ಸ್ವದೇಶಿ ಅಂದರೆ ನಮ್ಮ ಬದುಕು, ನಮ್ಮ ಉಸಿರು, ನಮ್ಮತನವವನ್ನು ಬದುಕಿನಲ್ಲಿ ಅನುಸರಿಸುವುದೆ ಸ್ವದೇಶಿ ಎಂದು. ಸಾವಿನ ಮನೆಗೂ ಅದನ್ನು ಜೊತೆಯಲ್ಲೆ ಕೊಂಡೊಯ್ದಿದ ಸ್ವಾಭಿಮಾನಿ ರಾಜೀವ್ ದೀಕ್ಷಿತ್ ಅವರು. ವಿದೇಶಿ ವ್ಯಾಮೋಹ ದಿಂದ ಹೊರಗೆ ಬರಬೇಕು. ಕಣ್ಣು ನಿಚ್ಚಳ ಮಾಡಿಕೊಂಡು ವಿದೇಶಿ ವ್ಯಾಮೋಹ ದಿಂದ ಕೊಳೆತು ನಾರುತ್ತಿರುವ ವ್ಯವಸ್ಥೆಯನ್ನು ಗಮನಿಸಿ, ಇದರ ವಿರುದ್ಧ ಹೋರಾಟ ಮಾಡುತ್ತಾ ನಮ್ಮನ್ನು ಆವರಿಸಿರುವ ವಿದೇಶಿ ಸಂಸ್ಕೃತಿ, ವಿದೇಶ ಜೀವನಶೈಲಿ, ತಂತ್ರಜ್ಞಾನದ ಭೂತ ಇವುಗಳ ವಿರುದ್ಧ ಹೋರಾಟ ಮಾಡುತ್ತಾ, ನಿಯಂತ್ರಣ ಸಾಧಿಸವುದೇ ನೈಜ ಸ್ವರಾಜ್ಯ ಎಂದು ಸ್ವದೇಶಿ ತನಕ್ಕೆ ಹೊಸ ನಾಂದಿಯನ್ನು ಹಾಡಿದ ರಾಜೀವ್ ದೀಕ್ಷಿತ್ ಅವರ ಇಂದು53ನೇ ಜನ್ಮದಿನ ಹಾಗು ಹತ್ತನೇ ವರ್ಷದ ಪುಣ್ಯಸ್ಮರಣೆ. ಉತ್ತರಪ್ರದೇಶದ ಪ್ರಯಗ್ರಾಜ್ ಎಂಬ ಗ್ರಾಮದಲ್ಲಿ 30 ನವೆಂಬರ್ 1967 ರಂದು ರಾಜೀವ್ ದೀಕ್ಷಿತ್ ಅವರು ಜನಿಸಿದರು.
m-tech ಪದವಿಯನ್ನು ಉಪಗ್ರಹ ದೂರಸಂಪರ್ಕ ವಿಷಯದ ಮೇಲೆ ಡಾಕ್ಟರೇಟ್ ಪಡೆದುಕೊಂಡು, ವಿಜ್ಞಾನಿಯಾಗಿ ಉನ್ನತ ಶಿಕ್ಷಣವಂತರಾಗಿದ್ದ ರಾಜೀವ್ ದೀಕ್ಷಿತ್ ಅವರು ಒಂದು ಸಲ 1984 ಭೂಪಾಲ್ ಅನಿಲ ದುರಂತದ ಬಗ್ಗೆ ಇದರಿಂದ ಲಕ್ಷಾಂತರ ಜನರು ನರಳುತ್ತಿರುವ ವಿಷಯದ ಬಗ್ಗೆ ಗೊತ್ತಾದ ಸಂದರ್ಭದಲ್ಲಿ ತಮ್ಮ ವೃತ್ತಿ ತಮ್ಮ ವೈಯಕ್ತಿಕ ಬದುಕು ಬದಿಗೊತ್ತಿ, ಯೂನಿಯನ್ ಕಾರ್ಬೈಡ್ ಕಂಪನಿಯನ್ನು ಭಾರತದಿಂದ ಹೊಡೆದೋಡಿಸಬೇಕು ಎಂದು ನಾಲ್ಕು ಜನ ಸೇರಿ ಒಂದು ಆಂದೋಲನ ಪ್ರಾರಂಭಿಸಿದರು, ಅದೇ ಆಜಾದಿ ಬಚಾವೋ ಆಂದೋಲನ, ಈ ಆಂದೋಲನದ ಮುಖಾಂತರ ಯೂನಿಯನ್ ಕಾರ್ಬೈಡ್ ಕಂಪನಿಯನ್ನು