ಬಿಸಿ ಬಿಸಿ ಸುದ್ದಿ

ಜಗತ್ತಿನಲ್ಲಿ ಜಾತಿಯಿಂದ ಅಳೆಯಲಾಗದ ವಿಷಯ ಎಂದರೆ ವಿದ್ಯೆ ಒಂದೆ:ಶಾಸಕ ರಾಜುಗೌಡ

ಸುರಪುರ: ಜಗತ್ತಿನಲ್ಲಿ ಎಲ್ಲಾ ವಿಷಯಗಳಿಗೂ ಇಂದು ಜಾತಿ ಪರಿಗಣನೆಯಾಗುತ್ತಿದೆ.ಆದರೆ ಜಾತಿಯಿಂದ ಅಳೆಯಲಾಗದ ಒಂದೆ ಸಂಗತಿ ಎಂದರೆ ವಿದ್ಯೆ ಮಾತ್ರ.ಅಂತಹ ವಿದ್ಯಾರ್ಥಿಗಳಿಗೆ ಇಂದು ಸನ್ಮಾನಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದುಶಾಸಕ ಹಾಗು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಶ್ರೀ ಮಹರ್ಷಿ ಭಗೀರಥ ಉಪ್ಪಾರ ಸಮಾವೇಶ ಹಾಗು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಇಂದು ತಾವೆಲ್ಲರು ಬಯಸುತ್ತಿರುವಂತೆ ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ನನ್ನ ವಿರೋಧವಿಲ್ಲ.ನಾನು ಕೂಡ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಉಪ್ಪಾರ ಸಮಾಜ ಎಸ್ಟಿಗೆ ಸೇರಿಸಲು ಮನವಿ ಮಾಡಿದ್ದು,ಯಾವುದೇ ಸಮಾಜವನ್ನು ಎಸ್ಟಿಗೆ ಸೇರಿಸಲು ಆದರೆ ಒಳ ಮೀಸಲಾತಿ ಜಾರಿಗೊಳಿಸಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಉಪ್ಪಾರ ಸಮಾಜದ ಸ್ವಾಮೀಜಿಗಳಾದ ದೇವದುರ್ಗ ತಾಲೂಕಿನ ಮಲದಕಲ್ ನಿಜಾನಂದ ಯೋಗಾಶ್ರಮದ ಗುರುಬಸವ ರಾಜಗುರುಗಳು ಮಾತನಾಡಿ,ಇಂದು ಜಗತ್ತನ್ನು ಜ್ಞಾನ ಆಳುತ್ತಿದೆ.ಅಂತಹ ಜ್ಞಾನವನ್ನು ಎಲ್ಲರಿಗೂ ಅವಶ್ಯವಾಗಿದೆ.ಭಗೀರಥ ಸಮಾಜದ ಎಲ್ಲರು ನಿಮ್ಮ ಮಕ್ಕಳಿಗೆ ಉನ್ನತವಾದ ಶಿಕ್ಷಣವನ್ನು ಕೊಡಿಸಿ,ಕೇವಲ ಮೆಕಾಲೆ ಶಿಕ್ಷಣದಿಂದ ಹಣ ಕೆಲಸ ದೊರೆಯುತ್ತದೆ,ಆದರೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಮುಖ್ಯವಾಗಿದೆ, ಸಂಸ್ಕಾರವಂತ ಮಕ್ಕಳು ಮಹಾನ್ ವ್ಯಕ್ತಿಗಳಾಗುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗು ಸಮಾಜದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸಂಜೀವಪ್ಪ ಮುತ್ಯಾ ಚಿಕ್ಕನಹಳ್ಳಿ ರಾಮಣ್ಣ ಮುತ್ಯಾ ಚಂದಲಾಪುರ ಸಮಾಜದ ಮುಖಂಡರಾದ ಶ್ರೀನಿವಾಸ ಅಮ್ಮಾಪುರ ಗೋಪಣ್ಣ ದೊಡ್ಮನಿ ವೆಂಕಟೇಶ ನೀರಡಗಿ ಮೌನೇಶ ಎಸ್.ಡಿ.ಗೋನಾಲ ದೇವಿಂದ್ರಪ್ಪ ಸಾಹುಕಾರ ಹಾಗು ದೊಡ್ಡ ದೇಸಾಯಿ ದೇವರಗೋನಾಲ ಬಸನಗೌಡ ಅಳ್ಳಿಕೋಟಿ ಸಿದ್ದನಗೌಡ ಕರಿಬಾವಿ ಸಣ್ಣ ದೇಸಾಯಿ ಮೇಲಪ್ಪ ಗುಳಗಿ ಭೀಮಣ್ಣ ಚಿಕ್ಕನಹಳ್ಳಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಶಂಭುಲಿಂಗ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು,ಈಶ್ವರ ಶಹಾಪುರಕರ್ ನುಡಿನಮನ ಸಲ್ಲಿಸಿದರು,ಶರಣು ಮಾಲಗತ್ತಿ ಸ್ವಾಗತ ಗೀತೆ ಹಾಡಿದರು,ಅನಿಲ ಕುಮಾರ ಶಿಕ್ಷಕ ಸ್ವಾಗತಿಸಿದರು,ಶರಣು ದೇವರಗೋನಾಲ ನಿರೂಪಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ಶಂಕರ ಬಡಿಗೇರ ದೇವಿಂದ್ರಕುಮಾರ ಅಮ್ಮಾಪುರ ವಾಸುದೇವ ಸಮೇದ ಗೋವಿಂದರಾಜ ಶಹಾಪುರಕರ್ ಯಂಕಣ್ಣ ಗದ್ವಾಲ ಧರಿಯಪ್ಪ ಬೂದಿಹಾಳ ರಮೇಶ ಶಹಾಪುರಕರ್ ಚಿದಾನಂದ ಪೇಠ ಅಮ್ಮಾಪುರ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

12 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

21 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

21 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago