ಕಲಬುರಗಿ: ಹಳೆ ಕಾರು ರಿಪೇರಿ ಮಾಡಿ ಮಾರಾಟ ವ್ಯವಹಾರದಲ್ಲಿ ತಕರಾರರು ಉಂಟಾದ ಹಿನ್ನೆಯಲ್ಲಿ ವ್ಯಾಪಾರ ಹಿತೈಷಿಗಳೆ ಅಪಹರಿ, ಕೊಲೆ ಮಾಡಿ, ನದಿಗೆ ಬಿಸಾಕಿ ಪರರಾಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಯದ್ದುಲ್ಲಾಹ ಕಾಲೋನಿಯ ನಿವಾಸಿಯಾಗಿರುವ ಗೌಸೋದ್ದಿನ್ ಖಾಜಾಮೈನೋದ್ದಿನ್ (42) ಕೊಲೆಯಾದ ದುರ್ದೈವಿ. ಗೌಸೋದ್ದಿನ್ ಅವರು ಹಳೆ ಕಾರುಗಳನ್ನು ಖರೀದಿಸಿ ಅವುಗಳನ್ನು ದುರಸ್ಥಿಗೊಳಿಸಿ ಮಾರಾಟ ಮಾಡುತ್ತಿದ್ದರು. ಕಾರುಗಳಿಂದ ಬಂದ ಲಾಭದಲ್ಲಿ ವ್ಯಾಪಾರ ಹಿತೈಷಿಗಳದಾ ಸ್ನೇಹಿತರ ಜೊತೆ ಸಮಾನವಾಗಿ ಹಂಚಿಕೊಳುತ್ತಿದ್ದರು ಎನ್ನಲಾಗಿದೆ.
ವ್ಯಾಪಾರದಲ್ಲಿ ತಕರಾರು ಉಂಟಾಗಿ, ವೈಷಮ್ಯದಿಂದ ಗೌಸೋದ್ದಿನ್ ಅವರಿಗೆ ಅವರ ಸಂಗಡಿಗರಾದ ಫೈಯಾಜ್, ನಿಜಾಮ್ ಬಾವರ್ಚಿ ಹಾಗೂ ವಾಜೀದ್ ಮೂವರು ಸೇರಿ ಕಾರಿನಲ್ಲಿ ಅಪಹರಿಸಿ, ಕುತ್ತಿಗೆಗೆ ಹಗ್ಗ ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಿ, ನಂತರ ಶವವನ್ನು ಜಿಲ್ಲೆಯ ಕುರಿಕೋಟಾ ಗ್ರಾಮದ ಹಳೆ ಬ್ರೀಡ್ಜ್ ಹತ್ತಿರ ಸೇತುವೆ ಮೇಲಿಂದ ನೀರಿನಲ್ಲಿ ಬಿಸಾಕಿ ಪರಾರಿಯಾಗಿದರು ಎಂದು ತಿಳಿದುಬಂದೆ.
ಪ್ರಕರಣವನ್ನು ಕುರಿತು ಪೊಲೀಸ್ ಆಯುಕ್ತರು ಗಂಭೀರವಾಗಿ ಪರಿಗಣಿಸಿ ರೋಜಾ ಪೊಲೀಸ್ ಠಾಣೆಯ ಪಿಐ ಎಸ್.ಅಸ್ಲಮ್ ಬಾಷಾ ಅವರ ನೇತೃತ್ವದ ಎ.ಎಸ್.ಐ ಶಿವಪ್ಪ ಕಮಾಂಡೋ, ಎ.ಎಸ್.ಐ ನಿಜಲಿಂಗಪ್ಪ, ಸಿಕಂದರ್ ಖಾನ್, ರಫೀಕ್, ಗೋಪಾಲ, ಇರ್ಫಾನ್, ಈರಣ್ಣ, ಮದರಸಾಬ್, ಸಿಬ್ಬಂದಿಗಳ ವಿಶೇಷ ತಂಡ ಸತತ್ತ ಕಾರ್ಯಾಚರಣೆಯಿಂದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…