ಹೈದರಾಬಾದ್ ಕರ್ನಾಟಕ

ಕರವೇ ಕನ್ನಡಿಗ ಬಣ ಮರಾಠರಿಗೆ ಅಭಿವೃದ್ಧಿ ನಿಗಮಕ್ಕೆ ಬೆಂಬಲ

ಕಲಬುರಗಿ: ಕರ್ನಾಟಕ ರಾಜ್ಯದ ಮರಾಠ ಅಭಿವೃದ್ಧಿ ನಿಗಮ ಮಂಡಳಿ ಮುಂದುವರೆಸಲು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಮರಾಠಿಗರ ಸೇವೆ ಅನನ್ಯವಾಗಿದೆ. ಕನ್ನಡ ಮರಾಠಿಗರು ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ಅಭಿವೃದ್ಧಿಗೆ ಮೂಂಚುಣಿಯಲ್ಲಿದ್ದಾರೆ. ಛತ್ರಪತಿ ಶಾಹು ಮಹಾರಾಜರು ದಲಿತರಿಗೆ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ರಿಗೆ ಸಾಮಾಜಿಕ ನ್ಯಾಯದಡಿ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ನೀಡಿದ ಪ್ರಥಮ ಅರಸರಾಗಿದ್ದಾರು. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಅಂಬೇಡ್ಕರ್ ಅವರನ್ನು ಕಳಿಸಿದ್ದು ಇತಿಹಾಸವಿದೆ. ಸಾಮಾಜಿಕ ಕಂದಾಚಾರಗಳನ್ನು ಹೊಡದೂಡಿಸಿ ಸಮಾನ ಸಮಾಜ ನಿರ್ಮಿಸುವಲ್ಲಿ ಶಾಹು ಮಹಾರಾಜರ ಪಾತ್ರ ಪ್ರಮುಖವಾಗಿದೆ. ಕನ್ನಡ ಸಾಹಿತ್ಯ ಮತ್ತು ಭಾಷೆ ಬೆಳೆಸುವಲ್ಲಿ ಮರಾಠಿಗರ ಪಾಲು ಮಹತ್ವದಾಗಿದೆ ಎಂದರು.

ಭಾರತ ಬಹುಭಾಷಿಕರ, ಬಹುಧರ್ಮಿಯರ, ಬಹು ಸಂಸ್ಕ್ರತಿಯ ದೇಶವಾಗಿದೆ. ನಮ್ಮ ನಾಡಿನ ಮರಾಠಿಗರು ಕನ್ನಡಿಗರು, ಭಾಷೆ ಮತ್ತು ಸಂಸ್ಕ್ರತಿಯ ವಿಭಜನೆಯಿಂದ ದೇಶದ ಭಾವೈಕತೆಗೆ ಧಕ್ಕೆಯಾಗುತ್ತದೆ. ಆರ್ಥಿಕವಾಗಿ ಅಸಹಾಯಕರಾದ ಮರಾಠಿಗರಿಗೆ ಈ ನಿಗಮದಿಂದ ಅವರ ಜೀವನ ಸದೃಡಗೊಳ್ಳುತ್ತದೆ ಎಂದರು.

ಕನ್ನಡದ ನೆಲ,ಜಲ,ಭಾಷೆಗಾಗಿ ಕರ್ನಾಟಕದಲ್ಲಿದ್ದ ಮರಾಠಿಗರು ಯಾವತ್ತೂ ನಾಡಿಗಾಗಿ ದುಡಿದವರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಸಾರ್ವಜನಿಕ ರಜೆ ಮಾಡಿ ಆಚರಿಸುತ್ತಿರುವುದು ಸಹೋದರತೆಗೆ ಉದಾಹರಣೆಯಾಗಿದೆ. ಗಡಿ ಪ್ರದೇಶಗಳಲ್ಲಿ ಅನೇಕ ಕನ್ನಡ ಶಾಲೆಗಳು ಮಹಾರಾಷ್ಟ್ರದಿಂದ ಅನುದಾನ ಪಡೆದುಕೊಂಡಿವೆ. ಛತ್ರಪತಿ ಶಿವಾಜಿ ಮಹಾರಾಜರ ಕುಟುಂಬಸ್ಥರು ಕರ್ನಾಟಕದವರು ಎಂಬ ಸತ್ಯ ಸಂಗತಿ ಎಲ್ಲರಿಗೂ ಗೊತ್ತಾಗಲಿ. ಶಿವಾಜಿ ಮಹಾರಾಜರು ಎಲ್ಲ ಧರ್ಮಿಯರನ್ನು ಪ್ರೀತಿ , ಮಮತೆಯಿಂದ ಕಂಡು ಭಾವೈಕ್ಯತೆ ಜೀವನ ಸಾಗಿಸಿ ದೇಶಕ್ಕೆ ಮಾದರಿ ಸಾಮ್ರಾಜ್ಯ ಕಟ್ಟಿದವರು ಎಂದರು.

ಪಕ್ಷಾತೀತ ಮರಾಠ ಅಭಿವೃದ್ಧಿ ನಿಗಮಕ್ಕೆ ಕರವೇ ( ಕನ್ನಡಿಗರ ಬಣ) ಬೆಂಬಲ ನೀಡುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ತಿಳಿಸಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago