ಬಿಸಿ ಬಿಸಿ ಸುದ್ದಿ

ಮರಾಠರು ಕನ್ನಡಿಗರೇ , ಕನ್ನಡ ವಿರೋಧಿಗಳಲ್ಲ: ರಮೇಶ ಪೂಜಾರಿ

ಕಲಬುರಗಿ: ಮರಾಠರು ಕನ್ನಡಿಗರೇ ಆಗಿದ್ದಾರೆ. ಅವರು ಎಂದಿಗೂ ಕನ್ನಡ ವಿರೋಧಿಗಳಲ್ಲ . ಆದರೆ, ಕೆಲವರು ಮರಾಠರನ್ನು ಕರ್ನಾಟಕದಿಂದ ಓಡಿಸಿ ಎಂಬ ಹೇಳಿಕೆ ನೀಡುತ್ತಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾ ಕಾರ್ಯದ್ಯಕ್ಷರಾದ ರಮೇಶ ಪೂಜಾರಿ ಹೇಳಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು , ಬೆಳಗಾವಿಯ ಯಾವುದೋ ಮೂಲೆಯಲ್ಲಿ ಎಂಇಎಸ್ ನ ಪುಂಡರು ಮಾಡುವ ಚೇಷ್ಟೆಗೆ ಇಡೀ ಮರಾಠ ಸಮುದಾಯವನ್ನು ಕೇವಲವಾಗಿ ಕಾಣುವುದು ಯಾವ ನ್ಯಾಯ. ಅದಕ್ಕಾಗಿ ಕನ್ನಡಪರ ಸಂಘಟನೆಯವರು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಆಗಬಾರದು. ಮರಾಠರು ಕನ್ನಡಿಗರೇ ಆಗಿದ್ದಾರೆ ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕು ಎಂದರು.

ಮರಾಠ ಅಭಿವೃದ್ಧಿ ನಿಗಮ ರಚಿಸಿದ್ದರಿಂದ ಕೆಲ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡ ಹೋರಾಟಗಾರ ವಾಟಾಳ ನಾಗರಾಜ ರವರು ಡಿ.5 ರಂದು ಕರ್ನಾಟಕ ಬಂದ ಗೆ ಕರೆ ನೀಡಲು ಮುಂದಾಗಿದ್ದಾರೆ. ಅವರು ಸಮಗ್ರ ಕರ್ನಾಟಕದ ಮರಾಠರು. ಅವರ ಮೇಲೆ ಏಕೆ ಕಳಂಕ ಹೊರಸುತ್ತಿದ್ದಾರೆ ಎಂಬುದು ಅವರಿಗೆ ತಿಳಿಯುತ್ತಿಲ್ಲ. ಮರಾಠ ಸಮಾಜವು ಕನ್ನಡ ನಾಡು ನುಡಿಯಲ್ಲಿ ಕನ್ನಡ ಮರಾಠರಾಗಿ ಈ ನೆಲದಲ್ಲಿ ವಂಶಪಾರಂಪರೆಯಾಗಿ ಅವರು ಬದುಕು ನಡೆಸುತ್ತಿದ್ದಾರೆ.

ಬೀದರದ ಅನುಭವ ಮಂಟಪದಿಂದ ಮೈಸೂರಿನ ಬನ್ನಿ ಮಂಟಪದವರೆಗೂ , ವಿಜಯನಗರದಿಂದ ಕಿತ್ತೂರು ನಾಡಿನವರೆಗೂ , ಬೆಳಗಾವಿಯಿಂದ ಬೆಂಗಳೂರಿನವರೆಗೂ , ಕೋಲಾರ ಚಿನ್ನದ ಗಣಿಯಿಂದ ಕಾರವರವರೆಗೂ , ಕರ್ನಾಟಕದ ವಿಸ್ತೃತ ಪ್ರದೇಶದಲ್ಲಿ ಮರಾಠರು ಶತಮಾನಗಳಿಂದ ವಾಸಿಸುತ್ತಿದ್ದಾರೆ. ಕನ್ನಡತನದಿಂದ ಬಾಳ್ವೆ ಮಾಡುತ್ತಿದ್ದಾರೆ ಈ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಯಾವುದೇ ರೀತಿಯ ಬಂದ ಗೆ ಅವಕಾಶ ನೀಡಬಾರದು ಎಂದರು.

ಮಹಾರಾಷ್ಟ್ರದ ಗೃಹ ಸಚಿವ ಅಜಿತ ಪವಾರ ಹೇಳಿಕೆ ನೀಡಿರುವುದು ಖಂಡನೀಯ ನೆಲ, ಜಲ, ಭಾಷೆ ವಿಚಾರ ಬಂದರೆ ಮಹಾರಾಷ್ಟ್ರದವರಿಗೆ ಕರ್ನಾಟಕದ ಒಂದು ಇಂಚು ಜಾಗವನ್ನು ಕೂಡಾ ಅವರಿಗೆ ಬಿಡುವುದಿಲ್ಲ. ಬೆಳಗಾವಿ ನಿಪ್ಪಾಣಿ ಎಂದಿಗೂ ಕರ್ನಾಟಕದೇ ಆಗಿದೆ. ಅದನ್ನು ಉಳಿಸಿಕೊಳ್ಳಲು ಅವರು ಎಲ್ಲದಕ್ಕೂ ಸಿದ್ದರಿದ್ದಾರೆ ಎಂದರು.

sajidpress

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago