ಬಿಸಿ ಬಿಸಿ ಸುದ್ದಿ

ಲಾತೂರ- ಕಲಬುರಗಿ ರೈಲ್ವೆ ಮಾರ್ಗ: ಆಳಂದ ಶಾಸಕರೊಂದಿಗೆ ರೈಲ್ವೆ ಅಧಿಕಾರಿಗಳ ತಂಡ ಭೇಟಿ

ಆಳಂದ: ಪ್ರಸ್ತಾಪಿತ ಲಾತೂರ- ಕಲಬುರಗಿ ರೈಲ್ವೆ ಮಾರ್ಗದ ಸರ್ವೇ ಕೈಗೊಳ್ಳಲು ಮಧ್ಯ ರೈಲ್ವೆಯ ಅಧಿಕಾರಿಗಳ ತಂಡ ಬುಧುವಾರ  ಪಟ್ಟಣಕ್ಕೆ ಭೇಟಿ ನೀಡಿ ಸ್ಥಳೀಯ ಶಾಸಕ ಸುಭಾಷ್ ಆರ್ ಗುತ್ತೇದಾರ ಮತ್ತು ತಹಸೀಲದಾರ ಜೊತೆ ಚರ್ಚೆ ನಡೆಸಿತು.

ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯ ನಿರ್ದೇಶನದ ಮೇರೆಗೆ ಆಗಮಿಸಿದ್ದ ತಂಡವು ತನ್ನ ಪ್ರಸ್ತಾಪಿತ ಯೋಜನೆಯ ನೀಲನಕ್ಷೆಯನ್ನು ಸಿದ್ಧಪಡಿಸಿಕೊಂಡಿದ್ದು ಸಧ್ಯ ಸರ್ವೇ ಕಾರ್ಯ ಕೈಗೆತ್ತಿಕೊಂಡಿದ್ದು ಮುಂದಿನ ಐದಾರು ತಿಂಗಳುಗಳಲ್ಲಿ ಸರ್ವೇ ಪೂರ್ಣಗೊಳಿಸಲಿದೆ. ಸರ್ವೇಯಲ್ಲಿ ಪ್ರಮುಖವಾಗಿ ಸಾರಿಗೆ, ಕೃಷಿ ಉತ್ಪನ್ನ, ಸರಕು ಮತ್ತು ಸಾಗಾಟ, ಜನಸಂಖ್ಯೆ, ಶಾಲಾ ಕಾಲೇಜು, ಇಂಜನಿಯರಿಂಗ್ ಕಾಲೇಜು ಸೇರಿದಂತೆ ಇನ್ನಿತರ ಅಂಶಗಳನ್ನು ಪರಿಗಣಿಸಲಿದೆ ಎಂದು ಹೇಳಿತು.

ಶಾಸಕ ಸುಭಾಷ್ ಆರ್ ಗುತ್ತೇದಾರ ಮಾತನಾಡಿ, ಲಾತೂರ- ಕಲಬುರಗಿ ಮಧ್ಯದ ರೈಲ್ವೆ ಮಾರ್ಗ ಈ ಭಾಗದ ಜನರ ಬಹು ವರ್ಷಗಳ ಕನಸಾಗಿದೆ ಈ ನಿಟ್ಟಿನಲ್ಲಿ ಕ್ರಮಕೈಗೊಂಡ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಪಿಯೂಶ್ ಗೋಯಲ್, ಸಂಸದ ಭಗವಂತ ಖೂಬಾ, ಉಸ್ಮಾನಾಬಾದ್ ಸಂಸದ ರವಿ ಗಾಯಕ್ವಾಡ ಸೇರಿದಂತೆ ಇತರರಿಗೆ ಅಭಿನಂದಿಸುವುದಾಗಿ ತಿಳಿಸಿದರು.

