ಹೈದರಾಬಾದ್ ಕರ್ನಾಟಕ

ಯಾದಗಿರಿ: ರೈತರ ವಿವಿಧ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಕರವೇ ಆಗ್ರಹ

ಯಾದಗಿರಿ : ಹುಣಸಗಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹುಣಸಗಿ ತಾಲೂಕ ಘಟಕದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರಗೆ ಮನವಿ ಪತ್ರ ಸಲ್ಲಿಸಿದರು.

ಕಲ್ಯಾಣ ಕರ್ನಾಟಕ ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸರಿಸುಮಾರು 69000 ಹೇಕ್ಟರ್ ಭತ್ತದ ಬೆಳೆ ಹಾನಿಯಾಗಿದ್ದು ಕೂಡಲೇ ರಾಜ್ಯ ಸರ್ಕಾರ ಬೆಳೆ ನಷ್ಟ ಪರಿಹಾರವನ್ನು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.

ಭತ್ತದ ಕಟಾವು ಯಂತ್ರಗಳ ಮಾಲೀಕರು ಹಾಗೂ ದಲ್ಲಾಳಿಗಳು ಒಂದು ಗಂಟೆಗೆ ಸರಿ ಸುಮಾರು 2500 ದಿಂದ 3000 ರೂ ಹಣ ಪಡೆದುಕೊಂಡು ರೈತರಿಗೆ ಇನ್ನಷ್ಟು ಸಂಕಷ್ಟ ತಂದೊಡ್ಡುವಂತ  ಕೆಲಸ ಮಾಡುತ್ತಿದ್ದಾರೆ. ರೈತರಿಗೆ ಆರ್ಥಿಕ ಹೊರೆಯಾಗಲಿದೆ, ಆದ್ದರಿಂದ 1800 ನೂರುಪಾಯಿ ದರ ನಿಗದಿಪಡಿಸಬೇಕು ತಪ್ಪಿದ್ದಲ್ಲಿ ಮಾಲೀಕರ ವಿರುದ್ಧ ಮತ್ತು ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಲೂಕ ಕರವೇ ಕಾರ್ಯಕರ್ತರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ, ಭೀಮನಗೌಡ ಪೋಲೀಸ್ ಪಾಟೀಲ್ , ರೈತ ಮುಖಂಡ ರಾಜು ಮಲಗಲದಿನ್ನಿ, ಶಿವಲಿಂಗ ಸಾಹು ಪಟ್ಟಣಶೆಟ್ಟಿ ಹುಣಸಗಿ, ನಂದನ ಗೌಡ ಬಿರಾದರ್, ಶಂಕರಗೌಡ ಪೌಜ್ದರ್, ಬಸವರಾಜ್ ಚನ್ನೂರು, ಡಾ. ಬಸನಗೌಡ ಪಾಟೀಲ್, ಬಸನಗೌಡ  ಕುಪ್ಪಿ,  ಸಿದ್ದಣ್ಣ ಯಕ್ತಪೂರ್, ಪ್ರಕಾಶ್ ವಿಶ್ವಕರ್ಮ ಸಿದ್ದು ಮೈಲೇಶ್ವರ ಶಫೀಕ್ ಬೆಣ್ಣೆ ಫಿರೋಜ್ ಸುಬೇದರ್ ಮಾರಲಬಾವಿ, ಶಾಂತ ಗೌಡ ಪಾಟೀಲ್, ಕೋನಾಳ ಶಿವನಗೌಡ ಪೊಲೀಸ್ ಪಾಟೀಲ್, ಬಸವರಾಜ್ ಎಸ್ ಕೆ ಕಾಮನಟಗಿ, ಸಾಬಣ್ಣ ಮಲಗಲದಿನ್ನಿ ಕಾಮನಟಗಿ, ಶರಣ ಅಂಗಡಿ ಗೆದ್ದಲಮರಿ, ಸಿದ್ದು ಹೆಬ್ಬಾಳ್, ಪ್ರಶಾಂತ್ ನಾಯಕ್, ರಾಜು ಅವರಾದಿ ಚನ್ನಬಸು ಮೇಲಿನಮನಿ,ನಿಂಗಣ್ಣ ಗುತ್ತೇದಾರ್, ಶಿವು ಮಾಳುರು, ಸಂತೋಷ್ ದೇಸಾಯಿ, ಸಂಗಯ್ಯ ಕೆ ಹಾಲಬಾವಿ, ಶಿವು ಮಾಳನೂರ್, ಸತೀಶ್ ದೇಸಾಯಿ, ಮಂಜು ಬಳಿ, ಬಾಬು ಗೀಟಿಗಿ, ಗಫರ್ ಸಾಬ್, ಉಂಡೆಕಾರ್ ಸಿದ್ದು ಮೇಲಿನಮನಿ, ರಾಜು ಮಿನಜಾಗಿ ಗೊಲ್ಲಾಳೇಶ್ವರ, ಹುಸೇನ್ ಸಾಬ್ ಟೋನ್ನೂರು,  ಖಾಸಿಂಸಾಬ್ ಟೋನ್ನೂರು, ಬಸವರಾಜ್ ಬಿ ನಾಟೇಕರ್ ಸೇರಿದಂತೆ ಇನ್ನಿತರರು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

13 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

15 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

22 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

23 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago