ವಾಡಿ: ಸಮೀಪದ ಕಡಬೂರ ಗ್ರಾಮದ ಭೀಮಾ ಪ್ರವಾಹ ಸಂತ್ರಸ್ತ ಕುಟುಂಬಗಳ ಮಧ್ಯೆ ಚಿತ್ತಾಪುರ ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರ ೪೨ನೇ ಜನ್ಮದಿನ ಆಚರಿಸುವ ಮೂಲಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸರಳತೆ ಮರೆದರು. ಅದ್ಧೂರಿ ಸಮಾರಂಭ ಕೈಬಿಟ್ಟು ಶಾಸಕ ಖರ್ಗೆ ಹೆಸರಿನಲ್ಲಿ ಕೇಕ್ ಮಾತ್ರ ಕತ್ತರಿಸಿ ಪ್ರವಾಹ ಸಂತ್ರಸ್ತ ನೂರಾರು ಮಕ್ಕಳಿಗೆ ಸಿಹಿ ತಿನಿಸುವ ಜತೆಗೆ ಎಣ್ಣೆ, ಸಾಬೂನು, ಟೂತ್‌ಬ್ರೆಶ್, ಟೂತ್‌ಪೇಸ್ಟ್, ಮಾಸ್ಕ್ ಸೇರಿದಂತೆ ಇನ್ನಿತರ ದಿನಬಳಕೆ ವಸ್ತುಗಳ ಕಿಟ್ ವಿತರಿಸಿ ಕಾಳಜಿ ವ್ಯಕ್ತಪಡಿಸಿದರು.
ಸರಳ ಸಮಾರಂಭ ಉದ್ದೇಶಿಸಿ ಮಾತನಾಡಿದ ರಾಯಚೂರು ಕೃಷಿ ವಿವಿ ಮಾಜಿ ನಿರ್ದೇಶಕ, ಚಿತ್ತಾಪುರ ತಾಲೂಕಿನ ಹಿರಿಯ ಕಾಂಗ್ರೆಸ್ ಮುಖಂಡ ವೀರಣ್ಣಗೌಡ ಪರಸರೆಡ್ಡಿ, ಸರಕಾರದಿಂದ ಸಾವಿರಾರು ಕೋಟಿ ರೂ. ಅನುದಾನ ತರುವ ಮೂಲಕ ಕ್ಷೇತ್ರದ ಸರ್ವಜನಾಂಗದ ಅಭಿವೃದ್ಧಿಗೆ ಮುನ್ನುಡಿ ಬರೆದು ಜಾತ್ಯಾತೀತ ನಾಯಕನಾಗಿ ಜನಪರ ಯೋಜನೆಗಳನ್ನು ಜಾರಿಗೆ ತಂದ ಪ್ರಿಯಾಂಕ್ ಖರ್ಗೆ ಅವರು ಕಲ್ಯಾಣ ನಾಡಿನ ಪ್ರಬುದ್ಧ ಯುವ ರಾಜಕಾರಣಿಯಾಗಿದ್ದಾರೆ. ಭ್ರಷ್ಟಾಚಾರ ಹಾಗೂ ಜಾತಿ ರಾಜಕಾರಣದಿಂದ ದೂರವಿದ್ದು ಎಲ್ಲರೂ ನನ್ನವರು ಎನ್ನುತ್ತ ಬುದ್ಧ, ಬಸವ ಹಾಗೂ ಅಂಬೇಡ್ಕರರ ತತ್ವದ ತಳಹದಿಯ ಮೇಲೆ ಹೆಜ್ಜೆಯಿಡುತ್ತಿರುವ ನಿಷ್ಠಾವಂತ ನಾಯಕನಾಗಿ ಪ್ರಿಯಾಂಕ್ ಹೊರಹೊಮ್ಮಿದ್ದಾರೆ. ಆಳುವ ಪಕ್ಷಗಳ ಎಡಬಿಡಂಗಿ ನೀತಿಗಳ ವಿರುದ್ಧ ಸಿಡಿಯುವ ಮೂಲಕ ಪ್ರಜಾತಂತ್ರವನ್ನು ಉಳಿಸಿದ್ದಾರೆ ಎಂದರು.
ಹಿಂದೆಂದೂ ಕಾಣದಂತಹ ಭೀಕರ ಪ್ರವಾಹದಿಂದ ತತ್ತರಿಸಿದ ಭೀಮಾನದಿ ದಂಡೆಯ ಗ್ರಾಮಸ್ಥರ ನೆರವಿಗೆ ಬರಬೇಕಾದ ರಾಜ್ಯ ಬಿಜೆಪಿ ಸರಕಾರ, ಪ್ರವಾಹಪೀಡಿತರ ಮುಂದೆ ಮೊಸಳೆ ಕಣ್ಣೀರು ಸುರಿಸಿ ಕೇವಲ ಹುಸಿ ಭರವಸೆಗಳನ್ನು ಕೊಟ್ಟಿದೆ. ಜನರು ಬದುಕು ಕಟ್ಟಿಕೊಳ್ಳಲು ತಕ್ಷಣಕ್ಕೆ ಪರಿಹಾರ ಒದಗಿಸದೆ ವಿಳಂಬ ನೀತಿ ಅನುಸರಿಸುತ್ತಿದೆ. ಯಾವೂದೇ ಕಾರಣಕ್ಕೂ ಪ್ರವಾಹ ಸಂತ್ರಸ್ತರ ಪರಿಹಾರ ವಿತರಣೆಯಲ್ಲಿ ತಡವಾಗಬಾರದು. ಬೆಳೆ ಪರಿಹಾರವೂ ಕೂಡ ಶೀಘ್ರವೇ ಪಾವತಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಅಲ್ಲದೆ ಕಡಬೂರ ಗ್ರಾಮವನ್ನು ಸ್ಥಳಾಂತರಿಸಲು ಶಾಸಕ ಪ್ರಿಯಾಂಕ್ ಖರ್ಗೆ ಒಪ್ಪಿದ್ದು, ಗ್ರಾಮಸ್ಥರು ತಮ್ಮ ನಿಲುವು ಪ್ರಕಟಿಸಬೇಕು ಎಂದು ಸಲಹೆ ನೀಡಿದರು.
ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ವಾರದ್ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಶಿವರಾಜ ಪಾಟೀಲ ತುನ್ನೂರ, ರುದ್ರುಮುನಿ ಮಠಪತಿ ಕೊಂಚೂರ, ಸಿದ್ದರಾಜ ಮದ್ರಿಕಿ, ಚಂದ್ರು ಲೇವಡಿ, ಸಂಜೀವಕುಮಾರ ಕುಲಕರ್ಣಿ, ಶರಣು ಕೆಂಚಗುಂಡಿ, ಸಂಗಣ್ಣಗೌಡ ಅಣಬಿ, ಭಾಷಾ ಪಟೇಲ ಪಾಲ್ಗೊಂಡಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…