ಕಾಸರಬೋಸ್ಗ ಪತ್ತಿನ ಸಹಕಾರಿ ಸಂಘದ ಸೇವಾ ಶುಲ್ಕ ಪಾವತಿಗೆ ಆಗ್ರಹಿಸಿ ಧರಣಿ

0
48

ಜೇವರ್ಗಿ: ಇಲ್ಲಿನ ಕಾಸರಬೋಸಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸೇವಾ ಶುಲ್ಕವನ್ನು ಪಾವತಿಸುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ .

ಕಳೆದ 3ವರ್ಷಗಳಲ್ಲಿ ಅಂದರೆ 2016-17 ಸಾಲಿನಿಂದ 2017-18 ಹಾಗೂ 2018-19,3ವರ್ಷಗಳ ತೊಗರಿ ,ಉದ್ದು ಹಾಗೂ ಹೆಸರು ಮಾರಾಟ  ವ್ಯವಸ್ಥೆ ಮಾಡಿದ ಸೇವಾ ಶುಲ್ಕ 3333287/ರೂಪಾಯಿಗಳು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ ಕಲಬುರಗಿ ಇವರಿಂದ ಪಾವತಿಯಾಗಬೇಕಾಗಿದ್ದ ಕಮಿಷನ್ ಹಣ ಬಿಡುಗಡೆ ಮಾಡಿಲ್ಲ . ಇದರಿಂದಾಗಿ ಸಂಘಕ್ಕೆ ಹಣಕಾಸಿನ ತೊಂದರೆ ಉಂಟಾಗಿದೆ ಎಂದು ಆಗ್ರಹಿಸಿ ರೈತ ಮುಖಂಡರು ಧರಣಿ ಪ್ರಾರಂಭಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ .

Contact Your\'s Advertisement; 9902492681

ಪತ್ರದ ಮೂಲಕವೇ ಈ ಕುರಿತಂತೆ ವ್ಯವಹಾರದ ವಿವರಣೆ ನೀಡಿರುವ ಮಾಹಿತಿ ಸರಿಯಾಗಿದೆಯೇ? ಅಥವಾ ಕಾರ್ಯದರ್ಶಿಯವರು ಸಂಘದ ಗಮನಕ್ಕೆ ತಂದ ಮಾಹಿತಿ ಸರಿಯಾಗಿದೆಯೇ ?ಎನ್ನುವುದು ಗೊಂದಲಕ್ಕೆ ಈಡು ಮಾಡಿದೆ ಅಲ್ಲದೆ ಸಹಕಾರಿ ಸಂಘದ ಹಣ ದುರುಪಯೋಗವಾಗಿರುವ ಕುರಿತು ಅನುಮಾನ ಮೂಡಿಸುತ್ತಿದೆ .ಎಂದು ಪ್ರತಿಭಟನಾಕಾರರು  ಪ್ರಶ್ನಿಸಿದ್ದುಈ ಕುರಿತಂತೆ ಸರಿಯಾದ ಮಾಹಿತಿ ನೀಡುವಂತೆ ಧರಣಿನಿರತರು ಆಗ್ರಹಿಸಿದರು .

