ಬಿಸಿ ಬಿಸಿ ಸುದ್ದಿ

ಇಂದು ಜಗತ್ತಿಗೆ ಬೇಕಾಗಿರುವುದು ಬಸವಧರ್ಮ: ಗೋವಿಂದ ಕಾರಜೋಳ

ಬಸವಕಲ್ಯಾಣ: ವಿಶ್ವಬಸವಧರ್ಮ ಟ್ರಸ್ಟ್ ಅನುಭವಮಂಟಪ ಬಸವಕಲ್ಯಾಣ ಆಶ್ರಯದಲ್ಲಿ ೪೧ ನೇ ಶರಣಕಮ್ಮಟ ಅನುಭವಮಂಟಪ ಉತ್ಸವ-೨೦೨೦ ರ ಭಾಗವಾಗಿ ಅನುಭವಮಂಟಪ: ಅಂದು-ಇಂದು ಮತ್ತು ಎಂದೆಂದೂ ವಿಷಯ ಕುರಿತಾಗಿ ಗೋಷ್ಠಿ-೧ ಆಯೋಜಿಸಲಾಗಿತ್ತು.

ಈ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಸ್ವಗುರು ಬಸವತಂದೆಯವರು ೧೨ನೇ ಶತಮಾನದಲ್ಲಿ ಜಾತಿ ಲಿಂಗಭೇದ ವಿರಹಿತವಾಗಿರುವ ಹೊಸಧರ್ಮವನ್ನು ಕೊಟ್ಟರು ಅದುವೇ ಬಸವ ಧರ್ಮ ಅನ್ನುವ ಲಿಂಗಾಯತ ಧರ್ಮ. ಇಂದು ಜಗತ್ತಿಗೆ ಬಸವಧರ್ಮ ಬೇಕಾಗಿದೆ. ಬಸವಾದಿ ಶರಣರ ವಚನಗಳಲ್ಲಿ ಅಡಗಿರುವ ತತ್ವಗಳನ್ನು ಇಂದು ಅಂತರಾಷ್ಟ್ರೀಯ ಮಟ್ಟದ ಯು.ಎನ್.ಓ ಸಂಸ್ಥೆಯನ್ನು ಒಪ್ಪಿಕೊಂಡು ಜಗತ್ತಿನಾದ್ಯಂತ ಆಚರಣೆಯಲ್ಲಿ ತರುವುದಕ್ಕಾಗಿ ಪ್ರಯತ್ನಶೀಲವಾಗಿದೆ. ಶರಣರ ಕಾಯಕ ಮತ್ತು ದಾಸೋಹ ತತ್ವಗಳು ವಿಶ್ವದ ಅಮೂಲ್ಯ ಕೊಡುಗೆಗಳಾಗಿವೆ. ಈ ಮೂಲಕ ಆರ್ಥಿಕ ಸಮಾನತೆ ತರುವಲ್ಲಿ ಶರಣರ ಕ್ರಾಂತಿ ಯಶಸ್ವಿಯಾಗಿದೆ ಆ ಮೂಲಕ ವಿಶ್ವದ ಪ್ರತಿಯೊಬ್ಬ ಮಾನವನಿಗೆ ಬೇಕಾದ ವಚನ ಸಾಹಿತ್ಯ ವಿಶ್ವಮಾನ್ಯವಾಗಿದೆ. ನಾವು ಬಸವಾದಿ ಶರಣರ ಚಿಂತನೆಗಳನ್ನು ನಂಮ್ಮಿಂದಲೇ ಆಚರಣೆಯಲ್ಲಿ ತರುವ ಮೂಲಕ ೯೦೦ ವರ್ಷಗಳ ನಂತರವಾದರು ಬಸವಣ್ಣನವರ ಕನಸಿನ ಸಮಾಜವನ್ನು ನಿರ್ಮಿಸಿದರೆ ಜಗತ್ತೇ ಬಸವಮಯವಾಗುತ್ತದೆ ಎಂದರು.

