ಕಲಬುರಗಿ: ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳೆಂದು ಎಲ್ಲ ಕಾಲಕ್ಕೂ ಒಪ್ಪಿಕೊಂಡಿದ್ದರೂ ಕೂಡ ಅಸಮಾನತೆ ಎದ್ದು ಕಾಣುತ್ತಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ. ಎಚ್.ಟಿ. ಪೋತೆ ಅವರು ಕಳವಳ ವ್ಯಕ್ತಪಡಿಸಿದರು.
ನಗರದ ಸತ್ಯಂ ಪದವಿ ಪೂರ್ವ ಕಾಲೇಜಿನಲ್ಲಿ ಯುವ ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ. ನಾಗಪ್ಪ ಗೋಗಿ ಅವರ ಚಿಗುರು ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೈನ್ ಸಾಹಿತ್ಯದಲ್ಲಿ ಪಂಪ ಅಹಿಂಸಾ ತತ್ವವನ್ನು ಪ್ರಸ್ತಾಪಿಸುತ್ತ ಮನುಷ್ಯ ಜಾತಿ ತಾನೋಂದೇ ವಲಂ ಎಂಬುದನ್ನು ಸಾರಿದ ಸಂದೇಶ ಪ್ರತಿಯೊಬ್ಬರೂ ಅಳವಡಿಸಿಕೊರ್ಳಳುತ್ತ ಇವತ್ತಿನ ಯುವ ಬರಹಗಾರರು ಸಾಮಾಜಿಕ ಸ್ವಾಸ್ಥ್ಯವನ್ನು ಗಟ್ಟಿಗೊಳಿಸುವ ಕೃತಿಗಳನ್ನು ರಚಿಸಬೇಕು ಎಂದರು.
ಚಿಗುರು ಕೃತಿ ಕುರಿತು ಕಾವ್ಯಶ್ರೀ ಮಹಾಗಾಂವಕರ ಅವರು ಮಾತನಾಡಿ, ಡಾ. ನಾಗಪ್ಪ ಗೋಗಿ ಅವರು ಬೆಳೆದು ಬಂದ ಪರಿಸರ, ತಂದೆ, ತಾಯಿ, ಬಂಧು, ಬಳಗ, ದೇಶಪ್ರೇಮ, ನೆಲ, ಜಲ ಹಾಗೂ ಈ ಭಾಗದ ಸಾಂಸ್ಕೃತಿಕ ಸಂದೇಶಗಳನ್ನು ಸಾರುವ ಹಲವಾರು ಕವಿತೆಗಳು ಈ ಕೃತಿ ಒಳಗೊಂಡಿದೆ ಎಂದರು.
ಇಂದಿನ ಯುವ ಬರಹಗಾರರಲ್ಲಿ ಇರಬೇಕಾದ ಕಾವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ. ಅವರ ಕೃತಿಯು ಕವಿಯ ಬದುಕಿನ ಮುಖಪುಟವನ್ನು ಹೋಲುತ್ತದೆ ಎಂದು ಅವರು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿ ಬಿ.ಎಚ್. ನಿರಗುಡಿ ಅವರು ಮಾತನಾಡಿ, ಡಾ. ನಾಗಪ್ಪ ಗೋಗಿಯವರು ಇನ್ನೂ ಹತ್ತು ಹಲವಾರು ಕೃತಿಗಳನ್ನು ರಚಿಸಲಿ ಎಂದರು.
ಕಾರ್ಯಕ್ರಮದಲ್ಲಿ ೨೦೨೦ನೇ ಸಾಲಿನ ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಿ.ಎನ್. ಅಕ್ಕಿಯವರು ಕೃತಿಯನ್ನು ಬಿಡುಗಡೆ ಮಾಡಿದರು. ಪ್ರಕಾಶನ ಹಾಗೂ ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. ಸಗರ ನಾಡಿನ ಲೇಖಕರ ಸಂಘ ಹಾಗೂ ಸಂಘ, ಸಂಸ್ಥೆಗಳ ಪದಾಧಿಕಾರಿಗಳೂ ಸಹ ಅವರನ್ನು ಸನ್ಮಾನಿಸಿದರು.
ಡಾ. ನಾಗಪ್ಪ ಗೋಗಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ನಾಲವಾರ ಅವರು ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಶೃಂಗೇರಿ ಅವರು ಪ್ರಾರ್ಥನಾಗೀತೆ ಹಾಡಿದರು. ಜಿ.ಜಿ. ವಣಕಿಹಾಳ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಕಲ್ಯಾಣರಾವ ಪಾಟೀಲ, ಡಾ. ನಾರಾಯಣ ರೋಲೆಕರ, ಡಾ. ಶ್ರೀನಿವಾಸ ಸಿರನೂರಕರ, ಡಾ. ಚಿ.ಸಿ. ನಿಂಗಣ್ಣ, ಡಾ. ಸುರೇಶ ಜಾಧವ, ವೆಂಕಟೇಶ ನೀರಡಗಿ, ಡಾ. ಸೂರ್ಯಕಾಂತ ಸುಜ್ಯಾತ, ಡಾ. ಬಸವಂತರಾಯ ಜಾವಳಿ, ಡಾ. ಗವಿಸಿದ್ದಪ್ಪ ಪಾಟೀಲ, ಪ. ಮನುಸಾಗರ, ವೆಂಕಟೇಶ ನೀರಡಗಿ, ಗಣೇಶ ಚಿನ್ನಾಕಾರ, ಸುಭಾಷ ಬಾದಾಮಿ, ಸುಭಾಷ ಹಾಬಾಳಕರ, ಚಾಮರಾಜ ದೊಡ್ಡಮನಿ, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಇದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…