ಶಹಾಬಾದ: ನಾಲ್ಕು ದಶಕಕ್ಕು ಹೆಚ್ಚು ಕಾಲ ರೈತರ ಸ್ವಾವಲಂಬಿ, ಸ್ವಾಭಿಮಾನ ಮತ್ತು ಘನತೆಯ ಬದುಕಿಗಾಗಿ ಹೋರಾಟ ನಡೆಸಿ ಬಡವರ ಮತ್ತು ಶ್ರಮಿಕರ ಹೋರಾಟಗಾರರಾಗಿ ಹೆಸರುವಾಸಿಯಾಗಿದ್ದರು ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಹೇಳಿದರು.
ಅವರು ಸೋಮವಾರ ನಗರದ ಜಗದಂಬಾ ಮಂದಿರದ ಸಭಾಂಗಣದಲ್ಲಿ ವಿವಿಧ ಕಾಮರ್ಿಕ ಸಂಘಟನೆಗಳ ವತಿಯಿಂದ ಆಯೋಜಿಸಲಾದ ಮಾರುತಿ ಮಾನ್ಪಡೆ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ರೈತರು ಶೋಷಣೆಗೆ ಒಳಗಾದಾಗ ಮತ್ತು ಸರಕಾರಗಳು ಕೇವಲ ಬಾಯಿ ಮಾತಿನ ಭರವಸೆಗಳಿಂದ ವಂಚಿಸುವುದ ವಿರುದ್ಧ ಮಾರುತಿ ಮಾನ್ಪಡೆ ರಾಜ್ಯವನ್ನು ಆಳುವ ಯಾವುದೇ ಸರಕಾರ ಅಥವಾ ಯವುದೇ ವ್ಯಕ್ತಿಯಿರಲಿ ಅವರನ್ನು ಮುಲಾಜಿಲ್ಲದೇ ತರಾಟೆಗೆ ತೆಗೆದುಕೊಳ್ಳುವಂತ ಗುಂಡಿಗೆ ಅವರಲ್ಲಿತ್ತು.ಅವರು ಶ್ರೀಮಂತರ ಹೋರಾಟಗಾರರಲ್ಲ.ಅವರು ಶ್ರಮಿಕರ, ಬಡವರ, ಕೂಲಿ ಕಾಮರ್ಿಕರ, ರೈತರ, ಅಂಗನವಾಡಿ, ಆಶಾ ಕಾರ್ಯಕರ್ತೆಯರ, ಬಿಸಿಯೂಟ ನೌಕರರ, ಗ್ರಾಪಂ ನೌಕರರ, ಪೌರಕಾಮರ್ಿಕರ ಸೇರಿದಂತೆ ಅನೇಕ ಕಾಮರ್ಿಕರ ಧ್ವನಿಯಾಗಿ ಹೋರಾಟ ಮಾಡಿ, ನ್ಯಾಯ ಒದಗಿಸುವ ನಿಟ್ಟಿನಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಎಂದು ಹೇಳಿದರು.
ಸಾಮಾಜಿಕ ಚಿಂತಕ ಲೋಹಿತ್ ಕಟ್ಟಿ ಮಾತನಾಡಿ,ಮಾರುತಿ ಮಾನ್ಪಡೆ ಅವರ ಸಾವು ರೈತರ, ಕಾಮರ್ಿಕರ, ಶ್ರಮಜೀವಿಗಳ ಪಾಲಿಗೆ ತುಂಬಲಾರದ ನಷ್ಟವಾಗಿದೆ.ಆದರೆ ದುಡಿಯುವ ಜನರ ಪರವಾಗಿ ಅವರು ನಡೆದ ದಾರಿಯಲ್ಲಿ ನಡೆಯುತ್ತ, ಸಮಾಜ ಬದಲಾವಣೆಗೆ ದುಡಿಯುವುದು ಅವರಿಗೆ ಕೊಡುವ ನಿಜವಾದ ಶ್ರದ್ಧಾಂಜಲಿ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಅಶೋಕ ಮ್ಯಾಗೇರಿ ಮಾತನಾಡಿ, ಬದುಕಿನ ಪ್ರತಿ ನಿಮಿಷವನ್ನೂ ಹೋರಾಟಕ್ಕೆ ಮೀಸಲಾಗಿರಿಸಿದ್ದ ಮಾನ್ಪಡೆಯವರು ನಿರಂತರ ದಣಿವರಿಯದ ಹೋರಾಟಗಾರರಾಗಿದ್ದರು.ಅಸಹಾಯಕ ಜನರ ನೋವಿಗೆ ಸದಾಕಾಲ ಸ್ಪಂದಿಸುತ್ತಿದ್ದರು.ಗ್ರಾಪಂ ನೌಕರರ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಿ ಅನೇಕ ಗ್ರಾಪಂ ನೌಕರರ ಬದುಕನ್ನು ಕಟ್ಟಿಕೊಟ್ಟವರು ಮಾನ್ಪಡೆಯವರು.ಇತ್ತಿಚ್ಚಿನ ಕೇಂದ್ರದ ಕೃಷಿ ಮಸೂದೆಗಳ ವಿರುದ್ಧ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿರುವುದು ನಮ್ಮ ಗಮನಕ್ಕಿದೆ ಎಂದರು.
ಸುನೀಲ ಮಾನ್ಪಡೆ,, ಚಂದು ಜಾಧವ, ಶರಣಗೌಡ ಪಾಟೀಲ, ಮಲ್ಕಣ್ಣಾ ಮುದ್ದಾ, ಶಿವರುದ್ರ ಗಿರೆನೂರ್,ಸುಭಾಷ ಹೊಸಮನಿ ಮಾತನಾಡಿದರು. ಎಸ್ಎಫ್ಐ ಸಂಘಟನೆಯ ಸಿದ್ದಲಿಂಗ ಪಾಳಾ, ನಾಗಪ್ಪ ರಾಯಚೂರಕರ್, ಮಲ್ಲಿಕಾರ್ಜುನ ಪಟ್ಟಣಕರ್, ವಿಶ್ವರಾಜ ಫೀರೋಜಬಾದ ಸೇರಿದಂತೆ ಅನೇಕ ಸಂಘಟನೆಯವರು ಹಾಜರಿದ್ದರು.
ಪೂಜಪ್ಪ ಮೇತ್ರೆ ನಿರೂಪಿಸಿದರು, ರಾಯಪ್ಪ ಹುರಮುಂಜಿ ಸ್ವಾಗತಿಸಿದರು, ಶೇಖಮ್ಮ ಕುರಿ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…