ಕಲಬುರಗಿ: ನಗರದ ತಾಜ ಸುಲ್ತಾನಪುರ ಸಿಮಾಂತರದಲ್ಲಿ ಇಗಡ್ಡೆಪ್ಪ ಮುತ್ಯಾನ ಗುಡಿಯ ಹತ್ತಿರ ಕೈಯಲ್ಲಿ ಮಾರಕಾಸ್ತ್ರಗಳ ಮೂಲಕ ದರೋಡೆಗೆ ಹೊಂಚು ಹಾಕುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಸವ ನಗರ ನಿವಾಸಿ ಪ್ರಶಾಂತ ಪರಶ್ಯಾ ರಜನಿಕಾಂತ ಐಗೋಳೆ, ಸುಂದರ ನಗರ ನಿವಾಸಿ ಅಭೀಷೇಕ ಸೋಮಣ್ಣಾ ರಾಜೋಳ ಡಬರಾಬಾದ ಆಶ್ರಯ ಕಾಲನಿಯ ಶಿವಾನಂದ ಬಾಬುರಾವ ಔಪಂಟಗಿಮ, ಸುವರ್ಣಾ ನಗರದ ಚಂದ್ರಾಮ ಸಿದ್ಧಪ್ಪ ಮ್ಯಾದರ ಹಾಗೂ ಫೀಲ್ಜರಬೇಡ ಅಶ್ರಯ ಕಾಲನಿಯ ವಿಜಯ ಸಂಜು ಬಂಧಿತ ಆರೋಪಿಗಳು.
ಪೊಲೀಸ ಆಯುಕ್ತರಾದ ಎನ್. ಸತೀಶ್ ಕುಮಾರ, ಐ.ಪಿ.ಸಿ. ಡಿ.ಸಿ.ಪಿ. (ಕಾ.ಸು.) ಕಲಬುರಗಿ ನಗರ, ಡಿ. ಕಿಶೋರಬಾಬು ಅವರ ಮಾರ್ಗದರ್ಶನದ ಆಶೋಕ ನಗರ ಪೊಲೀಸ್ ಪಿ.ಎಸ್.ಐ (ಕಾ.ಸು.) ವಾಹೀದ ಹುಸೇನ ಕೊತ್ವಾಲ್, ರೌಡಿ ನಿಗ್ರಹ ದಳದ ಸಿಬ್ಬಂದಿ ತೌಶೀಫ್, ಶ್ರೀಶೈಲ್, ಬೀರಣ್ಣಾ, ಶಿವಾಸಂದ ಗೋಪಾಲ್, ಮಲ್ಲಿಕಾರ್ಜುನ ಜಾನಿ, ಈರಣ್ಣಾ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎರಡು ಚಾಕು. ಒಂದು ಬಡಿಗೆ, ಎರಡು ರಾಡು, ಒಂದು ಖಾರದ ಪಾಕೇಟ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹಿರೋ ಹೊಂಡಾ ಮೋಟಾರ ಸೈಕಲ ಜಪ್ತಿ ಮಾಡಿ ಆರೋಪಿಗಳನ್ನು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಶಾಂತ್ ಪರಶ್ಯ ಕುಖ್ಯಾತ ರೌಡಿ ಶೀಟರ ಅಗಿದ್ದು, ಇತನ ವಿರುದ್ಧ ಕಂಬರಗಿ ನಗರ ವಿವಿಧ ಶಾಣೆಗಳಲ್ಲಿ ಕೊಲೆ, ದರೋಡ, ಸುಲಿಗೆ, ಪ್ರಯತ್ನದಂತಹ ಒಟ್ಟು 17 ಪ್ರಕರಣಗಳು ದಾಖಲಾಗಿವೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…