ಬಿಸಿ ಬಿಸಿ ಸುದ್ದಿ

JCB ಪಕ್ಷ ನಂಬಿ ಮಕ್ಕಳ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ AAP ಕರೆ

ಜೇವರ್ಗಿ : ಇಲ್ಲಿನ ಯಡ್ರಾಮಿ ತಾಲ್ಲೂಕಿನ ಕರಕಿಹಳ್ಳಿ ಗ್ರಾಮದ ಮುಖಂಡರಾದ ಬಸವರಾಜ ತಂದೆ ಸೆಂಕ್ರೆಪ್ಪ ಹೊಸಗೇರಿ ರವರು ತಮ್ಮ ಅಪಾರ ಬೆಂಬಲಿಗರೊಂದಿ ಇಂದು ಆಮ್ ಆದ್ಮಿ ಪಕ್ಷ ಸೇರ್ಪಡೆ ಯಾದರು.

ಇದೆ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಸಂಚಾಲಕ ಈರಣ್ಣಗೌಡ ಪಾಟೀಲ ಗುಳ್ಯಾಳ ಕ್ಷೇತ್ರದಲ್ಲಿ ಯಾವುದೇ ಚುನಾವಣೆ ನಡೆಯಲಿ ನಮ್ಮ ಕಣ್ಣಿಗೆ ಕಾಣುವುದು ಬಿಜೆಪಿ ಕಾಂಗ್ರೆಸ್ ಹಾಗು ಜೆಡಿಎಸ್.ಈ ಮೂರು ಪಕ್ಷಗಳಿಂದ ಯಾವುದೇ ಅಭ್ಯರ್ಥಿ ಗೆದ್ದರು ಅಧಿಕಾರ ನಡೆಸುವುದು ಮಾತ್ರ JCB ಪಕ್ಷ ಎಂದು ಈ ಮೂರು ಪಕ್ಷಗಳ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನಂಬಿದ ಮತದಾರರಿಗೆ ಮತ್ತು ಹಗಲು ರಾತ್ರಿ ಪಕ್ಷ ಕ್ಕಾಗಿ ದುಡಿದ ಕಾರ್ಯಕರ್ತರಿಗೆ ದ್ರೋಹ ಬಗೆದು ಗೆದ್ದ ಅಭ್ಯರ್ಥಿ ಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯಲ್ಲಿ ಖರ್ಚು ಮಾಡಿದ ನೂರು ಪಟ್ಟು ಆಸ್ತಿ ಮಾಡುತ್ತಿದ್ದಾರೆಂದು ಆರೋಪಿಸಿದರು .

ಈ ಮೂರು ಪಕ್ಷದ ನಾಯಕರು ಕ್ಷೇತ್ರದ ಜನರನ್ನು ಮುರ್ಖರೆಂದು ತಿಳಿದಿದ್ದಾರೆ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ಗೊತ್ತಾಗುವುದಿಲ್ಲ ಎಂದು ತಿಳಿದಿರುವುದು ಇವರ ಭ್ರಮೆ ಅಷ್ಟೇ ಇಷ್ಟು ವರ್ಷಗಳ ಕಾಲ ಪ್ರಾಮಾಣಿಕ ಪಕ್ಷ ಹಾಗು ಅಭ್ಯರ್ಥಿ ಇಲ್ಲದ ಕಾರಣ ಅನಿವಾರ್ಯವಾಗಿ ಇವರಿಗೆ ಮತ ನಿಡುತ್ತಿದ್ದರು ಈಗ ಆ ಅನಿವಾರ್ಯ ಜನರಿಗಿಲ್ಲ ಆಮ್ ಆದ್ಮಿ ಪಕ್ಷದ ಪ್ರಾಮಾಣಿಕತೆ ಅಭಿವೃದ್ಧಿ ವಿಚಾರಗಳನ್ನು ಕ್ಷೇತ್ರದ ಜನಸಾಮಾನ್ಯರು ಸದ್ಬಳಕೆ ಮಾಡಿಕೊಂಡು ಈ ಭ್ರಷ್ಟ JCB ಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೆ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಬಸವರಾಜ ಹೊಸಗೇರಿ ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು ಇದರ ವಿರುದ್ಧ ನಮ್ಮ ಈರಣ್ಣಗೌಡ ಪಾಟೀಲ ರವರು ಸಾಕಷ್ಟು ಹೋರಾಟಗಳು ಮಾಡುತ್ತಿದ್ದು ಇವರಿಗೆ ಬೆಂಬಲ ನೀಡುವುದು ಕ್ಷೇತ್ರದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ನುಡಿದರು.

ಇದೆ ಸಂದರ್ಭದಲ್ಲಿ ಅಬ್ದುಲ್‌ ಅಜಿಜ್ ಪಟೇಲ್ ಇಸ್ಪಾಪ್ ಯಡ್ರಾಮಿ ತಾಲ್ಲೂಕು ಸಂಘಟನ ಕಾರ್ಯದರ್ಶಿ.ಜಗದೀಶ್ ಬಳ್ಳಾರಿ,ರಮೇಶ್, ಸಕರೆಣ್ಣ,ಮಲ್ಲಣ್ಣ ಗೌಡ ಮಾಲಿ ಪಾಟೀಲ,ಮಲ್ಲಿಕಾರ್ಜುನ ತಳವಾರ,ಶರಣಗೌಡ ತಂದೆ ಅಮೃತ,ಗೋಲ್ಲಾಳಪ್ಪ ಗೌಡ ಹನ್ನುರ, ಮಲ್ಲಣ್ಣ ಗೌಡ, ಕಲ್ಲಪ್ಪ ಗೌಡ,ಜಾವಿದ ಇಸ್ಮಾಯಿಲ್ ,ಶೆಕ್ರಪ್ಪ ಪೂಜಾರಿ,ಭೀಮರಾಯ ಪೂಜಾರಿ,ಮಹಾಂತಪ್ಪ ಠಣಕೆದಾರ,ರೇವಣಸಿದ್ದ ಪೂಜಾರಿ,ಹಯ್ಯಾಳಪ್ಪ ಪೂಜಾರಿ ,ಶರಣಗೌಡ ಹಸನಾಪುರ, ದಾವುದ್ ಇಸ್ಮಾಯಿಲ್ ,ಸಿದ್ರಾಮ ತಳವಾರ, ಸಂತೋಷ ಹನ್ನುರ, ನಾಗೇಶ ನರಿಬೋಳ, ಇನ್ನೂ ಅನೇಕರು ಸೇರ್ಪಡೆ ಯಾದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago