ಜೇವರ್ಗಿ: ಇಲ್ಲಿನ ಕಾಸರಬೋಸಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸೇವಾ ಶುಲ್ಕವನ್ನು ಪಾವತಿಸುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ .
ಕಳೆದ 3ವರ್ಷಗಳಲ್ಲಿ ಅಂದರೆ 2016-17 ಸಾಲಿನಿಂದ 2017-18 ಹಾಗೂ 2018-19,3ವರ್ಷಗಳ ತೊಗರಿ ,ಉದ್ದು ಹಾಗೂ ಹೆಸರು ಮಾರಾಟ ವ್ಯವಸ್ಥೆ ಮಾಡಿದ ಸೇವಾ ಶುಲ್ಕ 3333287/ರೂಪಾಯಿಗಳು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ ಕಲಬುರಗಿ ಇವರಿಂದ ಪಾವತಿಯಾಗಬೇಕಾಗಿದ್ದ ಕಮಿಷನ್ ಹಣ ಬಿಡುಗಡೆ ಮಾಡಿಲ್ಲ . ಇದರಿಂದಾಗಿ ಸಂಘಕ್ಕೆ ಹಣಕಾಸಿನ ತೊಂದರೆ ಉಂಟಾಗಿದೆ ಎಂದು ಆಗ್ರಹಿಸಿ ರೈತ ಮುಖಂಡರು ಧರಣಿ ಪ್ರಾರಂಭಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ .
ಪತ್ರದ ಮೂಲಕವೇ ಈ ಕುರಿತಂತೆ ವ್ಯವಹಾರದ ವಿವರಣೆ ನೀಡಿರುವ ಮಾಹಿತಿ ಸರಿಯಾಗಿದೆಯೇ? ಅಥವಾ ಕಾರ್ಯದರ್ಶಿಯವರು ಸಂಘದ ಗಮನಕ್ಕೆ ತಂದ ಮಾಹಿತಿ ಸರಿಯಾಗಿದೆಯೇ ?ಎನ್ನುವುದು ಗೊಂದಲಕ್ಕೆ ಈಡು ಮಾಡಿದೆ ಅಲ್ಲದೆ ಸಹಕಾರಿ ಸಂಘದ ಹಣ ದುರುಪಯೋಗವಾಗಿರುವ ಕುರಿತು ಅನುಮಾನ ಮೂಡಿಸುತ್ತಿದೆ .ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದುಈ ಕುರಿತಂತೆ ಸರಿಯಾದ ಮಾಹಿತಿ ನೀಡುವಂತೆ ಧರಣಿನಿರತರು ಆಗ್ರಹಿಸಿದರು .
ಪಿ, ಎ, ಸಿ ,ಎಸ್ ಸಹಕಾರ ಸಂಘ ಮುತ್ತಕೋಡನಲ್ಲಿ ಕಣ್ತಪ್ಪಿನಿಂದಾಗಿ ಹೆಸರು ,ಉದ್ದು ,ತೊಗರಿ ರೈತರಿಗೆ ಹಣ ಪಾವತಿಯಲಿ 3251380/-ಹೆಚ್ಚಾಗಿ ಹಣ ಪಾವತಿ ಮಾಡಲಾಗಿದೆ ಒಟ್ಟು ಸೇವಾ ಶುಲ್ಕ₹ 3333287/-ರೂಪಾಯಿಗಳು .ಈಗಾಗಲೇ ಬಿಡುಗಡೆಯಾದ ಸೇವಾ ಶುಲ್ಕ ₹ 2382877/-ರೂಪಾಯಿಗಳನ್ನು ಕಡಿತಗೊಳಿಸಿ ಇನ್ನೂ ಬಿಡುಗಡೆಯಾಗಲು ಬಾಕಿ ಇರುವ ಹಣ 950409/-ಬಿಡುಗಡೆ ಆದ ನಂತರ ,868502/-ರೂಪಾಯಿಗಳನ್ನು ಕಡಿತಗೊಳಿಸಿ ಉಳಿದ 81907/-ಮೊತ್ತ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ .ಇದು ಸತ್ಯವನ್ನು ಮರೆಮಾಚುವ ಸಂಗತಿಯಾಗಿದೆ ಎಂದು ಪ್ರತಿಭಟನಾಕರರು ವಿರೋಧಿಸಿದರು.
ಅನವಶ್ಯಕವಾಗಿ ಗೊಂದಲಗಳನ್ನು ಸೃಷ್ಟಿಮಾಡಿ ಸಂಘದ ಸೇವಾ ಶುಲ್ಕಕ್ಕೆ ಕತ್ತರಿ ಹಾಕಲಾಗಿದ್ದು, ಇಂತಹ ಅಸ್ಪಷ್ಟ ನಿಲುವುಗಳನ್ನು ಹಾಗೂ ಗೊಂದಲಗಳನ್ನು ನಿವಾರಿಸಿ ಕೂಡಲೇ ಬರುವ ಹಣವನ್ನು ಜಮಾ ಮಾಡಬೇಕು .ಗೊಂದಲಕ್ಕೆ ಕಾರಣರಾದ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕುವ ಮೂಲಕ ನ್ಯಾಯ ದೊರಕಿಸುವಂತೆ ಧರಣಿ ಆರಂಭಿಸಲಾಗಿದೆ .
ಧರಣಿ ಸತ್ಯಾಗ್ರಹದಲ್ಲಿ ನಿರ್ದೇಶಕರಾದ ಶಾಬೋದ್ದಿನ್ ಪಟೇಲ್ ಗೊಬ್ಬರವಾದಡಗಿ ,ಶಾಂತಯ್ಯ ಗವಾರ್ ,ಶಬ್ಬೀರ್ ಖಾನ್ ನಾನಗೌಡ ,ರಾಜು ವಡಿಗೇರಿ ,ಸೇರಿದಂತೆ ಸಹಕಾರಿ ಸಂಘದ ಅಧ್ಯಕ್ಷರಾದ ಹಳ್ಳೆಪ್ಪ ಆಚಾರ್ ಜೋಷಿ ಹಾಗೂ ರೈತರಾದ ಇಸಾಕ್ ಖಾನ್ ನಾಡಗೌಡ ,ಕಾಂಗ್ರೆಸ್ ಮುಖಂಡರು ಹಾಗೂ ಬಾಬು ಬಿ ಪಾಟೀಲ ಮುತ್ತಕೋಡ, ಗುರುನಾಥ್ ಸಾಹು ರಾಜವಾಳ, ಶಿವರಾಜ ಬಿರಾದಾರ, ಭೀಮರಾಯ ಬಿ ಪಾಟೀಲ ,ನಿಮಾಜಿ ರಾಠೋಡ್, ಬಾಷಾ ಪಟೇಲ್ ಗೊಬ್ಬರವಾಡಗಿ ,ಹಾಗೂ ಗ್ರಾಮಸ್ಥರಾದ ರಾಜಶೇಖರ್ ಮೈನಾಲಳ ಮಾಲಿ ,ಶಿವಶರಣಪ್ಪ ಗುತ್ತರಗಿ, ಮಾಳಪ್ಪ ಪೂಜಾರಿ ಹಾಗೂ ಹಲವಾರು ರೈತರು ಭಾಗವಹಿಸಿದ್ದರು .
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…