ಭಾಲ್ಕಿ: ವಿಶ್ವಗುರು ಭಾರತವಾಗುವ ದಿನಗಳು ಸಮೀಪಿಸುತ್ತಿವೆ. ರಾಷ್ರೀಯ ಏಕತೆಯಲ್ಲಿ ನಮ್ಮ ಶಕ್ತಿ ಅಡಗಿದೆ. ರಾಜ್ಯ, ಧರ್ಮ, ಜಾತಿ, ಸಮುದಾಯಗಳ ಸಂಕುಚಿತ ವಿಚಾರಗಳಿಂದ ಭಾರತೀಯರು ಹೊರಬರಬೇಕು. ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪ್ರತಿಯೊಬ್ಬ ಭಾರತೀಯನೂ ಉದಾರ ಮತ್ತು ಉದಾತ್ತ ವಿಚಾರಗಳನ್ನು ಬೆಳೆಸಿಕೊಳ್ಳಬೇಕೆಂದು ಹೈದರಾಬಾದ್‌ನ ಚೈತನ್ಯ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಶ್ರೀನಿವಾಸರಾಜು ಅಭಿಪ್ರಾಯಪಟ್ಟರು.
ಭಾಲ್ಕಿಯ ಸದ್ಗುರು ವಿದ್ಯಾಲಯದಲ್ಲಿ ನಡೆದ “ರಾಷ್ಟ್ರೀಯ ಏಕತಾ ದಿವಸ” ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಮಹರ್ಷಿ ವಾಲ್ಮಿಕಿ ಅವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಭೌತಿಕ ಸಂಪತ್ತಿಗಿಂತ ಜ್ನಾನ ಸಂಪತ್ತು ಅಮೂಲ್ಯವಾದದ್ದು. ವಿಶ್ವದಲ್ಲೇ ಶ್ರೇಷ್ಠನಾಗಲು ಇಂಥಾ ಉದಾರ ವಿಚಾರಗಳ ಅವಶ್ಯಕತೆ ಯುವ ಪೀಳಿಗೆಯಲ್ಲಿದೆ ಎಂದು ಹೇಳಿದರು.
ಹೈದರಾಬಾದ್‌ನ ಅಕ್ಷರ ವಿದ್ಯಾಸಂಸ್ಥೆಯ ನಿರ್ದೆಶಕ ರಾಮ್‌ಮೋಹನ್ ಮಾತನಾಡಿ, ದೇಶದ ಅಥವಾ ರಾಜ್ಯದ ರಾಜಧಾನಿಗಳಲ್ಲಿ ನಮ್ಮ ಮಕ್ಕಳು ಬೆಳೆದರೆ ರಾಷ್ಟ್ರಕ್ಕೆ ಉದಾರ ಸೇವೆಯ ಅಭಿಮಾನದಿಂದ ಸಲ್ಲಿಸುವಂತಾಗುತ್ತದೆ ಎಂದು ಹೇಳಿದರು.
ಚಂದು ಶರ್ಮಾ, ಸದ್ಗುರು ವಿದ್ಯಾ ಸಂಸ್ಥೆಯ ಅಧ್ಯಕ್ಷ ಅಕ್ಷಯಕುಮಾರ ಮುದ್ದಾ, ಅವಿನಾಶ ಮುಂತಾದವರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…