ಪಿ, ಎ, ಸಿ ,ಎಸ್ ಸಹಕಾರ ಸಂಘ ಮುತ್ತಕೋಡನಲ್ಲಿ  ಕಣ್ತಪ್ಪಿನಿಂದಾಗಿ ಹೆಸರು ,ಉದ್ದು ,ತೊಗರಿ ರೈತರಿಗೆ ಹಣ ಪಾವತಿಯಲಿ 3251380/-ಹೆಚ್ಚಾಗಿ ಹಣ ಪಾವತಿ ಮಾಡಲಾಗಿದೆ ಒಟ್ಟು ಸೇವಾ ಶುಲ್ಕ₹ 3333287/-ರೂಪಾಯಿಗಳು .ಈಗಾಗಲೇ ಬಿಡುಗಡೆಯಾದ ಸೇವಾ ಶುಲ್ಕ ₹ 2382877/-ರೂಪಾಯಿಗಳನ್ನು ಕಡಿತಗೊಳಿಸಿ ಇನ್ನೂ ಬಿಡುಗಡೆಯಾಗಲು ಬಾಕಿ ಇರುವ ಹಣ 950409/-ಬಿಡುಗಡೆ ಆದ ನಂತರ ,868502/-ರೂಪಾಯಿಗಳನ್ನು ಕಡಿತಗೊಳಿಸಿ ಉಳಿದ 81907/-ಮೊತ್ತ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ .ಇದು ಸತ್ಯವನ್ನು ಮರೆಮಾಚುವ ಸಂಗತಿಯಾಗಿದೆ ಎಂದು ಪ್ರತಿಭಟನಾಕರರು ವಿರೋಧಿಸಿದರು.

ಅನವಶ್ಯಕವಾಗಿ ಗೊಂದಲಗಳನ್ನು ಸೃಷ್ಟಿಮಾಡಿ ಸಂಘದ ಸೇವಾ ಶುಲ್ಕಕ್ಕೆ ಕತ್ತರಿ ಹಾಕಲಾಗಿದ್ದು, ಇಂತಹ ಅಸ್ಪಷ್ಟ ನಿಲುವುಗಳನ್ನು ಹಾಗೂ ಗೊಂದಲಗಳನ್ನು   ನಿವಾರಿಸಿ ಕೂಡಲೇ  ಬರುವ ಹಣವನ್ನು ಜಮಾ ಮಾಡಬೇಕು .ಗೊಂದಲಕ್ಕೆ ಕಾರಣರಾದ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ  ಹಾಕುವ ಮೂಲಕ ನ್ಯಾಯ ದೊರಕಿಸುವಂತೆ ಧರಣಿ ಆರಂಭಿಸಲಾಗಿದೆ .

ಧರಣಿ ಸತ್ಯಾಗ್ರಹದಲ್ಲಿ ನಿರ್ದೇಶಕರಾದ ಶಾಬೋದ್ದಿನ್ ಪಟೇಲ್ ಗೊಬ್ಬರವಾದಡಗಿ ,ಶಾಂತಯ್ಯ ಗವಾರ್ ,ಶಬ್ಬೀರ್ ಖಾನ್ ನಾನಗೌಡ ,ರಾಜು ವಡಿಗೇರಿ ,ಸೇರಿದಂತೆ ಸಹಕಾರಿ ಸಂಘದ ಅಧ್ಯಕ್ಷರಾದ ಹಳ್ಳೆಪ್ಪ ಆಚಾರ್ ಜೋಷಿ ಹಾಗೂ ರೈತರಾದ ಇಸಾಕ್ ಖಾನ್ ನಾಡಗೌಡ ,ಕಾಂಗ್ರೆಸ್ ಮುಖಂಡರು ಹಾಗೂ ಬಾಬು ಬಿ ಪಾಟೀಲ ಮುತ್ತಕೋಡ, ಗುರುನಾಥ್ ಸಾಹು ರಾಜವಾಳ, ಶಿವರಾಜ ಬಿರಾದಾರ, ಭೀಮರಾಯ ಬಿ ಪಾಟೀಲ ,ನಿಮಾಜಿ ರಾಠೋಡ್, ಬಾಷಾ ಪಟೇಲ್ ಗೊಬ್ಬರವಾಡಗಿ ,ಹಾಗೂ ಗ್ರಾಮಸ್ಥರಾದ ರಾಜಶೇಖರ್ ಮೈನಾಲಳ ಮಾಲಿ  ,ಶಿವಶರಣಪ್ಪ ಗುತ್ತರಗಿ, ಮಾಳಪ್ಪ ಪೂಜಾರಿ ಹಾಗೂ ಹಲವಾರು ರೈತರು ಭಾಗವಹಿಸಿದ್ದರು .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here