ರೈಲ್ವೆ ಮಾರ್ಗವು ಒಟ್ಟು ೧೮೭ ಕೀ.ಮಿ ಇರಲಿದ್ದು ಆಳಂದ ತಾಲೂಕಿನ ಬಂಗರಗಾ, ಹೊನ್ನಳ್ಳಿ, ಆಳಂದ ಪಟ್ಟಣದಿಂದ ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯದವರೆಗೆ ಬಂದು ಮುಂದೆ ಸ್ಟೇಶನ್ ಬಬಲಾದ ಮಾರ್ಗ ಕೂಡಿಕೊಂಡು ಕಲಬುರಗಿ ತಲುಪಲಿದೆ. ಈಗ ನಡೆಯುತ್ತಿರುವ ಸರ್ವೇಯಲ್ಲಿ ಸಣ್ಣ ಪುಟ್ಟ ಮಾರ್ಪಾಡುಗಳನ್ನು ಮಾಡಲು ಹೇಳಿದ್ದು ಜನಹಿತದ ದೃಷ್ಟಿಯಿಂದ ಬದಲಾವಣೆ ಮಾಡಿದರೇ ತಾಲೂಕಿನ ಹೆಚ್ಚಿನ ಜನತೆಗೆ ಈ ಮಾರ್ಗದಿಂದ ಅನೂಕೂಲವಾಗಲಿದೆ ಎಂದು ತಿಳಿಸಿದರು.

ಅಧಿಕಾರಗಳ ತಂಡದಲ್ಲಿ ರೈಲ್ವೇ ಇಲಾಖೆಯ ಸರ್ವೇ ವಿಭಾಗದ ಕಾರ್ಯಾಚರಣೆಯ ಉಪ ಮುಖ್ಯಸ್ಥ ವ್ಯವಸ್ಥಾಪಕ ಸುರೇಶಚಂದ್ರ ಜೈನ, ಸಾರಿಗೆ ವಿಭಾಗದ ಮುಖ್ಯಸ್ಥರಾದ ಆರ್ ಪಿ ಗುಜ್ರಾಲ್, ಮುಖೇಶ ಲಾಲ್ ಇದ್ದರು.

ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ, ತಹಸೀಲದಾರ ಯಲ್ಲಪ್ಪ ಸುಬೇದಾರ, ಪುರಸಭೆ ಉಪಾಧ್ಯಕ್ಷ ಚಂದ್ರಕಾಂತ ಹತ್ತರಕಿ, ಮುಖಂಡರಾದ ಅಶೋಕ ಗುತ್ತೇದಾರ, ಶ್ರೀಮಂತ ನಾಮಣೆ, ಸಿ ಕೆ ಪಾಟೀಲ, ನಿಜಲಿಂಗಪ್ಪ ಕೊರಳ್ಳಿ, ಶ್ರೀಶೈಲ ಖಜೂರಿ, ಮಲ್ಲಿಕಾರ್ಜುನ ಕಂದಗೂಳೆ, ಮೃತ್ಯುಂಜಯ ಆಲೂರ, ಶ್ರೀಶೈಲ ಪಾಟೀಲ ಸೇರಿದಂತೆ ಇತರರು ಇದ್ದರು.

ಲಾತೂರ- ಕಲಬುರಗಿ ಮಾರ್ಗ ಆರಂಭವಾಗುವುದರಿಂದ ದೂರದ ಹುಬ್ಬಳ್ಳಿ ಧಾರವಾಡ, ಕಾರವಾರ ಮತ್ತು ಬೆಳಗಾವಿ ನಮಗೆ ಸಮೀಪವಾಗಲಿವೆ. ಈ ಭಾಗದಲ್ಲಿ ಸಿಮೆಂಟ್ ಉದ್ಯಮ ವ್ಯಾಪಕವಾಗಿರುವುದರಿಂದ ಮಹಾರಾಷ್ಟ್ರಕ್ಕೆ ಗೂಡ್ಸ್ ರೈಲಿನ ಮೂಲಕ ವ್ಯಾಪಾರ ವಹಿವಾಟು ಆರಂಭ ಮಾಡಬಹುದು- ಸುಭಾಷ್ ಆರ್ ಗುತ್ತೇದಾರ, ಶಾಸಕರು, ಆಳಂದ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago