ಯಾದಗಿರಿ: ಶಹಾಪುರ ತಾಲೂಕಿನ ಸಗರ ಗ್ರಾಮದ ಆರಾಧ್ಯದೈವ ಸರಮತ್ ಮುತ್ಯಾ ಎಂದೇ ಖ್ಯಾತಿ ಪಡೆದ ಹಜರತ್ ಸೂಫಿ ಸರಮತರ ಜಾತ್ರೆ ಸಂಭ್ರಮದಲ್ಲಿ ರಾಜ್ಯದ ವಿವಿಧಡೆಯಿಂದ ಭಕ್ತರು ಆಗಮಿಸಿ ಊರುಸ್ ನಲ್ಲಿ ಭಕ್ತರ ಭಕ್ತಿಯ ಓರತು ಸಂತೋಷ ಸಂಭ್ರಮ ಸಡಗರ ಕಾಣಲಿಲ್ಲ ದರ್ಶನ ಪಡೆದುಕೊಂಡರು.
ಸಗರನಾಡು ಭಾಗದಲ್ಲಿ ಸೂಫಿ ಸರಮತ್ ಜಾತ್ರೆ ಪ್ರಸಿದ್ಧವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಹಿಂದೆ ಹದಿನೈದು ದಿನ ನಡೆಯುವ ಜಾತ್ರೆಗೆ ಪ್ರತಿ ನಿತ್ಯ ಸಾವಿರಾರು ಜನ ಆಗಮಿಸುತ್ತಿದ್ದರು. ಪ್ರಸ್ತುತ ಒಂದು ವಾರಗಳ ಕಾಲ ನಡೆಯುವ ಜಾತ್ರೆಯಲ್ಲಿ ಜನಸ್ತೋಮ ನಿತ್ಯ ಆಗಮಿಸಿ ಸೋಫಿಸಾಬ ಮುತ್ಯಾನ ದರ್ಶನ ಪಡೆಯುತ್ತಿದ್ದರು ಆದರೆ ಈ ಭಾರೀ ಕೊರೋಣ ಮಹಾಮಾರಿ ಯಿಂದ ಅಷ್ಟೊಂದು ಭಕ್ತರು ಸೇರಿರಲಿಲ್ಲ
ಹೊರ ದೇಶದಲ್ಲಿರುವ ಭಕ್ತರು ಸಹ ಈ ಜಾತ್ರೆಗೆ ಆಗಮಿಸಿ ದರ್ಶನ ಪಡೆಯುತ್ತಿದ್ದರು. ಈ ಭಾರೀ ಹೊರದೇಶ ಭಕ್ತರಿಗೆ ಅವಕಾಶ ಇರಲಿಲ್ಲ ಇಲ್ಲಿನ ವಿಶೇಷತೆ ಎಂದರೆ ಸರಮತಸಾಬ ಸೂಫಿಗಳ ಬಾವಿಯ ನೀರನ್ನು ಬಾಟಲಿಯಲ್ಲಿ ತುಂಬಿಕೊಂಡು ಹೊರದೇಶಕ್ಕೂ ತೆಗೆದುಕೊಂಡು ಹೋಗುತ್ತಾರೆ. ಸೂಫಿಸಾಹೇಬರ ಬಾವಿಯ ನೀರು ಕುಡಿದರೆ ಯಾವುದೇ ರೋಗ ರುಜಿನಗಳು ಬರುವದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ಬಂದಿದೆ.
ಸೂಫೀ ಸರಮತಸಾಬ ದರ್ಗಾಕ್ಕೆ ಸರ್ವ ಧರ್ಮಿಯರು ಆಗಮಿಸುತ್ತಾರೆ. ಹಿಂದೂಗಳು ಸರಮತ ಸಂತರಿಗೆ ಗಲೀಫ್, ಹೂವಿನ ಚಾದಾರ್ ಸೇರಿದಂತೆ ನೈವೇದ್ಯ ಕಾಯಿ ಕರ್ಪೂರ ಅರ್ಪಿಸುವ ವಾಡಿಕೆ ಇದೆ. ಜಾತ್ರೆ ಮುಗಿದ ನಂತರವ ಪ್ರತಿ ಗುರುವಾರ ಭಕ್ತಾಧಿಗಳು ಈ ದರ್ಗಾಕ್ಕೆ ಆಗಮಿಸಿ ದರ್ಶನ ಪಡೆಯುತ್ತಿರುತ್ತಾರೆ. ಜಾತ್ರೆ ಸಂಭ್ರಮದಲ್ಲಿ ಮಹಾಮಾರಿ ಕೊರೋಣ ಕಾರದಿಂದ ದೀಡ ನಮಸ್ಕಾರಕ್ಕೆ ಅವಕಾಶ ಇರಲಿಲ್ಲ. ಸಗರನಾಡಿನ ಭಾಗದ ಬಹುದೊಡ್ಡ ಗ್ರಾಮೀಣ ಜಾತ್ರೆ ಇದಾಗಿದ್ದು, ವಿವಿಧ ಬಗೆಯ ಸಿಹಿ ತಿನಿಸು, ಬಗೆಬಗೆಯ ಜಿಲೇಬಿ, ಭಜಿ ಚುರುಮುರಿ ಸೇರಿದಂತೆ ಪರಸ್ಪರರು ಮಹಿಳೆಯರಿಗೆ ಹಸಿರು ಬಳೆ ಹಾಕಿಸುವುದು ಸಿಹಿ ತಿನಿಸು ಕೊಡಿಸುವ ಸಂಪ್ರದಾಯ ಅಷ್ಟೊಂದು ಕಂಡು ಬರಲಿಲ್ಲ.
ಒಟ್ಟಿನಲ್ಲಿ ಮಹಾಮಾರಿ ಕೊರೊನದಿಂದ ಸಂಭ್ರಮ ಎಲ್ಲಿಯೂ ಕಂಡುಬರಲಿಲ್ಲ ವ್ಯಾಪಾರಸ್ತರ ಮುಖದಲ್ಲಿಅಂತೂ ಖುಷಿಯ ಕಹಳೆ ಕಾಣಲಿಲ್ಲ ಸಗರ ಗ್ರಾಮಕ್ಕೆ ಬೇರೆ ಬೇರೆ ಗ್ರಾಮದಿಂದ ಬಂದ ಜನರ ಸಂಪರ್ಕ ಅಷ್ಟೊಂದು ಕಾಣಲಿಲ್ಲ ಅತ್ಯಂತ ಸರಳರಿತಿಯಲ್ಲಿ ಉರುಸ್ ಮುಕ್ತಾಯ ಗೊಂಡಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…