ಭಾರತದಿಂದ ಹೊಡೆದೋಡಿಸಲು ಯಶಸ್ವಿಯಾಯಿತು, ಮುಂದೆ ಸುತ್ತಮುತ್ತಲಿನ ಎಲ್ಲಾ ಗ್ರಾಮದ ಜನರನ್ನು ಒಟ್ಟುಗೂಡಿಸಿ ಜನಾಂದೋಲನ ಮಾಡುತ್ತಾ ವಿದೇಶಿ ತನದ ಮೋಸ, ಸ್ವದೇಶಿ ಸಮೃದ್ಧ ಭಾರತದ ಪರಿಕಲ್ಪನೆಯನ್ನು ಸಾರುವ ಕಾರ್ಯ ಮುಂದುವರೆದಿತ್ತು. ಹೀಗೆ ಭಾರತವನ್ನು ಹಲವು ರೀತಿಗಳಲ್ಲಿ ದೋಚುತ್ತಿರುವ ವಿದೇಶಿ ಕಂಪನಿಗಳ ಮತ್ತು ಅವರ ಭಾರತೀಯ ದೂರ್ತರ ವಿರುದ್ಧ ಆಂದೋಲನ ಗಟ್ಟಿಗೊಳಿಸಿದರು.
ಭಾರತೀಯ ತತ್ವಗಳ ಆಧಾರದ ಮೇಲೆ ಭಾರತವನ್ನು ಪುನರ್ ನಿರ್ಮಾಣ ಮಾಡಬೇಕೆಂದು ಪಣತೊಟ್ಟಿದ್ದ ನಾಲ್ಕು ಜನರಿಂದ ಪ್ರಾರಂಭವಾದ ಆಂದೋಲನ ದೇಶಾದ್ಯಂತ ವ್ಯಾಪಿಸಿತು, ಆಂದೋಲನದ ಮುಖಾಂತರ ಇಡೀ ರಾಷ್ಟ್ರದ ತುಂಬಾ ಯುವಕರ ಪಡೆಯನ್ನು ಹೊಂದಿದಂತಹ ರಾಜೀವ್ ದಿಕ್ಷಿತ್ ಅವರು “ನಮಗೆ ಓಟು ಬೇಡ ನೋಟು ಬೇಡ ನಿಮ್ಮ ಸಹಕಾರ ಒಂದೇ ಸಾಕು” ಎಂದು ಸಂಚರಿಸುತ್ತಿದ್ದರು. ಅವರಲ್ಲಿ ಇದ್ದಂತ ಸಂಘಟನೆಯ ಶಕ್ತಿ ಸ್ವದೇಶಿ ಚಿಂತನೆ ತುಂಬಾ ವಿಶಿಷ್ಟವಾಗಿತ್ತು, 2000ನೇ ವರ್ಷದಲ್ಲಿ ಕಲಬುರ್ಗಿಯಲ್ಲಿ ಶಾಲಾ ಕಾಲೇಜುಗಳಲ್ಲಿ ಸ್ವದೇಶಿ ಚಿಂತನೆಯ ಬಗ್ಗೆ ಉಪನ್ಯಾಸ ನೀಡುತ್ತಾ, ಇಲ್ಲಿ ಅನೇಕ ಸ್ವದೇಶಿಯ ಆಂದೋಲನಗಳ ಮುಖಾಂತರ ನಮ್ಮೆಲ್ಲರ ಮನದಲ್ಲಿ ವಾಸವಾಗಿದ್ದರು, ನಾನು ಅವರ ಜೊತೆ ಸುಮಾರು ವರ್ಷಗಳ ಕಾಲ ಆಂದೋಲನದಲ್ಲಿ ಕೆಲಸ ಮಾಡುವಂತ ಸುದೈವ ನನಗೆ ಲಭಿಸಿತ್ತು. ಈ ಒಂದು ಭಾಗದಲ್ಲಿ ಆಂದೋಲನದ ಪ್ರವಾಸ ಇದ್ದರೆ ಆಂದೋಲನದಲ್ಲಿ ತೊಡಗಿಸಿಕೊಂಡಿರುವಂತ ಎಲ್ಲರಿಗೂ 25 ಪೈಸೆಯ ಪೋಸ್ಟ್ ಕಾರ್ಡ್ ಮುಖಾಂತರ ಸ್ವತಃ ತಾವೇ ಸಹಿ ಮಾಡಿ ಎಲ್ಲರಿಗೂ ಅಂಚೆಯ ಮೂಲಕ ಮಾಹಿತಿ ತಿಳಿಸಿ ಕಾರ್ಯಕ್ರಮ ಜೋಡಣೆ ಮಾಡುತ್ತಿದ್ದರು.