ಗೋಷ್ಠಿಯ ವಿಷಯ ಕುರಿತಾಗಿ ಖ್ಯಾತ ಚಲನಚಿತ್ರ ನಟ ಚೇತನಕುಮಾರ ಬೆಂಗಳೂರು ಇವರು ಶರಣರ ಕ್ರಾಂತಿಯ ನಾಲ್ಕು ಮೂಖ್ಯ ಉದ್ದೇಶಗಳನ್ನು ಕುರಿತು ಮಾತನಾಡಿದರು. ಒಂದು ಶರಣರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ರೀತಿ ಅನುಪಮವಾದದ್ದು. ೧೨ನೇ ಶತಮಾನದಲ್ಲಿ ಬಸವಣ್ಣನವರ ಕ್ರಾಂತಿಯಲ್ಲಿ ಭಾಗಿಯಾದ ಶರಣರು ಹಿಂದುಳಿದ ಶೋಷಿತ ವರ್ಗದಿಂದ ಬಂದಿದ್ದರು. ಅವರೆಲ್ಲರನು ಅಪ್ಪಿಕೊಂಡು ಸಮಾನತೆಯನ್ನು ಸಾರಿದರು. ಸಹಭೊಜನದ ಜೊತೆಗೆ ಸಹ ಜೀವನವನ್ನು ನಡೆಸಲಿಕ್ಕೆ ಶರಣರು ಮಾಡಿದ ಕ್ರಾಂತಿ ಅಪೂರ್ವವಾದದ್ದು. ಎರಡನೇಯದ್ದು ಶರಣರು ಲಿಂಗಭೇದದ ವಿರುದ್ಧ ಧ್ವನಿ ಎತ್ತಿದರು. ಹೆಣ್ಣು ಶುದ್ರ ಅಲ್ಲ, ರಕ್ಕಸಿ ಅಲ್ಲ, ಮಾಯೆ ಅಲ್ಲ ಪ್ರತ್ಯಕ್ಷ ಕಪೀಲ ಮಲ್ಲಿಕಾರ್ಜುನ ಎನ್ನುವ ಎತ್ತರಕ್ಕೆ ಶರಣರು ಲಿಂಗ ಸಮಾನತೆಯನ್ನು ನೀಡಿದರು.

ಮೂರನೆಯದ್ದು ದೇವ ಮತ್ತು ಭಕ್ತರ ನಡುವೆ ಇರುವ ಪೂರೋಹಿತ ಶಾಹಿಯನ್ನು ಕಿತ್ತು ಹಾಕಿ ದೇವರ ಜೋತೆಗೆ ಭಕ್ತನ ನೇರ ಸಂವಾದಕ್ಕೆ ಇಷ್ಟಲಿಂಗವನ್ನು ನೀಡಿದರು. ನಾಲ್ಕನೆಯದ್ದು ಶರಣರು ಜನಭಾಷೆಯಾಗಿರುವ ಕನ್ನಡದಲ್ಲಿ ವಚನಗಳನ್ನು ಬರೆಯುವ ಮೂಲಕ ದೇವ ಭಾಷೆಯಾಗಿರುವ ಸಂಸ್ಕೃತ ಭಾಷೆಯ ವರ್ಚಸ್ಸನ್ನು ನಿರಾಕರಿಸಿರು. ಅಂದಿನ ಕಾಲದಲ್ಲಿ ಇಂತಹ ಪರಿವರ್ತನೆ ತರುವುದು ಅಷ್ಟು ಸುಲಭದ ಮಾತಲ್ಲ. ಅದನ್ನು ಬಸವಾದಿ ಶರಣರು ಅನುಭವಮಂಟಪ ಮೂಲಕ ಸಮಾನತೆ ತತ್ವ ಜಾರಿಗೆ ತಂದು ಅಸ್ಪೃಶ್ಯತೆ ನಿರ್ಮೂಲನೆ ಮಾಡಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಅವರ ವಚನಗಳು ಮೂಢನಂಬಿಕೆ ನಿರ್ಮಿಸುವಲ್ಲಿ ಮತ್ತು ನಿಜವಾದ ದೇವರ ಕಲ್ಪನೆ ಕೊಡುವಲ್ಲಿ ಸಮರ್ಥವಾಗಿವೆ ಎಂದರು. ಶರಣು ವಿಶ್ವ ವಚನ ಫೌಂಡೇಷನ್ ಮೈಸೂರಿನ ಡಾ.ವಚನಕುಮಾರ ಸ್ವಾವಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ನುಡಿ ಉಳಿಸಿ ಬೆಳೆಸಿದ ಕೀರ್ತಿ ಡಾ.ಚನ್ನಬಸವ ಪಟ್ಟದ್ದೇವರ ಸಲ್ಲುತ್ತದೆ. ಅನುಭವಮಂಟಪ ನಿರ್ಮಿಸಿ ಆ ಮೂಲಕ ಶರಣ ಸಂಸ್ಕೃತಿ ಬೆಳೆಸಿದ ಕೀರ್ತಿ ಈ ಮಠಕ್ಕೆ ಸಲ್ಲುತ್ತದೆ ಎಂದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ, ಕಲುಬುರಗಿಯ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಗೋಷ್ಠಿ ಅಧ್ಯಕ್ಷತೆ ವಹಿಸಿ ಜನಕಲ್ಯಾಣದ ತಪೋಭೂಮಿಯಾಗಿ ಬಸವಕಲ್ಯಾಣವನ್ನು ಪರಿವರ್ತಿಸಿದ ಶರಣರ ಕಾರ್ಯ ಎಂದೆಂದಿಗೂ ಮರೆಯುವಂತಿಲ್ಲ. ಬದುಕಿನ ಸಾರ್ಥಕತೆಗೆ ವಚನಗಳು ದಾರಿದೀಪವಾಗಿವೆ. ಈ ವಚನಗಳ ಪರಂಪರೆ ಇನ್ನೂ ಮುಂದುರೆದಿರುವುದು ಉತ್ತಮ ಬೆಳೆವಣಿಗೆಯಾಗಿದೆ. ಆ ನಿಟ್ಟಿನಲ್ಲಿ ಸಿದ್ಧಯ್ಯ ಪುರಾಣಿಕ ಮುಂತಾದವರನ್ನು ಸ್ಮರಿಸಬಹುದು. ನಾಡಿನ ಪ್ರತಿಯೊಂದು ಸಮುದಾಯದ ಜೊತೆಗೆ ಪ್ರೀತಿಯನ್ನು ಗಳಿಸುವಲ್ಲಿ ಲಿಂಗಾಯತರು ಒಗ್ಗೂಡಿದಾಗ ಶರಣರ ಶ್ರಮ ಸಾರ್ಥಕವಾಗುವುದು ಎಂದರು.

