ಶಹಾಪುರ: ಸಗರನಾಡಿನ ಅಕ್ಷರ ಲೋಕದ ನಕ್ಷತ್ರ ಹಾಗೂ ಹಿರಿಯ ಸಾಹಿತಿ, ಡಿ.ಎನ್.ಅಕ್ಕಿ ಅವರ ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಕೊಡುಗೆ ಅಪಾರವಾದದ್ದು ಎಂದು ಹಿರಿಯ ಸಾಹಿತಿ ಹಾಗೂ ಕನ್ನಡ ಪಂಡಿತರಾದ ಡಾ.ಅಬ್ದುಲ್ ಕರೀಂ ಕನ್ಯಾಕೋಳೂರ ಹೇಳಿದರು.
ಗೋಗಿ ಗ್ರಾಮದಲ್ಲಿ ವಲಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಿ.ಎನ್.ಅಕ್ಕಿ ಅವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಹಿರಿಯ ಸಾಹಿತಿಗಳಾದ ಡಿ.ಎನ್. ಅಕ್ಕಿಯವರು ಹಲವಾರು ಯುವ ಬರಹಗಾರರಿಗೆ ಸ್ಫೂರ್ತಿಯಾಗಿದ್ದಾರೆ ಜತೆಗೆ ಸಲಹೆ ನೀಡಿ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.
ಗೋಗಿ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಲ್ಲನಗೌಡ ಪೊಲೀಸ್ ಪಾಟೀಲ ಮಾತನಾಡಿ ಸರಳ ಸಜ್ಜನಿಕೆಗೆ ಹೆಸರಾದ ಡಿ.ಎನ್. ಅಕ್ಕಿ ಯವರೆಗೆ ಸಿಕ್ಕ ಗೌರವ ಇಡೀ ಯಾದಗಿರಿ ಜಿಲ್ಲೆಗೆ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇವರು ಹಲವಾರು ಸಂಶೋಧನಾ ಕೃತಿಗಳನ್ನು ಹೆಕ್ಕಿ ತಂದು ನಾಡಿಗೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ತಿಳಿಸಿದರು
ಈ ಸಮಾರಂಭದ ವೇದಿಕೆ ಮೇಲೆ ಗ್ರಾಮದ ಹಿರಿಯರಾದ ಮಾಣಿಕರೆಡ್ಡಿ ಶಿರಡ್ಡಿ,ಚಂದಪ್ಪ ತಾಯಮ್ಮಗೋಳ,ಚಂದ್ರಶೇಖರ್ ಧೊತ್ರೆ,ಭೀಮರಡ್ಡಿ ಮಲಾರ್,ಬಸವರಾಜಪ್ಪಗೌಡ ತಂಗಡಗಿ,ಮಾನ್ ಸಿಂಗ್ ಚವಾಣ್, ಭೀಮರೆಡ್ಡಿ ಪೊಲೀಸ್ ಪಾಟೀಲ್,ಚಂದಪ್ಪ ಸೀತನಿ,ವೆಂಕಟೇಶ್,ವೀರಣ್ಣ ಧೋತ್ರೆ,ಗೌಡಪ್ಪಗೌಡ ಪರಿವಾಣ ಹಾಗೂ ಇತರರು ಉಪಸ್ಥಿತರಿದ್ದರು.
ಹೊನ್ನಾರಡ್ಡಿ ಭೈರೆಡ್ಡಿ ಪ್ರಾಸ್ತವಿಕ ಮಾತನಾಡಿದರು,ಅಂಬರೀಷ್ ಪೂಜಾರಿ ಸ್ವಾಗತಿಸಿದರು,ಶರಣು ಬೈರೆಡ್ಡಿ,ನಿರೂಪಿಸಿದರು ಗುರುನಾಥ ಮಾನು ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…