ಕಲಬುರಗಿ: ರಾಜ್ಯದಲ್ಲಿ ಪದವಿ ಕಾಲೇಜುಗಳನ್ನು ನವೆಂಬರ್ 17 ರಿಂದ ಆರಂಭಿಸಲು ಸರಕಾರ ತೀರ್ಮಾನಿಸಿದೆ. ಕಲಿಕೆಯ ಪರಿಪೂರ್ಣತೆಗೆ ನಿರಂತರತೆ ಮುಖ್ಯ ಎಂಬುವುದು ನಿಜ. ಆದರೆ ಕಾಲೇಜು ಆರಂಭದಿಂದ ಆಗಬಹುದಾದ ಪರಿಣಾಮಗಳನ್ನು ಗಮನಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಸಲಹೆ ನೀಡಿದ್ದಾರೆ.
ವಿದ್ಯಾರ್ಥಿಗಳು ಒಬ್ಬರೊಡನೊಬ್ಬರು ಆತ್ಮೀಯವಾಗಿ ಬೆಳೆಯುತ್ತಾರೆ. ಬೇರೆ ಬೇರೆ ಊರುಗಳಿಂದ ಬಂದವರು ಹಾಸ್ಟೆಲ್ ನಲ್ಲಿ ಒಂದಾಗಿ ವಾಸಿಸುತ್ತಾರೆ. ಕ್ಯಾಂಟೀನ್ ನಲ್ಲಿ ಉಂಡು ನಲಿಯುತ್ತಾರೆ , ಮೈದಾನದಲ್ಲಿ ಒಟ್ಟಿಗೆ ಆಡುತ್ತಾರೆ ಇವೆಲ್ಲವೂ ಯುವಜನರ ಸಹಜ ಮನಸ್ಥಿತಿ ಇವನ್ನು ನಿಯಂತ್ರಿಸುವುದು ಅಧ್ಯಾಪಕರಿಂದ ಸಾಧ್ಯವಾಗುವುದಿಲ್ಲ ಹೀಗಾಗಿ ಕಾಲೇಜು ಆರಂಭಕ್ಕೆ ಅವಸರ ಸರಿಯೇ ? ಎಂದು ಪ್ರಶ್ನಿಸಿದರು.
ತಜ್ಞ ವೈದ್ಯರ ಅಭಿಪ್ರಾಯದಂತೆ ಡಿಸೆಂಬರ್ ಕೊನೆಯ ವೇಳೆಗೆ ಕೊರೊನಾ ಸೊಂಕು ನಿಯಂತ್ರಣಕ್ಕೆ ಬರಬಹುದು. ಆದರೆ ಈಗ ಪರಸ್ಪರ ಬೆರೆಯುವುದು ಹೆಚ್ಚಿದರೆ ಸೊಂಕು ಹಬ್ಬುವಿಕೆ ಪ್ರಮಾಣ ಮತ್ತೆ ಹೆಚ್ಚುತ್ತದೆ. ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಈಗ ಇಂತಹುದೇ ಪರಿಸ್ಥಿತಿ ತಲೆದೂರಿದೆ. ಕೆಲವು ರಾಷ್ಟ್ರಗಳು ಮತ್ತೆ ಲಾಕ್ ಡೌನ್ ಘೋಷಿಸಿವೆ. ಹೀಗಾಗಿ ಕಾಲೇಜು ಪುನರಾರಂಭವನ್ನು ಡಿಸೆಂಬರ್ ಕೊನೆಯವರೆಗೂ ಮುಂದೂಡುವುದು ಒಳ್ಳೆಯದು ಎಂದರು.
ಒಂದೆರೆಡು ತಿಂಗಳಲ್ಲಿ ಕಳೆದುಕೊಳ್ಳುವುದುಕ್ಕಿಂತ ಗಳಿಸುವುದೇ ಹೆಚ್ಚು . ಹೀಗಾಗಿ ಸರಕಾರ ಕೂಡಲೇ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…