟ್ಟ ಮಾತು, ಸಹೋದರ ಪ್ರೀತಿ, ವಾತ್ಸಲ್ಯ, ದೇಶದ ಮೇಲಿರುವ ಅಭಿಮಾನ, ಏಕತೆ ಎಲ್ಲವನ್ನು ಮರೆತು ನಾವು ಇಂದು ನಾನು ನನ್ನದು ಎಂದು ಒಣಪ್ರತಿಷ್ಟೆಯಿಂದ ಮೆರೆಯುತ್ತಿದೆ ಮನುಕುಲ.
ಇಂತಹ ಆದರ್ಶಗಳನ್ನು ಪ್ರಚಲಿತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅರ್ಥೈಸಿಕೊಂಡು ಪ್ರತಿಯೊಬ್ಬ ಪ್ರಜೆಯು ಧರ್ಮದ ಹಾದಿಯಲ್ಲಿ ಮುನ್ನಡೆದರೆ ಗಾಂಧೀಜಿಯವರು ಕಂಡ ರಾಮರಾಜ್ಯ ಎಂಬ ಕನಸು ನನಸಾಗಲು ಸಾಧ್ಯ. ಎಂದು ಹೊನ್ನಗೆಜ್ಜೆ ಹೇಳಿದರು.
ಅಧ್ಯಕ್ಷರಾದ ಸುಶ್ಮಾವತಿ, ಸಿಬ್ಬಂದಿ ವರ್ಗದವರಾದ ಶಾಂತಲಾ ನಂದರಗಿ, ಕು. ಸೌಂದರ್ಯ ಹಾಗೂ ಸುಜಾತಾ ಉಪಸ್ಥಿತರಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…