ಕಲಬುರಗಿ ಬೀದರ್ ಬಿಜಾಪುರ್ ರಾಯಚೂರು ಮುಂತಾದ ಭಾಗದಲ್ಲಿ ಸಂಚರಿಸಿ ಸ್ವದೇಶಿ ಆಂದೋಲನ ಕುರಿತು ಭಾಷಣ ಮಾಡುತ್ತಾ ಯುವಕರ ಮನದಲ್ಲಿ ಸ್ವದೇಶೀಯ ಕಿಚ್ಚುನ್ನು ಹೊತ್ತಿಸಿ ಸ್ವದೇಶಿ ಜೀವನ ಶೈಲಿಯನ್ನು ಹೇಳಿಕೊಟ್ಟರು ಸ್ವದೇಶಿ ವಸ್ತುಗಳನ್ನೇ ಬಳಸಿ, ಖಾದಿ ಬಟ್ಟೆಗಳನ್ನೇ ತೊಡಿ ಮಾತೃಬಭಾಷೆಯಲ್ಲಿ ಮಾತನಾಡಿ ಎನ್ನುತ್ತಾ ಸಾಗುತ್ತಿದ್ದರು.
ಸಾವಯವ ಕೃಷಿಯ ಬಗ್ಗೆ, ಆಯುರ್ವೇದದ ಬಗ್ಗೆ, ಗೋ ಸಂಪತ್ತಿನ ರಕ್ಷಣೆಯ ಬಗ್ಗೆ ವಿದೇಶಿಯ ಕಂಪನಿಗಳ ಆಕ್ರಮಣದ ಬಗ್ಗೆ, ಉದಾತ್ತವಾದ ರಾಷ್ಟ್ರೀಯ ವಾದಗಳನ್ನು ಮುಂದಿಟ್ಟುಕೊಂಡು ಮಹಾತ್ಮ ಗಾಂಧೀಜಿಯವರ ಸ್ವರಾಜ್ಯ ಗ್ರಾಮಗಳ ಭಾರತಕ್ಕೆ ಬಡಿದಾಡಿದರು, ತಮ್ಮ ಒಂದು ಸ್ವದೇಶ ಚಿಂತನೆಗೆ ಇನ್ನಷ್ಟು ವಿಸ್ತರವಾದ ಸಾಮಾಜಿಕ-ರಾಜಕೀಯ ತಳಹದಿ ನೀಡುವ ಉದ್ದೇಶದಿಂದ ಪತಂಜಲಿಯ ಬಾಬಾ ರಾಮದೇವ್ ಜೊತೆ ಸೇರಿಕೊಂಡು ಆಜಾದಿ ಬಚಾವೋ ಆಂದೋಲನವನ್ನು ಭಾರತ್ ಸ್ವಾಭಿಮಾನ್ ಟ್ರಸ್ಟ್ ಎಂದು ಹುಟ್ಟುಹಾಕಿ, ಭಾರತದಲ್ಲಿ ಭಾರತೀಯತೆಯನ್ನು ಭದ್ರವಾಗಿಸಲು ಶ್ರಮಿಸಿದರು, ಛತ್ತೀಸ್ಗಡದ ಬಿಲಾಯಿ ಎಂಬಲ್ಲಿ 2010 ನವಂಬರ್ 30ರಂದು 43ನೇ ಜನ್ಮದಿನದಂದೇ ಎದೆ ನೋವು ಕಾಣಿಸಿಕೊಳ್ಳುತ್ತದೆ ತಮ್ಮ ಜೀವಕ್ಕೆ ಅಪಾಯ ಇದೆ ಅನ್ನೋದು ತಕ್ಷಣ ಅವರಿಗೆ ಗೊತ್ತಾಗುತ್ತದೆ, ಅಲ್ಲಿದ್ದ ಕೆಲ ವೈದ್ಯರು ಇಂಜೆಕ್ಷನ್ ಕೊಡಲು ಬಂದಾಗ ಅದನ್ನು ತಿರಸ್ಕರಿಸಿ ಇಂಗ್ಲಿಷ್ ಔಷಧಿ ಬೇಡ ಎಂದು ಸ್ವದೇಶೀ ದೀಕ್ಷೆ ಯಿಂದಲೇ ರಾಜೀವ್ ದೀಕ್ಷಿತ್ ನಮ್ಮಿಂದ ದೂರ ಸಾಗಿದರು.
ಮರಣೋತ್ತರ ಪರೀಕ್ಷೆಗೆ ಒಳಪಡದ ಅವರ ಶರೀರ..! ಅವರ ಸಾವಿನ ಬಗ್ಗೆ ಸಂಶಯ ಇನ್ನೂ ನಮ್ಮಲ್ಲಿ ಮನೆಮಾಡಿದೆ ಅವರು ಕಂಡಂತೆ ಸ್ವದೇಶಿ ಚಿಂತನೆ ಇನ್ನು ಹೆಚ್ಚೆಚ್ಚು ಹುತ್ತಿ ಬಿತ್ತುವಂತ ಜವಾಬ್ದಾರಿ ಅವರ ಸುಮಾರು ಭಾಷಣಗಳ ಸಿಡಿಗಳು, ಯೂಟ್ಯೂಬ್ ವಿಡಿಯೋಗಳು, ಪುಸ್ತಕಗಳು ನಮ್ಮನ್ನು ಎಚ್ಚರಿಸುತ್ತಿವೆ, ಅದರಂತೆ ಅನೇಕರು ಅವಗಳಿಂದ ಪ್ರಭಾವಿತರಾಗಿ ಸ್ವದೇಶಿ ಚಿಂತನೆಗಳಿಗೆ ಹೊಸ ಹೊಸ ಆಯಾಮಗಳನ್ನು ನೀಡಿ ಬದುಕುತ್ತಿರುವುದನ್ನು ಇಂದು ಕಾಣುತ್ತಿದ್ದೇವೆ. ಅವರ ಜೊತೆಗಿನ ಒಡನಾಟ ಅವರ ದೇಶಭಕ್ತಿಯ ಮಾತುಗಳು ವಿದೇಶಿ ಕಂಪನಿಯ ಬಾಟಲ್ ನೀರನ್ನು ಕುಡಿಯದೇ ಹನಿ ನೀರಿಗಾಗಿ ಹಪಹಪಿಸಿ ಸುತ್ತಾಡಿದ್ದು ಇನ್ನೂ ನನ್ನ ಕಣ್ತುಂಬಿದ್ದು ಮರೆಯುವಂತಿಲ್ಲ ರಾಜೀವ್ ಭಾಯ್ ದೀಕ್ಷಿತ್ ಅವರ ಕನಸಿನ ಭಾರತಕ್ಕೆ 53ನೇ ಜನ್ಮದಿನಾಚರಣೆ ಹಾಗೂ ಹತ್ತನೇ ಪುಣ್ಯಸ್ಮರಣೆಯಾದ ಇಂದು ನಾವೆಲ್ಲಾ ಸ್ವದೇಶಿ ತನಕ್ಕೆ ಕಟಿಬದ್ಧರಾಗಿ ಪಣತೊಡೋಣ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…