ಕಾಳಗಿ: ಈ ಆಧುನಿಕ ದಿನಮಾನಗಳಲ್ಲಿ ಅದರಲ್ಲೂ ಈ ಕಂಪ್ಯೂಟರ್ ಯುಗದಲ್ಲಿ ಬುದ್ಧಿವಂತಿಕೆ ಎಂಬವುದು ಜಾಸ್ತಿ ಆಗುತ್ತಿದೆ ಎಂಬದು ಸಂತೋಷದ ಸಂಗತಿ ಆದರೆ ಹೃದಯವಂತಿಕೆ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ ಮಕ್ಕಳು ಹಾಗು ಮಕ್ಕಳಲ್ಲಿರುವ ಸಂಸ್ಕೃತಿಯೇ ದೇಶದ ಆಸ್ತಿ ಯುವ ಸಮುದಾಯಕ್ಕೆ ಮಾರ್ಗವನ್ನು ತೋರಿಸುವ ಜವಾಬ್ದಾರಿ ತಂದೆ-ತಾಯಂದಿರು, ಪೋಷಕರು, ಗುರುಗಳ ಮೇಲಿದೆ ಯುವಕರ ಮನಸ್ಸಿನಲ್ಲಿ ಮನೆಮಾಡಿರುವ ಅನುಮಾನಗಳನ್ನು ಪರಿಹರಿಸಿ ಸೂಕ್ತ ಮಾರ್ಗದರ್ಶನ ಮಾಡಬೇಕೆನ್ನುತ್ತ ಮಕ್ಕಳು ಪಠ್ಯದೊಂದಿಗೆ ಇಂತಹ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ ಹಾಗು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮಕ್ಕಳಲ್ಲಿ ಹೃದಯವಂತಿಕೆ ಚಿಗುರೊಡೆಯುತ್ತದೆ. ಎಂದು ಸಾನಿಧ್ಯ ವಹಿಸಿದ ತೇಂಗಳಿ ಶಾಂತೇಶ್ವರ ಮಠದ ಷ.ಬ್ರ. ಡಾ. ಶಾಂತಸೋಮನಾಥ ಶಿವಾಚಾರ್ಯರರು ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.
ತೇಂಗಳಿ ಅಂಭಾಭವಾನಿ ದೇವಸ್ಥಾನದಲ್ಲಿ ಸೀಗೆ ಹುಣ್ಣಿಮೆ ದಿನದಂದು ತೇಂಗಳಿಯ ದಿ. ಶಿವಶರಣಪ್ಪ ಅಂಡಗಿ ಅವರ ಮನೆತನದಿಂದ ಉಡಿತುಂಬುವ ಕಾರ್ಯಕ್ರಮದ ೪೩ನೇ ವಾರ್ಷಿಕೋತ್ಸವದ ನಿಮಿತ್ಯ ಹಮ್ಮಿಕೊಂಡ ನವರಾತ್ರಿ ನವದುರ್ಗೆ ೯ ಅವತಾರಗಳಲ್ಲಿ ೯ ವಿವಿಧ ಬಣ್ಣಗಳಿಂದ ಸೀರೆಯನ್ನುಟ್ಟು ಶೃಂಗಾರಗೊಂಡು ಬಾಗವಹಸಿದ ೯ ಬಾಲ ಮುತ್ತೈದೆಯ ಮಕ್ಕಳಿಗೆ ಪ್ರಶಸ್ತಿ ವಿತರಿಸಿ ಆಶಿರ್ವದಿಸಿದರು. \
ನಾಡಿನೆಲ್ಲೆಡೆ ದುಷ್ಟಸಂಹಾರ ಶಿಷ್ಟರಕ್ಷಣೆಯ ನವರಾತ್ರಿ ಉತ್ಸವ ಸೀಗೆ ಉಣ್ಣಿಮೆ ಸಂಭ್ರಮದಲ್ಲಿ ನವದುರ್ಗೆ ರೂಪದಲ್ಲಿ ಭೀಮೇಶ್ವರ ವಿದ್ಯಾವರ್ಧಕ ಸಂಸ್ಥೆಯ ವಿಶ್ವೇಶ್ವರಯ್ಯ ಪ್ರೌಢ ಶಾಲಾ ವಿದ್ಯಾರ್ಥಿನಿಯರಾದ ಐಶ್ವರ್ಯ ಕಿರಣಕುಮಾರ ಸರಡಗಿ , ಅರ್ಪಿತಾ ವಿಶ್ವನಾಥ ಹಿಲ್ಲಾ, ಕವತಾ ದೇವಿಂದ್ರಪ್ಪ ತೆಲಗಾಣಿ, ಮೇಘರಾಣಿ ಉಮಾಶಂಕರ ತುಪ್ಪದ ನಿವೇದಿತಾ ನಾಗಯ್ಯ ಭೈರಾಮಡಗಿ, ವೈಷ್ಣವಿ ಚಂದ್ರಕಾಂತ ಬಾರಿಗಿಡ , ಸುಕನ್ಯ ಈರಯ್ಯ ಮಠಪತಿ, ನಿರ್ಮಲಾ ರಾಜಶೇಖರ ಹೊಂದೆ, ಹಾಗು ಭವ್ಯಶ್ರೀ ಶಿವಕುಮಾರ ಸುಲ್ತಾನಪುರ (ಗುಲಾಬಿ ಬಣ್ಣದ ಸೀರೆಯನ್ನುಟ್ಟು ಉಡಿ ತುಂಬುವ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು ಎಂದು ಕಾರ್ಯಕ್ರಮ ಆಯೋಜಿಸಿದ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿಯವರು ಮಾತನ್ನಾಡಿದರು.
ಪ್ರಾರಂಭದಲ್ಲಿ ಪ್ರೊ. ಸಿದ್ರಾಮಪ್ಪ ಅಂಡಗಿ ಸ್ವಾಗತಿಸಿದರು ಡಾ. ಓಂಪ್ರಕಾಶ ಹೆಬ್ಬಾಳ ವಂದಿಸಿದರು ಭೀಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭೀಮಾಶಂಕರ ಅಂಕಲಗಿ ಕಾರ್ಯಕ್ರಮ ನಿರೂಪಿಸಿದರು ಗುಂಡಪ್ಪ ಪಟೇದ ಶಿಕ್ಷಕರು ವಿದ್ಯಾರ್ಥಿನಿಯರ ಪೂರ್ವಭಾವಿ ತಯಾರಿ ಹಾಗೂ ಪ್ರಶಸ್ತಿ ಪತ್ರ ವಿತರಣೆ ಸಂಚಾಲಕತ್ವ ವಹಿಸಿದರು.
ಭಜನೆ ಕಾರ್ಯಕ್ರಮ: ಹಿರಿಯ ಹಾರ್ಮೋನಿಯಂ ಕಲಾವಿದರಾದ ಭೀರಣ್ಣ ಪೂಜಾರಿ, ವಿಶ್ವನಾಥ ಬಾಳದೆ, ತಬಲಾ ಕಲಾವಿದರಾದ ಚಂದ್ರಶೇಖರ ಎಲೇರಿ, ಜಗನ್ನಾಥ ಚಿದ್ರಿ ಹುಳಗೇರಿ ಹಾಗು ಸಂಗಡಿಗರಿಂದ ಭಜನೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಭವಾನಿ ದೇವಸ್ಥಾನದ ಅಧ್ಯಕ್ಷರಾದ ಧನಂಜಯ ಕುಲಕರ್ಣಿ, ಉಪಾಧ್ಯಕ್ಷರಾದ ಸಿದ್ರಾಮಪ್ಪ ಅಂಡಗಿ, ಖಜಾಂಚಿಗಳಾದ ಚಂದ್ರಶೇಖರ ಮಂಗದ, ಸದಸ್ಯರಾದ ವೀರಭದ್ರಪ್ಪ ಚೇಂಗಟಿ, ಭೀರಣ್ಣ ಪೂಜಾರಿ, ರೇವಣಸಿದ್ದಪ್ಪ ಮತ್ತಿಮೂಡ, ಗ್ರಾಮದ ಪ್ರಮುಖರಾದ ಶರಣಪ್ಪ, ಭೀಮರಾವ ಬಾರಿಗಿಡ, ಮಲ್ಲಣ್ಣ ಬೇರನ, ಭೀಮರಾವ ಕುದ್ರಿಕಾರ, ವಿರೇಂದ್ರ ವಾಲಿ, ಯಶ್ವಂತರಾವ ಅಂಕಲಗಿ, ಬಸವರಾಜ ತುಪ್ಪದ, ರವಿ ಬೀದನ್ನ, ವಿರೇಶ ವಾಲಿಶೆಟ್ಟಿ, ನಾಗರಾಜ ಮಹಾಗಾಂವ, ವಿಶ್ವನಾಥ ಹಿಲ್ಲಾ, ಆಣವೀರಪ್ಪ ಹತ್ತಿ, ಬಸವರಾಜ ಬಸ್ತೆ, ಹನೀಫಸಾಬ್, ನಾಗಣ್ಣ ಹಟಗಾರ, ಚಂದ್ರು ಕಡ್ಲಿ, ಅನೀಲ್ ತುಪ್ಪದ, ಕಾಶಿನಾಥ ತುಪ್ಪದ, ಶೇಖರ ಲಾಲಿ ಮುತ್ತಗಿ, ರೇವಣಸಿದ್ದಯ್ಯ ಮಠಪತಿ, ಶರಣಪ್ಪ ಸೇಡಂ, ಮಹಾದೇವ ಮಠಪತಿ, ಶರಣಪ್ಪ ಸೌಕಾರ ಕಲಗುರ್ತಿ, ವಿನೋದಕುಮಾರ ಜನೆವರಿ, ರಾಜಶೇಖರ ಮರಪಳ್ಳಿ, ಚಂದ್ರಶೇಖರ ಸುಲೇಪೇಟ, ಮಹೇಂದ್ರಕುಮಾರ ಗೋಟೂರ, ಶರಣಬಸಪ್ಪ ಆಂದೇಲಿ, ಅಣವೀರಪ್ಪ ಆಂದೇಲಿ, ಬಸವರಾಜ ದೊಣ್ಣೂರ, ಹಾಗೂ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…