ಈ ಗೋಷ್ಠಿಯ ಸನ್ನಿಧಾನ ವಹಿಸಿದ್ದ ಸಾಣೇಹಳ್ಳಿ ತರಳಬಾಳು ಶಾಖಾಮಠದ ಪೂಜ್ಯ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶರಣರ ಪಾರಿಭಾಷಿಕ ಶಬ್ದಗಳಾದ ಕಾಯಕ-ದಾಸೋಹ-ಅಂತರಂಗ ಶುದ್ಧಿ, ಬಹಿರಂಗಶುದ್ಧಿ ಇತ್ಯಾದಿ ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಸಹಾಯಕವಾಗಿವೆ. ಅನುಭವಮಂಟಪ ಪದ ಬಳಕೆಯಾದದ್ದು ಶರಣೆ ನೀಲಮ್ಮನವರ ವಚನದಲ್ಲಿ ಕಾಣಬಹುದು. ಆ ಮೂಲಕ ಸುಜ್ಞಾನವೆಂಬ ಬೆಳಕು ವಿಶ್ವದೆಲ್ಲೆಡೆ ಹರಡಿತು. ಲಿಂಗದೀಕ್ಷೆ ಪಡೆದವರು ಶರಣರ ಸಂಸ್ಕೃತಿ ಅಳವಡಿಸಿಕೊಂಡು ಸಾರ್ಥಕವಾಗಿ ಬದುಕಿದರು.

ಉತ್ತಂಗಿ ಚನ್ನಪ್ಪನವರು ಅನುಭವಮಂಟಪದ ವಾಸ್ತವತೆ ಕುರಿತು ತಿಳಿಸಿದ್ದು ಮಹತ್ವ ಪಡೆದಿದೆ. ಭಕ್ತಿಯ ಶಕ್ತಿ ಬಸವಣ್ಣನವರಾಗಿದ್ದು ಅರಿವು ಆಚಾರದ ಬೆಳೆ ಬೆಳೆದರು. ಹಾರಕೂಡ ಸಂಸ್ಥಾನ ಹಿರೇಮಠದ ಪೂಜ್ಯ ಡಾ.ಚನ್ನವೀರ ಶಿವಾಚಾರ್ಯ ಸ್ವಾಮಿಗಳು ಬಸವಭಕ್ತಿ ಇಲ್ಲದ ಜೀವನ ವ್ಯರ್ಥ ಎನಿಸುತ್ತದೆ. ನಮ್ಮ ಒಂದು ರಾಷ್ಟ್ರಕ್ಕೆ ಅಲ್ಲ ಇಡೀ ವಿಶ್ವಕ್ಕೆ ಬೇಕಾದ ಸಾಹಿತ್ಯ ಶರಣರ ವಚನ ಸಾಹಿತ್ಯವಾಗಿದೆ ಎಂದರು. ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಡಾ.ಶಿವಾನಂದ ಮಹಾಸ್ವಾಮಿಗಳು ಬಸವಾದಿ ಶರಣರ ಅನುಭವಮಂಟಪವು ವಿಶ್ವದ ಪ್ರಥಮ ಸಂಸತ್ತು ಎನಿಸಿದೆ ಎಂದರು.

ಅನುಭವಮಂಟಪ ಸದಸ್ಯ ರವಿ ಕೊಳಕೂರು ಸ್ವಾಗತಿಸಿದರು. ಶಿವಕುಮಾರ ಪಾಂಚಾಳ ಮತ್ತು ಸಂಗಡಿಗರಿಂದ ವಚನ ಸಂಗೀತ ನಡೆಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago