ರಾಷ್ಟ್ರೀಯ ಏಕತೆಗೆ ಭಾವೈಕ್ಯತೆಯ ಅಗತ್ಯ: ಶ್ರೀನಿವಾಸ್‌ರಾಜು

0
69

ಭಾಲ್ಕಿ: ವಿಶ್ವಗುರು ಭಾರತವಾಗುವ ದಿನಗಳು ಸಮೀಪಿಸುತ್ತಿವೆ. ರಾಷ್ರೀಯ ಏಕತೆಯಲ್ಲಿ ನಮ್ಮ ಶಕ್ತಿ ಅಡಗಿದೆ. ರಾಜ್ಯ, ಧರ್ಮ, ಜಾತಿ, ಸಮುದಾಯಗಳ ಸಂಕುಚಿತ ವಿಚಾರಗಳಿಂದ ಭಾರತೀಯರು ಹೊರಬರಬೇಕು. ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪ್ರತಿಯೊಬ್ಬ ಭಾರತೀಯನೂ ಉದಾರ ಮತ್ತು ಉದಾತ್ತ ವಿಚಾರಗಳನ್ನು ಬೆಳೆಸಿಕೊಳ್ಳಬೇಕೆಂದು ಹೈದರಾಬಾದ್‌ನ ಚೈತನ್ಯ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಶ್ರೀನಿವಾಸರಾಜು ಅಭಿಪ್ರಾಯಪಟ್ಟರು.

ಭಾಲ್ಕಿಯ ಸದ್ಗುರು ವಿದ್ಯಾಲಯದಲ್ಲಿ ನಡೆದ “ರಾಷ್ಟ್ರೀಯ ಏಕತಾ ದಿವಸ” ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಮಹರ್ಷಿ ವಾಲ್ಮಿಕಿ ಅವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಭೌತಿಕ ಸಂಪತ್ತಿಗಿಂತ ಜ್ನಾನ ಸಂಪತ್ತು ಅಮೂಲ್ಯವಾದದ್ದು. ವಿಶ್ವದಲ್ಲೇ ಶ್ರೇಷ್ಠನಾಗಲು ಇಂಥಾ ಉದಾರ ವಿಚಾರಗಳ ಅವಶ್ಯಕತೆ ಯುವ ಪೀಳಿಗೆಯಲ್ಲಿದೆ ಎಂದು ಹೇಳಿದರು.

Contact Your\'s Advertisement; 9902492681

ಹೈದರಾಬಾದ್‌ನ ಅಕ್ಷರ ವಿದ್ಯಾಸಂಸ್ಥೆಯ ನಿರ್ದೆಶಕ ರಾಮ್‌ಮೋಹನ್ ಮಾತನಾಡಿ, ದೇಶದ ಅಥವಾ ರಾಜ್ಯದ ರಾಜಧಾನಿಗಳಲ್ಲಿ ನಮ್ಮ ಮಕ್ಕಳು ಬೆಳೆದರೆ ರಾಷ್ಟ್ರಕ್ಕೆ ಉದಾರ ಸೇವೆಯ ಅಭಿಮಾನದಿಂದ ಸಲ್ಲಿಸುವಂತಾಗುತ್ತದೆ ಎಂದು ಹೇಳಿದರು.

ಚಂದು ಶರ್ಮಾ, ಸದ್ಗುರು ವಿದ್ಯಾ ಸಂಸ್ಥೆಯ ಅಧ್ಯಕ್ಷ ಅಕ್ಷಯಕುಮಾರ ಮುದ್ದಾ, ಅವಿನಾಶ ಮುಂತಾದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here